LIVE TV StateNationalPoliticsCrimeEntertainmentSportsEducationFINANCE & TAXATION
Districts Raichur

ಗರ್ಭನಾಳ ಮರು ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ಮಾಡಿದ ಕರ್ನಾಟಕ ರಾಜ್ಯದಲ್ಲಿ ಮೊದಲ ಸಮುದಾಯ ಆರೋಗ್ಯ ಕೇಂದ್ರ ತುರುವಿಹಾಳ.

ಸಿಂಧನೂರು:ಸಮುದಾಯ ಆರೋಗ್ಯ ಕೇಂದ್ರ ತುರವಿಹಾಳದಲ್ಲಿ  ದಿನಾಂಕ 06.08. 2026 ರಂದು ಗರ್ಭನಾಳ ಮರು ಜೋಡಣೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಗರ್ಭನಾಳ ಮರು ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ಮಾಡಿದ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಸಮುದಾಯ ಆರೋಗ್ಯ ಕೇಂದ್ರ ಇದಾಗಿದೆ.

ಗರ್ಭನಾಳ ಮರು ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ಸಂತಾನಹರಣ ಶಸ್ತ್ರ ಚಿಕಿತ್ಸೆಯಾದ ನಂತರ ಒಂದು ಮಗುವಿದ್ದು ಮತ್ತೊಂದು ಮಗುವನ್ನು ಬಯಸಿದರೆ, ಮತ್ತು ಒಂದು ಮಗು ಇದ್ದು ಆ ಮಗು ತೀರಿ ಹೋಗಿ ಮತ್ತೊಂದು ಮಗುವನ್ನು ಪಡೆಯಲು ಇಚ್ಚಿಸಿದರೆ ಹಾಗೂ ವಿಧವೆಯಾಗಿದ್ದು ಮತ್ತೊಂದು ಮದುವೆಯಾಗಿದ್ದರೆ, ಅವರು ಮಗುವನ್ನು ಪಡೆಯಲು ಬಯಸಿದರೆ ಇಂತಹ ಸಂಧರ್ಭಗಳಲ್ಲಿ ಈ ಗರ್ಭನಾಳ ಮರು ಜೋಡಣೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತದೆ.

ಈ ಶಸ್ತ್ರ ಚಿಕಿತ್ಸೆಯನ್ನು ಮಾಡದೇ ಹೋದರೆ ಮಗುವನ್ನು ಪಡೆಯಲು ಕೃತಕ ಗರ್ಭಧಾರಣೆ (ಐ.ವಿ.ಎಫ್) ಗೆ ಮೊರೆಹೋಗ ಬೇಕಾಗುತ್ತದೆ. ಕೃತಕ ಗರ್ಭಧಾರಣೆಯಿಂದ ಮಗುವನನ್ನು ಪಡೆಯಲು 2-5 ಲಕ್ಷ ರೂಪಾಯಿಗಳ ವೆಚ್ಚ ತಗುಲುತ್ತದೆ. ಆದರೆ ಗರ್ಭನಾಳ ಶಸ್ತ್ರ ಚಿಕಿತ್ಸೆಯನ್ನು ಮಾಡುವದರಿಂದ ಸಹಜವಾಗಿ ಗರ್ಭ ಧರಿಸುವದರಿಂದ ಮಗುವನ್ನು ಪಡೆಯಬಹುದು. ಅಲ್ಲದೆ ಈ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿದರೆ 1 ವರೆಯಿಂದ 2 ಲಕ್ಷ ವೆಚ್ಚ ತಗುಲುತ್ತದೆ.

ಆದರೆ ಗ್ರಾಮೀಣ ಭಾಗದ  ಸಮುದಾಯ ಆರೋಗ್ಯ ಕೇಂದ್ರ ತುರವಿಹಾಳದಲ್ಲಿ ಗರ್ಭನಾಳ ಮರು ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದೆ. ಇದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.   ಗರ್ಭನಾಳ ಶಸ್ತ್ರ ಚಿಕಿತ್ಸೆಯನ್ನು ಡಾ ನಾಗರಾಜ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರು ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ ಕೋನಿಕಾ ಅರವಳಿಕೆ ತಜ್ಞರು, ವಿರುಪಾಕ್ಷಪ್ಪ ಟಿ ವೈದ್ಯಾಧಿಕಾರಿಗಳು, ಶುಶೂಷಾಧಿಕಾರಿ ಮಮತ,  ಹಸೀನಾ, ಹಾಗೂ ಡಿ ಗ್ರೂಪ್ ಸಿಬ್ಬಂದಿಗಳಾದ ಕ ಪೂಜಾ,  ಬಸವರಾಜ ಮತ್ತು ಇತರೆ  ಸಿಬ್ಬಂದಿಗಳು ಉಪಸ್ಥಿತರಿದ್ದರು.

 news_1786115936_0_675.webp

 

ಕರ್ನಾಟಕದ ರಾಜ್ಯದಲ್ಲಿ ಮೊದಲ ಬಾರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂತಹ ಸೂಕ್ಷ್ಮ ಮತ್ತು ವಿರಳ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ ವೈದ್ಯ, ವೈದ್ಯಕೀಯ ತಂಡಕ್ಕೆ ಮಾನ್ಯ ಶಾಸಕರು ಆರ್ ಬಸನಗೌಡ ತುರವಿಹಾಳ ಇವರು ಸ್ವತಃ ಆಸ್ಪತ್ರೆಗೆ ಭೇಟಿ ನೀಡಿ ರೋಗಿಯ ಆರೋಗ್ಯವನ್ನು ವಿಚಾರಿಸಿ ವೈದ್ಯಕೀಯ ತಂಡವನ್ನು ಶ್ಲಾಘಿಸಿದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಕೈಗೊಂಡ ಹಿನ್ನಲೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗಳನ್ನು ಜನತೆಗೆ ಒದಗಿಸಿದ ಹೆಮ್ಮಿಯ ಪ್ರತಿಕವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನಂದಿತಾ ಎಮ್‌ ಎನ್‌ ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಾರ್ವಜನಿಕರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ "ದೇಶ ಪ್ರೇಮ" ಟೆಲಿಫಿಲ್ಮ್ ಚಿತ್ರೀಕರಣ ಮುಕ್ತಾಯರೆಡ್ ಕ್ರಾಸ್ ಸಂಸ್ಥೆಯ ಅರುಣ್ ಕುಮಾರ್ ತಂಡದ ಸೇವಾ ಕಾರ್ಯಕ್ಕೆ ಪೋಲೀಸ್ ಇಲಾಖೆ ಪ್ರಶಂಸೆ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್ಗಳ ಪಾತ್ರ ಮಹತ್ವದ್ದು ಜಿಲ್ಲಾಧಿಕಾರಿ ಎಸ್. ರಮ್ಯಾ ಅಭಿಮತಜಿಪಿಟಿ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಅಂಬರೀಶಯುವಜನರಲ್ಲಿ ಸಹಕಾರ, ಸಹೋದರತ್ವದ ಮೌಲ್ಯಗಳು ಬೆಳೆದು ಬರಲಿ: ಡಾ.ಎಸ್.ಚಾರೇಶ್“30–40 ಕಿ.ಮೀ. ಅಲೆದಾಟಕ್ಕೆ ಬ್ರೇಕ್; ಗುಡೇಕೋಟೆಯಲ್ಲೇ ಆಧಾರ್ ಸೇವೆ ಆರಂಭ”ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜೀಯಾಗಬೇಡಿ: ಡಾ. ವಿಷ್ಣು ಭರತ್ ಆಲಂಪಲ್ಲಿ