LIVE TV StateNationalPoliticsCrimeEntertainmentSportsEducationFINANCE & TAXATION
Entertainment News

ವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ

ಬೆಂಗಳೂರು : ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ಅವರ ಇದೆ ಸೆಪ್ಟಂಬರ್ ೨೫ ರಂದು ರಾಜ್ಯಾದ್ಯಂತ ತೆರೆಗೆ ಬರಲಿರುವ ‘ರುದ್ರಾಭಿಷೇಕಂ’  ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ  ನೆರವೇರಿತು.

ನಾಡಿನ ಕಲೆ, ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಕಲೆ  ಆರಾಧಿಸುವ ಕುಟುಂಬ ಕುರಿತು ಮತ್ತು ವೀರಭದ್ರ ದೇವರ ಇತಿಹಾಸ ಹೇಳುವ ‘ರುದ್ರಾಭಿಷೇಕಂ’ದಲ್ಲಿ ವೀರಗಾಸೆಯ ಕುಣಿತ ಗಮನ ಸೆಳೆಯಲಿದೆ.

news_1789751213_1_784.webp

 

ವೀರಗಾಸೆಯ ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡ ವಿಜಯರಾಘವೇಂದ್ರ ಮಾತನಾಡಿ ಇದೊಂದು ದೈವ ಕಲ್ಪನೆಯ ಸಾಮಾಜಿಕ ಚಿತ್ರ ಇಲ್ಲಿ ತಂಧೆ ಮತ್ತು  ಮಗನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ವಿಶೇಷ ಪಾತ್ರ ಅನಿಸಿದ್ರಿಂದ ನಾನು ಈ  ಸಿನಿಮಾಕ್ಕೆ ಒಪ್ಪಿಕೊಂಡೆ ಎಂದರು.

ಸಂಗೀತ ನಿರ್ದೇಶಕ ವಿ ಮನೋಹರ್ ಮಾತನಾಡಿ  ನಾನು ಸಂಗೀತ ನೀಡುವುದರೊಂದಿಗೆ ಇದರಲ್ಲಿ ಒಂದು ಪಾತ್ರ ಮಾಡಿರುವೆ. ಈ  ಪಾತ್ರದಲ್ಲಿನ ನಾನು ಡಿಫರೆಂಟ್ ಆಗಿ ಕಾಣುತ್ತಿದ್ದೇನೆ. ಮೇಕಪ್ ಆದಮೇಲೆ ನಾನು ಹೀಗೆ ಕಾಣುತ್ತಿದ್ದೇನೆ ಎಂದು ಸಂಶಯ ಬಂದಿದ್ದು ಆತರದ ಲುಕ್ ನಲ್ಲಿ ನನ್ನನ್ನು ಚಿತ್ರಿಸಿದ್ದಾರೆ ಎಂದರು.

news_1789751213_2_112.webp

 

ಥ್ರಿಲ್ಲರ್ ಮಂಜು ಮಾತನಾಡಿ ವಿಜಯರಾಘವೇಂದ್ರ ಅವರಿಗಾಗಿಯೇ ಹೊಡೆದಾಟದ ಪಟ್ಟುಗಳನ್ನು ಡಿಫ್ರೆಂಟ್ ಆಗಿ ಮಾಡಿದ್ದೇನೆ ಎಂದರು. ನಿರ್ದೇಶಕ ವಸಂತ್ ಕುಮಾರ್ ಮಾತನಾಡಿ ಚಿತ್ರೀಕರಣ ಸಂದರ್ಭದಲ್ಲಿ ಹಲವು ಅಡೆತಡೆಗಳು ಎದುರಾದರು ಅವುಗಳನ್ನು ಮೆಟ್ಟಿನಿಂತು ಪೂರ್ಣಪ್ರಮಾಣದ ಚಿತ್ರವನ್ನು ತಂದ ಬಗೆಯನ್ನು ಹೇಳಿದರು. ಈಗಾಗಲೇ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ ಎಂದರು.

ಚಿತ್ರದಲ್ಲಿ ವಿಜಯರಾಘವೇಂದ್ರ, ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ, ಬಲರಾಜ್‌ವಾಡಿ, ಶಂಕರ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್ ಪ್ರಸಾದ, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ್ ಹೂಗಾರ್, ಸೌಂದರ್ಯ, ನವನೀತ, ಮಮತಾ, ಮಂಜುಳಾ, ಧನಲಕ್ಷ್ಮಿ, ಸ್ವಾತಿ, ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್, ವಿ.ಮನೋಹರ್ ಸಂಗೀತ , ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್‌ಮಂಜು ಸಾಹಸ, ಬಾಬುಖಾನ್ ಕಲಾ ನಿರ್ದೇಶನ, ನೊಣವಿನಕೆರೆಕುಮಾರ ಪ್ರಸಾಧನ, ಪಶುಪತಿ ವಸ್ತ್ರಾಲಂಕಾರ, ಮುತ್ತುರಾಜ್.ಟಿ ಸಂಕಲನ, ನಾಗೇಂದ್ರ, ಡಾ. ಪ್ರಭು.ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಪಿ. ಆರ್. ಓ, ಸಹನಿರ್ದೇಶನ ಮನು ಮತ್ತು ಧೀರಜ್, ಚಿತ್ರಕಥೆ-ಸಾಹಿತ್ಯ ನಿರ್ದೇಶನ ಕೆ ವಸಂತ್‌ಕುಮಾರ್ ಅವರದಿದೆ. ಎನ್.ಜಯರಾಮ್, ಕೆ.ಎನ್.ಮಂಜುನಾಥ್, ಕೆ. ವೆಂಕಟೇಶ್, ಬಿ.ಚಿದಾನಂದ ಮೂರ್ತಿ, ಸುರೇಶ ಬಾಬು, ಕೆ.ಎಸ್.ರವಿ, ಬಿ.ಕೆ.ಅಶ್ವತ್ ನಾರಾಯಣ, ಡಾ.ಎಂ.ಶಿವಕುಮಾರ, ಕುಸುಮಾ ವಸಂತಕುಮಾರ ಒಂಬತ್ತು ಜನ ನಿರ್ಮಾಪಕರಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ