LIVE TV StateNationalPoliticsCrimeEntertainmentSportsEducationFINANCE & TAXATION
Districts Bangalore | State News

ಖರ್ಗೆಯವರ ಭಾಷಣ ಸ್ಥಳ | ದೇಶದ ದಲಿತ ಸಮುದಾಯಕ್ಕೆ ಮಾಡಿದ ಅವಮಾನ: ಬಿ. ಗೋಪಾಲ್ ಖಂಡನೆ

ಬೆಂಗಳೂರು: ಮೊನ್ನೆ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದರು ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ‘ಮೈಲಿಗೆ’ ಎಂದು ಪರಿಗಣಿಸಿ ಹೋಮ, ಹವನ ಮಾಡಿ ‘ಶುದ್ಧೀಕರಣ’ ನಡೆಸಿದ ಘಟನೆಯನ್ನು ಸಂವಿಧಾನ ಸಂರಕ್ಷಣಾ ಸಮಿತಿ ಕರ್ನಾಟಕ

ಮತ್ತು ರಾಜ್ಯದ ವಿವಿಧ ದಲಿತ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

 

ನಗರದ ಗಾಂಧಿನಗರ ಕನಿಷ್ಕಾ ಹೋಟೆಲ್‌ ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಬಿ. ಗೋಪಾಲ್ ರವರು ಈ ಶುದ್ಧೀಕರಣ ಕ್ರಿಯೆ ಕೇವಲ ಒಬ್ಬ ಸಾಂವಿಧಾನಿಕ ಸ್ಥಾನದಲ್ಲಿರುವ ಖರ್ಗೆಯವರಿಗಷ್ಟೇ ಅಲ್ಲದೆ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 

ನಂತರದಲ್ಲಿ ಈ ಶುದ್ಧೀಕರಣ ಕ್ರಿಯೆ ಕೇವಲ ಒಬ್ಬ ಸಾಂವಿಧಾನಿಕ ಸ್ಥಾನದಲ್ಲಿರುವ ಖರ್ಗೆಯವರಿಗಷ್ಟೇ ಅಲ್ಲದೆ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 

ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಜನ, ಇನ್ನು ಮುಂದೆ ಭಾರತದ ದಲಿತರು ನಡೆದಾಡಿದ ರಸ್ತೆ, ಬಳಸುವ ಸಾರ್ವಜನಿಕ ಸ್ಥಳ ಎಲ್ಲವೂ ಮಲಿನವಾಗಿದೆ ಎಂದು ಭಾವಿಸುವುದಾದರೆ, ಅದನ್ನೂ ಶುದ್ಧೀಕರಣ ಮಾಡುವ ಕೆಲಸ ಮಾಡಲಿ ಎಂದು ಖಾರವಾಗಿ ಪ್ರಶ್ನಿಸಿದರು.

 

ಇದೇ ವೇಳೆಯಲ್ಲಿ ‘ವಂದೇ ಮಾತರಂ’ ಗೀತೆಗೆ ಅವಮಾನವಾಗಿದೆ ಎಂದು ತತಕ್ಷಣವೇ ಹೌಹಾರಿದ ಕೇಂದ್ರ ಗೃಹ ಮಂತ್ರಿ, ಸಂವಿಧಾನ ವಿರೋಧಿಯಾದ ಈ ಶುದ್ಧೀಕರಣ ಕ್ರಮದ ವಿರುದ್ಧ ಚಕಾರವೆತ್ತದಿರುವುದು, ದಲಿತರ ಬಗ್ಗೆ ಅವರಿಗಿರುವ ತಾತ್ಸಾರ ಮತ್ತು ಅಸಹ್ಯ ಭಾವನೆಯನ್ನೇ ಎತ್ತಿ ತೋರಿಸುತ್ತದೆ ಎಂದು ಬಿ. ಗೋಪಾಲ್ ರವರು ತೀಕ್ಷ್ಣವಾಗಿ ಟೀಕಿಸಿದರು.

 

1927ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಚೌಡರ್ ಕೆರೆ ಸತ್ಯಾಗ್ರಹದ ಸಂದರ್ಭದಲ್ಲಿಯೇ ಜಗಜೀವನ್ ರಾಂ ಅವರು ಉಪಪ್ರಧಾನಿಯಾಗಿದ್ದಾಗ ಭೇಟಿ ನೀಡಿದ ಮಧುರಾ ದೇವಸ್ಥಾನದಲ್ಲಿ ಮತ್ತು ಹಿಂದಿನ ಕೇರಳ, ಮದ್ರಾಸ್ ಪ್ರಾಂತ್ಯದಲ್ಲಿ ದಲಿತರ ವಿರುದ್ಧ ನಡೆದ ಇಂತಹುದೇ ‘ಶುದ್ಧೀಕರಣ’ ಪ್ರಕರಣಗಳನ್ನು ಇತಿಹಾಸ ದಾಖಲಿಸಿದೆ. ಈಗ ಖರ್ಗೆಯವರ ಸಂದರ್ಭದಲ್ಲಿ ನಡೆದ ಘಟನೆ, ಆ ಮನುವಾದಿ ಮನಸ್ಥಿತಿ ಇಂದಿಗೂ ಜೀವಂತವಾಗಿರುವುದನ್ನು ತೋರಿಸುತ್ತದೆ ಎಂದು ಸಮಿತಿಯಲ್ಲಿ ಅಭಿಪ್ರಾಯಪಟ್ಟಿದೆ.

 news_1787160177_4_381.webp

 

ಈ ಘಟನೆಯ ಬಗ್ಗೆ ಪ್ರಧಾನ ಮಂತ್ರಿಗಳಾಗಲಿ, ಗೃಹ ಮಂತ್ರಿಗಳಾಗಲಿ ಅಥವಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರಾಗಲಿ ಈವರೆಗೆ ಖಂಡಿಸಿಲ್ಲ ಎಂಬುದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಶುದ್ಧೀಕರಣ ನಡೆಸಿದ ಜಾತಿವಾದಿಗಳ ವಿರುದ್ಧ ಇದುವರೆಗೆ ಯಾವುದೇ ಕಾನೂನಾತ್ಮಕ ಕ್ರಮವನ್ನೂ ಕೈಗೊಂಡಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

 

ಸಂವಿಧಾನ ಸಂರಕ್ಷಣಾ ಸಮಿತಿ ಕರ್ನಾಟಕ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತದೆ. ಈ ಸಂಬಂಧ ಸಮಿತಿಯು ಮಾನ್ಯ ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದ ಪ್ರತಿಯನ್ನು ರಾಷ್ಟ್ರಪತಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಈಗಾಗಲೇ ಕಳುಹಿಸಿಕೊಟ್ಟಿದೆ.

 

ಇದೇ ಸಮಯದಲ್ಲಿ ರಾಜ್ಯದ ಎಲ್ಲಾ ದಲಿತ ಸಂಘಟನೆಗಳ ರಾಜ್ಯಾಧ್ಯಕ್ಷರು, ಸಂವಿಧಾನ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ಪ್ರಗತಿಪರರು, ಯುವಜನತೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಮಲ್ಲಿಕಾರ್ಜುನ ಖರ್ಗೆಯವರ ಭಾಷಣ ಸ್ಥಳವನ್ನು ಶುದ್ಧೀಕರಣ ಕ್ರಿಯೆ ಕೇವಲ ಒಬ್ಬ ಸಾಂವಿಧಾನಿಕ ಸ್ಥಾನದಲ್ಲಿರುವ ಖರ್ಗೆಯವರಿಗಷ್ಟೇ ಅಲ್ಲದೆ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ.

- ಬಿ. ಗೋಪಾಲ್, ರಾಜ್ಯಾಧ್ಯಕ್ಷರು, ಸಂವಿಧಾನ ಸಂರಕ್ಷಣಾ ಸಮಿತಿ ಕರ್ನಾಟಕ

 

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ‘ಮೈಲಿಗೆ’ ಎಂದು ಪರಿಗಣಿಸಿ ಹೋಮ, ಹವನ ಮಾಡಿ ‘ಶುದ್ಧೀಕರಣ’ ನಡೆಸಿದ ಘಟನೆಯನ್ನ ತೀವ್ರವಾಗಿ ಸಂವಿಧಾನ ಸಂರಕ್ಷಣಾ ಸಮಿತಿ ಕರ್ನಾಟಕ ಮತ್ತು ರಾಜ್ಯದ ವಿವಿಧ ದಲಿತ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ "ದೇಶ ಪ್ರೇಮ" ಟೆಲಿಫಿಲ್ಮ್ ಚಿತ್ರೀಕರಣ ಮುಕ್ತಾಯರೆಡ್ ಕ್ರಾಸ್ ಸಂಸ್ಥೆಯ ಅರುಣ್ ಕುಮಾರ್ ತಂಡದ ಸೇವಾ ಕಾರ್ಯಕ್ಕೆ ಪೋಲೀಸ್ ಇಲಾಖೆ ಪ್ರಶಂಸೆ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್ಗಳ ಪಾತ್ರ ಮಹತ್ವದ್ದು ಜಿಲ್ಲಾಧಿಕಾರಿ ಎಸ್. ರಮ್ಯಾ ಅಭಿಮತಜಿಪಿಟಿ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಅಂಬರೀಶಯುವಜನರಲ್ಲಿ ಸಹಕಾರ, ಸಹೋದರತ್ವದ ಮೌಲ್ಯಗಳು ಬೆಳೆದು ಬರಲಿ: ಡಾ.ಎಸ್.ಚಾರೇಶ್“30–40 ಕಿ.ಮೀ. ಅಲೆದಾಟಕ್ಕೆ ಬ್ರೇಕ್; ಗುಡೇಕೋಟೆಯಲ್ಲೇ ಆಧಾರ್ ಸೇವೆ ಆರಂಭ”ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜೀಯಾಗಬೇಡಿ: ಡಾ. ವಿಷ್ಣು ಭರತ್ ಆಲಂಪಲ್ಲಿ