LIVE TV StateNationalPoliticsCrimeEntertainmentSportsEducationFINANCE & TAXATION
Districts Chitradurga | State News

ಬರಪೀಡಿತ ಪ್ರದೇಶ ಪಟ್ಟಿಯಲ್ಲಿಲ್ಲ ಮೊಳಕಾಲ್ಮೂರು ಹೆಸರು : ಕಿಡಿಕಾರಿದ ಎನ್.ರಘುಮೂರ್ತಿ

ಮೊಳಕಾಲ್ಮೂರು:  ತಾಲೂಕನ್ನು ಬರಪೀಡಿತ ಪ್ರದೇಶದಿಂದ ಕೈ ಬಿಟ್ಟಿರುವುದು ಅಧಿಕಾರಿಗಳ ವಿವೇಚನೆ ಇಲ್ಲದಂತ ಕ್ರಮ ಎಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಮುಖಂಡರಾದ ಎನ್ ರಘು  ಮೂರ್ತಿ ಹೇಳಿದರು

 ಮೊಣಕಾಲ್ಮುರು ತಾಲೂಕು ಇಡೀ ರಾಜ್ಯದಲ್ಲಿಯೇ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಂತ ತಾಲೂಕಾಗಿದ್ದು ಈ ತಾಲೂಕಿನಲ್ಲಿ ಬೀಳುವಂತಹ ಸರಾಸರಿ ಮಳೆಯ ಪ್ರಮಾಣ ಕೂಡ ಕಡಿಮೆ ರಾಜ್ಯದಲ್ಲಿ ಅತಿ ಹೆಚ್ಚು ಬುಡಕಟ್ಟು ಕುಟುಂಬಗಳು ವಾಸವಾಗಿರುವಂತ ತಾಲೂಕು ಇಲ್ಲಿನ ತಲಾದಾಯವು ಕೂಡ ಕಡಿಮೆ ಇದೆ ಅಧಿಕಾರಿಗಳು ಯಾವ ಅಂಕಿ ಅಂಶಗಳನ್ನು ಇಟ್ಟುಕೊಂಡು ಇಂತಹ ತಾಲೂಕನ್ನು ಬರಪೀಡಿತ ಪ್ರದೇಶದಿಂದ ಕೈಬಿಟ್ಟಿದ್ದಾರೆ ಎಂಬುದೇ ಶೋಚನೀಯ  ಸಂಗತಿಯಾಗಿದೆ 

 

 

 ತಾಲೂಕಿನಲ್ಲಿ ಬಿತ್ತನೆಯಾಗಿರುವಂತಹ ಬಹುತೇಕ ಕೃಷಿ ಬೆಳೆಗಳು ರೇಷ್ಮೆ ಬೆಳೆ ಮತ್ತು ತೋಟಗಾರಿಕಾ ಬೆಳೆಗಳು ಹಾಳಾಗಿದೆ ಸಾರ್ವಜನಿಕರ ಬದುಕು ದುಸ್ತರವಾಗಿದೆ  ಆಡಳಿತ ಪಕ್ಷ, ರಾಜಕಾರಣ, ಅಧಿಕಾರ ಏನೇ ಇರಲಿ ಇವುಗಳನ್ನು ಮೀರಿಯು ಕೂಡ ಇಂತಹ ತಾಲೂಕಿನ ಜನಗಳಿಗೆ ಮತ್ತು ಜಾನುವಾರುಗಳಿಗೆ ಇಂತಹ ಬರಗಾಲದ ಸಮಯದಲ್ಲಿ ಆಶ್ರಯ ನೀಡಬೇಕಾಗಿದ್ದು ಸರ್ಕಾರದ ಅಧಿಕಾರಿಗಳ ಮತ್ತು ಆ ಭಾಗದ ಚುನಾಯಿತ ಪ್ರತಿನಿಧಿ ಗಳ ಕರ್ತವ್ಯವಾಗಿದೆ

 

 ಸರಿಸುಮಾರು ಮೊಳಕಾಲ್ಮೂರು ತಾಲೂಕಿನ ವ್ಯಾಪ್ತಿಯಲ್ಲಿ 3000ಕ್ಕೂ ಜಾಸ್ತಿ ದೇವರ ಎತ್ತುಗಳಿವೆ ಇವುಗಳಿಗೆ ಮೇವಿಲ್ಲ ಬಹುತೇಕ ಶೇಕಡ 80ರಷ್ಟು ಜನರಿಗೆ ಉದ್ಯೋಗವಿಲ್ಲ ತಮ್ಮ ಕುಟುಂಬದಲ್ಲಿ ಒಂದಿಷ್ಟು ಹಣವನ್ನು ಸಂಗ್ರಹಿಸಿ ಬೀಜ ಗೊಬ್ಬರ ಇವುಗಳನ್ನು ತಮ್ಮ ತಮ್ಮ ಜಮೀನಿಗೆ ಬಿತ್ತಿ ಮಳೆಯ ಕೊರತೆಯಿಂದ ಇದು ಕೂಡ ಹಾಳಾಗಿದೆ ಇಂತಹ ಸಂಧಿದ್ದ  ಪರಿಸ್ಥಿತಿಯಲ್ಲಿ ಆರ್ಥಿಕ ಸೂಚ್ಯಂಕದಲ್ಲಿ ಸಾಮಾಜಿಕ ಜನಜೀವನದಲ್ಲಿ ಹಿಂದುಳಿದಂತಹ ಇಂತಹ ತಾಲೂಕನ್ನು ಬರಪೀಡಿತ ಪ್ರದೇಶದ ಪೆಟ್ಟಿಗೆ ತಕ್ಷಣ ಸೇರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ವೈಯಕ್ತಿಕ ಗಮನ ಹರಿಸಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಇದಕ್ಕೆ ಸಂಬಂಧಿಸಿದ ನಿರ್ದೇಶನ ನೀಡಿ ಮೊಳಕಾಲ್ಮೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ  ಸೇರಿಸಬೇಕೆಂದು  ಆಗ್ರಹಿಸಿದ್ದಾರೆ

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ "ದೇಶ ಪ್ರೇಮ" ಟೆಲಿಫಿಲ್ಮ್ ಚಿತ್ರೀಕರಣ ಮುಕ್ತಾಯರೆಡ್ ಕ್ರಾಸ್ ಸಂಸ್ಥೆಯ ಅರುಣ್ ಕುಮಾರ್ ತಂಡದ ಸೇವಾ ಕಾರ್ಯಕ್ಕೆ ಪೋಲೀಸ್ ಇಲಾಖೆ ಪ್ರಶಂಸೆ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್ಗಳ ಪಾತ್ರ ಮಹತ್ವದ್ದು ಜಿಲ್ಲಾಧಿಕಾರಿ ಎಸ್. ರಮ್ಯಾ ಅಭಿಮತಜಿಪಿಟಿ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಅಂಬರೀಶಯುವಜನರಲ್ಲಿ ಸಹಕಾರ, ಸಹೋದರತ್ವದ ಮೌಲ್ಯಗಳು ಬೆಳೆದು ಬರಲಿ: ಡಾ.ಎಸ್.ಚಾರೇಶ್“30–40 ಕಿ.ಮೀ. ಅಲೆದಾಟಕ್ಕೆ ಬ್ರೇಕ್; ಗುಡೇಕೋಟೆಯಲ್ಲೇ ಆಧಾರ್ ಸೇವೆ ಆರಂಭ”ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜೀಯಾಗಬೇಡಿ: ಡಾ. ವಿಷ್ಣು ಭರತ್ ಆಲಂಪಲ್ಲಿ