ಚಿತ್ರದುರ್ಗ :ಕೋಟೆ ನಾಡು ಚಿತ್ರದುರ್ಗದಲ್ಲಿ ಜರುಗಿದ ಹಿಂದೂ ಮಹಾಗಣಪತಿ ಮಹೋತ್ಸವದ ಬೃಹತ್ ಶೋಭಯಾತ್ರೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಸೇವಾ ಕಾರ್ಯ ನಿರ್ವಹಿಸಿದ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಉಪ ಸಭಾಪತಿ ಹಾಗೂ ರಕ್ತದಾನಿ ಈ. ಅರುಣ್ ಕುಮಾರ್ ಅವರ ತಂಡಕ್ಕೆ ಜಿಲ್ಲಾ ಪೋಲೀಸ್ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ.
ಕರ್ನಾಟಕದ ಅತೀ ದೊಡ್ಡ ಹಿಂದೂ ಮಹಾಗಣಪತಿ ಶೋಭಯಾತ್ರೆ ನಡೆಯುವ ಚಿತ್ರದುರ್ಗದಲ್ಲಿ ಜಿಲ್ಲಾ ಪೋಲೀಸ್ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಆಡಳಿತ ತುರ್ತು ನಿರ್ವಹಣಾ ತಂಡ ರಚನೆ ಮಾಡಿತ್ತು. ನಗರಸಭೆ,ಪೊಲೀಸ್ ಇಲಾಖೆ, ಹೋಮ್ ಗಾರ್ಡ್, ಬೆಸ್ಕಾಂ, ಅರೋಗ್ಯ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ, ಅಗ್ನಿ ಶಾಮಕ ದಳ ಹೀಗೆ ಹಲವು ಇಲಾಖೆ ಸಂಸ್ಥೆಗಳನ್ನು ಒಳಗೊಂಡು ತುರ್ತು ಸೇವಾ ನಿರ್ವಹಣೆ ತಂಡವನ್ನು ಜಿಲ್ಲಾಡಳಿತ ರಚನೆ ಮಾಡಿತ್ತು.
ಅಂದು ನಡೆದ ಬೃಹತ್ ಶೋಭಯಾತ್ರೆ ವೇಳೆ ಲಕ್ಷಾಂತರ ಜನರು ಸೇರಿದ್ದರು. ಇಡೀ ದಿನ ನಡೆದ ಮೆರವಣಿಗೆ ವೇಳೆ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಉಪ ಸಭಾಪತಿ ಈ. ಅರುಣ್ ಕುಮಾರ್ ಮತ್ತು ಅವರ ತಂಡ ಅತ್ಯುತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿತ್ತು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಕ್ಷಮತೆಯನ್ನು ಮೆಚ್ಚಿ ಜಿಲ್ಲಾ ಪೋಲೀಸ್ ಮುಖ್ಯಧಿಕಾರಿ ಕುಶಾಲ್ ಚೌಕ್ಸೆ ಅವರು ಈ ಅರುಣ್ ಕುಮಾರ್ ಹಾಗೂ ಅವರ ತಂಡದ ಎಲ್ಲಾ ಸದಸ್ಯರಿಗೆ ಪ್ರಶಂಸಣಾ ಪತ್ರ ನೀಡಿ ಸನ್ಮಾನಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಆಡಳಿತ ಮಂಡಳಿ ಸದಸ್ಯ ಅನಂತರೆಡ್ಡಿ, ಕಾರ್ಯದರ್ಶಿ ಮಜಹರ್ ಉಲ್ಲಾ, ಸಹ ಕಾರ್ಯದರ್ಶಿ ಗಿರೀಶ್, ಸದಸ್ಯರಾದ ಗುರುಮೂರ್ತಿ, ಡಾ. ದಿಕ್ಷೀತ್ ಸೇರಿದಂತೆ ಹಲವರು ಹಾಜರಿದ್ದರು.