LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಜೂ.26ಕ್ಕೆ ‘ರಕ್ಷಕ -2’ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ

ಬೆಂಗಳೂರು: ಸರ್ವೇಶ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ‘ರಕ್ಷಕ-೨’ ಕನ್ನಡ ಚಲನಚಿತ್ರವು ಇದೆ ಜೂ.೨೬ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. 

     ಈ ಹಿಂದೆ ಶತದಿನೋತ್ಸವ ಕಂಡ ರಕ್ಷಕ, ದೊಡ್ಡಣ್ಣ ಪುಟ್ಟಣ್ಣ ಚಿತ್ರದ ನಿರ್ದೇಶಕರಾದ ಡಾ. ಆರ್ ವಿಜಯ್ ಕುಮಾರ್ ನಟಿಸಿ ನಿರ್ದೇಶನ ಮಾಡಿರುವ ಮೂರನೇ ಚಿತ್ರವಿದು. ಈ ಚಿತ್ರದಲ್ಲಿ ಲವ್ಹ್- ಆಕ್ಷನ್-ಫ್ಯಾಮಿಲಿ ಸಸ್ಪೆನ್ಸ್-ಥ್ರಿಲ್ಲರ್, ಕಾಮಿಡಿ ಜೊತೆಗೆ ಚಿತ್ರದಲ್ಲಿ ಮೂರು ಹಾಡುಗಳಿವೆ. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವ ಚಿತ್ರವಾಗಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಆರ್.ವಿಜಯಕುಮಾರ್ ತಿಳಿಸಿದ್ದಾರೆ.

news_1781926278_1_846.webp

 

    ಬೆಂಗಳೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಪ್ರಮುಖ ಪಾತ್ರದಲ್ಲಿ ಚಿತ್ರದ ನಿರ್ದೇಶಕ ಡಾ. ಆರ್ ವಿಜಯ್ ಕುಮಾರ್ ಅವರು ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ , ಖ್ಯಾತ ಹಾಸ್ಯ ನಟ ಲಯಕೋಕಿಲ ಹೆಡ್ ಕಾನ್ಸ್ಟೇಬಲ್ ಆಗಿ ಅಭಿನಯಿಸಿದ್ದು ನಾಯಕ ನಟರಾಗಿ ರಾಜವಂಶಿ, ನಾಯಕಿಯಾಗಿ ರಾಧಿಕಾ ,ಮುಖ್ಯ ಪಾತ್ರದಲ್ಲಿ ಮಧುಶ್ರೀ 

 ಖಳನಾಯಕನಾಗಿ ಹಿರಿಯ ನಟ ಸುರೇಂದ್ರ ಕುಮಾರ್, ಮುರಳಿಕೃಷ್ಣ, ವಿಜಯ್ ಮಧಾಳೇ, ಅರವಿಂದ್, ರೋಹಿಣಿ ಮೊದಲಾದವರು ಅಭಿನಯಿಸಿದ್ದಾರೆ.  

news_1781926278_0_672.webp

 

      ಛಾಯಾಗ್ರಹಣ ವಿಜಯ್ ಮಧಾಳೇ ಮತ್ತು ಆಕಾಶ, ಸಂಕಲನ ವಿಜಯ್ ಮಧಾಳೇ, ಸಾಹಸ ವೈಲೆಂಟ್ ವೇಲು, ಪ್ರಸಾಧನ ಜೀವನ್, ಪಿಆರ್ ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ಕಥೆ-ಚಿತ್ರಕಥೆ- ಸಂಭಾಷಣೆ-ಸಂಗೀತದ ಜೊತೆಗೆ ನಿರ್ದೇಶನವನ್ನು ಡಾ. ಆರ್ ವಿಜಯಕುಮಾರ್ ಮಾಡಿದ್ದಾರೆ. ನಿರ್ಮಾಪಕ ವಿ.ಶಿವ್ ಸರ್ವೇಶ್ ಅವರು ಚಿತ್ರವನ್ನು ನಿರ್ಮಿಸಿದ್ದು ವಿಎಸ್ ಕೆ ಸಿನೆ ಕ್ರಿಯೇಷನ್ಸ್ ವಿಶಾಲ ಕರ್ನಾಟಕಕ್ಕೆ ಹಂಚಿಕೆದಾರರಾಗಿದ್ದಾರೆ.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST