LIVE TV StateNationalPoliticsCrimeEntertainmentSportsEducationFINANCE & TAXATION
Districts Bangalore | State News

ಎಥೆನಾಲ್ ನೀತಿಯಿಂದ ಸಕ್ಕರೆ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ

ಹಬ್ಬಗಳ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಬರೆ – ಡಾ. ಅನಂದ್ ಕುಮಾರ್

ಬೆಂಗಳೂರು:  ತೈಲ ಕಂಪೆನಿಗಳು, ತೈಲ ಉದ್ಯಮಿಗಳ ಜೋಳಿಗೆ ತುಂಬಿಸಲು ಕೇಂದ್ರ ಸರ್ಕಾರ ಪೆಟ್ರೋಲಿಯಂನಲ್ಲಿ ಶೇ 20 ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿದೆ. ಇದರಿಂದ ಸಕ್ಕರೆ ಬೆಲೆ ಏರಿಕೆಯಾಗಿ, ಆಹಾರೋದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ  ಮಹಾರಾಷ್ಟ್ರ ಉಸ್ತುವಾರಿ  ಡಾ. ಆನಂದ್ ಕುಮಾರ್ ಎಚ್ಚರಿಸಿದ್ದಾರೆ.

ಎಥನಾಲ್ ನಿಂದ ವಾಹನೋದ್ಯಮ ಕುಸಿದು ಬಿದ್ದಿದ್ದು, ಇದರ ಕಹಿ ಸಾಮಾನ್ಯರ ಅಡುಗೆ ಮನೆ ಪ್ರವೇಶಿಸುವಂತಾಗಿದೆ. ಎಥೆನಾಲ್ ಗಾಗಿ ಸರ್ಕಾರ ಸಕ್ಕರೆ ಉತ್ಪಾದನೆಯನ್ನು ಬಲಿಕೊಡುತ್ತಿದೆ. ಸೂಕ್ತ ಮುಂದಾಲೋಚನೆ ಇಲ್ಲದೆ ಎಥೆನಾಲ್ ನೀತಿ ಜಾರಿಗೊಳಿಸಿದ್ದರಿಂದ ಬೆಲೆ ಏರಿಕೆಗೆಯಾಗಿದೆ. ಕಬ್ಬಿನಿಂದ ಎಥನಾಲ್ ಬಳಕೆ ಹೆಚ್ಚಿದಾಗ, ಮಾರುಕಟ್ಟೆಗೆ ಬರುವ ಸಕ್ಕರೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಸರ್ಕಾರ ಸೂಕ್ತ ಇಂಧನ ನೀತಿ ರೂಪಿಸದೇ, ಸಂಸತ್ತಿನಲ್ಲಿ ಚರ್ಚಿಸಿ ಅನುಮೋದನೆ ಪಡೆಯದೇ ಎಥೆನಾಲ್ ಮಿಶ್ರಣ ನೀತಿ ಜಾರಿಗೆ ತಂದು ಆಹಾರ ಭದ್ರತೆಯನ್ನು ಬಲಿಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಥೆನಾಲ್ ನಿಂದ ರೈತರಿಗೆ ಲಾಭವಾಗುತ್ತಿಲ್ಲ. ಕಾರ್ಖಾನೆ ಮಾಲೀಕರು, ತೈಲ ಮಾರಾಟ ಕಂಪೆನಿಗಳು ಸಾಮಾನ್ಯರನ್ನು ದೋಚುತ್ತಿವೆ. ದೇಶದ ವಾಹನಗಳ ಟ್ಯಾಂಕ್ ತುಂಬಿಸಲು ಎಥನಾಲ್ ಬೇಕು; ಆದರೆ ದೇಶದ ಕೋಟ್ಯಂತರ ಕುಟುಂಬಗಳ ಅಡುಗೆಮನೆಯ ಸಕ್ಕರೆ ಡಬ್ಬಿ ಖಾಲಿಯಾಗಬಾರದು ಎಂಬುದನ್ನು ಸರ್ಕಾರ ಮರೆಯಬಾರದು. ಬೆಲೆ ಏರಿಕೆಯ ಹೊರೆ ಮಧ್ಯಮ ವರ್ಗದ ಮೇಲೆ ಬೀಳುತ್ತಿದ್ದು, ಸಿಹಿತಿಂಡಿ ತಯಾರಕರು, ಬೇಕರಿಗಳು, ಹೋಟೆಲ್ಗಳು, ಕಾಫಿ, ತಿಂಡಿ, ಪಾನೀಯ ಉದ್ಯಮಸಕ್ಕರೆಯನ್ನು ಬಳಸುವ ಪ್ರತಿಯೊಂದು ಕ್ಷೇತ್ರದ ಉತ್ಪಾದನಾ ವೆಚ್ಚದ ಮೇಲೂ ಬೆಲೆ ಏರಿಕೆ ಪರಿಣಾಮ ಬೀರುತ್ತದೆ. ಹಬ್ಬದ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಸರ್ಕಾರ ಬರೆ ಎಳೆದಿದೆ ಎಂದಿದ್ದಾರೆ. 

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ಇದು ಮತ್ತೊಂದು ಹೊರೆಯಾಗಿದ್ದು, ಸರ್ಕಾರದ ನೀತಿ ಅಡುಗೆಮನೆಯ ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸಿದೆ. ಎಥೆನಾಲ್ ವಿಚಾರದಲ್ಲಿ ಕಬ್ಬು ಬೆಳೆಗಾರರನ್ನು ಗ್ರಾಹಕರ ವಿರುದ್ಧ ನಿಲ್ಲಿಸುವುದು ತಪ್ಪು. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಕ್ಕರೆ ದೊರೆಯಬೇಕು. ರೈತನ ಹಿತ ಮತ್ತು ಗ್ರಾಹಕರ ಹಿತ ಪರಸ್ಪರ ಶತ್ರುಗಳಲ್ಲ. ಸರಿಯಾದ ನೀತಿ ಇದ್ದರೆ ಎರಡನ್ನೂ ರಕ್ಷಿಸಬಹುದು. ಎಥನಾಲ್ ಮಿಶ್ರಣದ ಗುರಿ ಹೆಚ್ಚಿಸುವ ಮೊದಲು ದೇಶದ ಸಕ್ಕರೆ ಅಗತ್ಯತೆಯನ್ನು ಸರ್ಕಾರ ಸರಿಯಾಗಿ ಮುಂದಾಲೋಚನೆ ಮಾಡಿಲ್ಲ. ಸಕ್ಕರೆ ಬೆಲೆ ಏರಿದಾಗ ಗ್ರಾಹಕರನ್ನು ರಕ್ಷಿಸಲು ಸರ್ಕಾರ ಶಾಶ್ವತ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ಡಾ.  ಆನಂದ್ ಕುಮಾರ್ ಟೀಕಿಸಿದ್ದಾರೆ.

ಅಡುಗೆಮನೆಯನ್ನು ಪ್ರಯೋಗಾಲಯವನ್ನಾಗಿ ಮಾಡುವುದು ಸರಿಯಲ್ಲ. ದೇಶದ ಅಭಿವೃದ್ಧಿಯ ಅಂತಿಮ ಮಾನದಂಡ ಕಾರ್ಖಾನೆಗಳ ಉತ್ಪಾದನಾ ಅಂಕಿಅಂಶಗಳಲ್ಲ, ಸಾಮಾನ್ಯ ಜನರ ಬದುಕಿನ ಗುಣಮಟ್ಟದ ಮೇಲೆ ಅವಲಂಬಿತವಾಗಲಿದೆ. ಸರ್ಕಾರದ ನೀತಿಗೆ ಜನರ ಬದುಕು ಬಲಿಯಾಗಬಾರದು. ಇದೇ ನಿಜವಾದ ಜನಪರ ಆಡಳಿತದ ಪರೀಕ್ಷೆ. ಬೆಲೆ ಏರಿಕೆಯನ್ನು ಕೇವಲಮಾರುಕಟ್ಟೆಯ ಸಹಜ ಏರಿಳಿತಎಂದು ಕೈತೊಳೆದುಕೊಳ್ಳುವುದು ಜನರ ನೋವಿಗೆ ಮಾಡುವ ಅವಮಾನ. ಸಕ್ಕರೆ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿದ್ದ ದೇಶ ಹತ್ತು ವರ್ಷಗಳ ನಂತರ 10 ಲಕ್ಷ ಟನ್ ಸಕ್ಕರೆ ಆಮುದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲು ಸರ್ಕಾರವೇ ಕಾರಣ. ಬೆಲೆ ಏರುವ ಮುಂಚಿತವಾಗಿ ಪರಿಸ್ಥಿತಿಯನ್ನು ಅಂದಾಜಿಸಿ ಜನರನ್ನು ಬೆಲೆ ಆಘಾತದಿಂದ ರಕ್ಷಿಸುವುದು ಸರ್ಕಾರದ ನೀತಿಯಾಗಲಿದೆ. ಮಧ್ಯಮ ವರ್ಗದ ಜನ ಈಗಾಗಲೇ ಆಹಾರ, ಶಿಕ್ಷಣ, ಆರೋಗ್ಯ, ವಿದ್ಯುತ್, ಸಾರಿಗೆ ಸೇರಿದಂತೆ ಹಲವು ವೆಚ್ಚಗಳ ಒತ್ತಡದಲ್ಲಿದ್ದಾರೆ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ