LIVE TV StateNationalPoliticsCrimeEntertainmentSportsEducationFINANCE & TAXATION
Districts Bangalore

ಎಸ್.ಸಿ.ಪಿ – ಎಸ್.ಟಿ.ಪಿ ಹಣ ವಾಪಸ್, ರಾಜಕೀಯದಲ್ಲೂ ಒಳಮೀಸಲಾತಿಗೆ ಡಿಎಸ್ಎಸ್ ಒತ್ತಾಯ: ಸಚಿವ ಮುನಿಯಪ್ಪಗೆ ಮನವಿ

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವ ಎಸ್.ಸಿ.ಪಿ – ಎಸ್.ಟಿ.ಪಿ  ಅನುದಾನವನ್ನು ಹಿಂಪಡೆಯಬೇಕು, ರಾಜಕೀಯದಲ್ಲೂ ಒಳಮೀಸಲಾತಿ ಜಾರಿಗೊಳಿಸಿ, ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಹೆಣ್ಣೂರ್ ಶ್ರೀನಿವಾಸ್ ದಲಿತ ಸಂಘರ್ಷ ಸಮಿತಿ ನಿಯೋಗ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿತು.

ಡಿಎಸ್ಎಸ್ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ನೇತೃತ್ವದ ನಿಯೋಗ ಸಚಿವರನ್ನು ಭೇಟಿಯಾಗಿ ಸಮುದಾಯದ ಜ್ವಲಂತ ಸಮಸ್ಯೆಗಳು ಮತ್ತು ವಿವಿಧ ಜಿಲ್ಲೆಗಳ ಕುಂದುಕೊರತೆಗಳ ಕುರಿತು  ಚರ್ಚಿಸಿತು.

ಗ್ಯಾರಂಟಿ ಸೇರಿದಂತೆ ವಿವಿಧ ಯೋಜನೆಗಳಿಗೆ ವರ್ಗಾಯಿಸಿರುವ ಎಸ್.ಸಿ.ಪಿ – ಎಸ್.ಟಿ.ಪಿ  ಹಣವನ್ನು ಹಿಂಪಡೆದು ಶೋಷಿತರ ಶಾಸನಬದ್ಧ ಅನುದಾನವನ್ನು ಸಮುದಾಯದ ಶ್ರೇಯೋಭಿವೃದ್ಧಿಗೆ ಬಳಕೆ ಮಾಡಬೇಕು. ಎಬಿಸಿಡಿ ವರ್ಗೀಕರಣದಂತೆ ರಾಜಕೀಯ ಕ್ಷೇತ್ರದಲ್ಲೂ ಒಳಮೀಸಲಾತಿ ಜಾರಿಗೊಳಿಸಬೇಕು ಮತ್ತು ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದ ಜಮೀನುಗಳ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸಬೇಕು ಎಂದು ಮನವಿ ಮಾಡಿದರು.

news_1788519585_5_607.webp

 

ಮನವಿ ಸ್ವೀಕರಿಸಿದ ಸಚಿವ ಮುನಿಯಪ್ಪ ಅವರು, ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಡಿಎಸ್ಎಸ್ ರಾಜ್ಯ ಮುಖಂಡರಾದ ಭೀಮ್ ಜ್ಯೋತಿ ,ಮರೀಶ್ ನಾಗನ್ನವರ, ಸೂಲಿಕುಂಟೆ ರಮೇಶ, ಅಶೋಕ ಛಲವಾದಿ ಪಕೀರಪ್ಪ ಹಿರೇಸಲ್ಲಿಕೆರಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ "ದೇಶ ಪ್ರೇಮ" ಟೆಲಿಫಿಲ್ಮ್ ಚಿತ್ರೀಕರಣ ಮುಕ್ತಾಯರೆಡ್ ಕ್ರಾಸ್ ಸಂಸ್ಥೆಯ ಅರುಣ್ ಕುಮಾರ್ ತಂಡದ ಸೇವಾ ಕಾರ್ಯಕ್ಕೆ ಪೋಲೀಸ್ ಇಲಾಖೆ ಪ್ರಶಂಸೆ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್ಗಳ ಪಾತ್ರ ಮಹತ್ವದ್ದು ಜಿಲ್ಲಾಧಿಕಾರಿ ಎಸ್. ರಮ್ಯಾ ಅಭಿಮತಜಿಪಿಟಿ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಅಂಬರೀಶಯುವಜನರಲ್ಲಿ ಸಹಕಾರ, ಸಹೋದರತ್ವದ ಮೌಲ್ಯಗಳು ಬೆಳೆದು ಬರಲಿ: ಡಾ.ಎಸ್.ಚಾರೇಶ್“30–40 ಕಿ.ಮೀ. ಅಲೆದಾಟಕ್ಕೆ ಬ್ರೇಕ್; ಗುಡೇಕೋಟೆಯಲ್ಲೇ ಆಧಾರ್ ಸೇವೆ ಆರಂಭ”ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜೀಯಾಗಬೇಡಿ: ಡಾ. ವಿಷ್ಣು ಭರತ್ ಆಲಂಪಲ್ಲಿ