LIVE TV StateNationalPoliticsCrimeEntertainmentSportsEducationFINANCE & TAXATION
Districts Haveri

ಕಿರಿದರಲ್ಲಿ ಹಿರಿದರ್ಥ ಕೊಡುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ : ಹಿರಿಯ ಸಾಹಿತಿ ಪ್ರೇಮಾ ಶಿವಾನಂದ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ವತಿಯಿಂದ ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿ

ಹಾಸನ : ಕನ್ನಡ ಸಾಹಿತ್ಯೇತಿಹಾಸದಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ಜನಪದ ಸಾಹಿತ್ಯದಿಂದ ವಚನ ಸಾಹಿತ್ಯ, ಕಗ್ಗ ಸೇರಿದಂತೆ ಅನೇಕ ಕಿರುಗವಿತೆ ಪ್ರಕಾರಗಳನ್ನು ಕಾಣುತ್ತೇವೆ. ಕಿರಿದರಲ್ಲಿ ಹಿರಿದರ್ಥ ಕೊಡುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಪ್ರೇಮಾ ಶಿವಾನಂದ ಅಭಿಪ್ರಾಯಪಟ್ಟರು.

 

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿ” ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಯುವ ಪ್ರತಿಭೆ ಹಾಗೂ ಸುಪ್ತ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಸಾಹಿತ್ಯ ಸಾಮಾನ್ಯರ ಬದುಕಿಗೆ ಬೆಳಕು ನೀಡುವಂತಿರಬೇಕು. ಕಾವ್ಯ ಸದಾ ಸಮಾಜಿಕ ಸ್ಥಿತ್ಯಂತರಗಳಿಗೆ ಮುಖಾಮುಖಿಯಾಗಿ ನಿಲ್ಲಬೇಕು. ಕವಿ ಪದ ಜಿಪುಣನಾದಾಗ ಮಾತ್ರ ಕಾವ್ಯ ಗಟ್ಟಿಯಾಗಿ ನಿಲ್ಲಲು ಸಾಧ್ಯ. ಚುಟುಕು ತನ್ನದೇಯಾದ ಗುಣಲಕ್ಷಣಗಳನ್ನು ಹೊಂದಿದ್ದರೂ ಆಯಾಯ ಕಾಲಘಟ್ಟಕ್ಕನುಗುಣವಾಗಿ ಸಡಲಿಕೆಯಾಗಿರುವುದನ್ನೂ ಕಾಣುತ್ತೇವೆ. ಇಂದಿನ ಚುಟುಕು ಕವಿಗೋಷ್ಠಿಯಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಿಂದಲೂ ಸುಮಾರು ಮೂವತ್ತು ಕವಿಗಳು ಚುಟುಕು ವಾಚನ ಮಾಡಿದರು. ಪ್ರೀತಿ, ಪ್ರೇಮ, ವಿರಹ, ವಾತ್ಸಲ್ಯ, ಪ್ರಕೃತಿ, ಸಾಮಾಜಿಕ ವಿಡಂಬನೆ, ಮೌಢ್ಯದ ಖಂಡನೆ ಹೀಗೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದವು. ಹೆಚ್ಚು ಓದಿದಾಗ ಕಾವ್ಯದ ಅಂತರಾಳ ನಮ್ಮೊಳಗೆ ಆಳವಾಗಿ ಇಳಿಯುತ್ತಾ ಸಾಗುತ್ತದೆ. ಆಗ ನಾವು ಬರೆಯುವ ಕಾವ್ಯವೂ ಸಹ ಪ್ರಕರ್ಶಮಾನಗೊಳ್ಳಲು ಸಾಧ್ಯವಾಗುತ್ತದೆ ಎಂದರು.

 

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಿರಗುಪ್ಪ ತಾಲ್ಲೂಕಿನ ಅಧ್ಯಕ್ಷ ಎ.ಯಲ್ಲಪ್ಪ ಆಶಯ ನುಡಿಗಳನ್ನಾಡಿ ಸಾಹಿತ್ಯ ಎಲ್ಲರಿಗೂ ಹಿತನೀಡುವಂತಿರಬೇಕು. ಯಾವ ಸಾಹಿತ್ಯ ಜಾತ್ಯಾತೀತವಾಗಿ, ಧರ್ಮಾತೀತವಾಗಿ, ಲಿಂಗಾತೀತವಾಗಿ ಸೃಜಿಸುವುದೋ ಅದು ಸಾರ್ವಕಾಲಿಕವಾಗಿ ನಿಲ್ಲಲು ಸಾಧ್ಯ. ಕುವೆಂಪುರವರಂತೆ ವಿಶ್ವಮಾನವ ಸಾಹಿತ್ಯವನ್ನು ಸೃಜಿಸುವತ್ತ ನಾವೆಲ್ಲರೂ ಮುಂದಾಗಬೇಕು ಎಂದರು.

 

ಜಿಲ್ಲಾ ಉಪಾಧ್ಯಕ್ಷೆ ಎಚ್.ಎಸ್. ಭಾನುಮತಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಇವನಾರವ ಇವನಾರವ ಎಂದಿನಿಸದೇ ಇವನಮ್ಮವ ಇವನಮ್ಮವ ಎಂದು ಎಲ್ಲರನ್ನೂ ಸಮೀಕರಿಸಿಕೊಂಡು ಸಾಗುತ್ತಿದೆ. ಈ ಗಾಗಲೇ ನೂರಾರು ಪ್ರತಿಭೆಗಳಿಗೆ ನಮ್ಮ ವೇದಿಕೆ ಬುನಾದಿಯಾಗಿ ನಿಂತಿದೆ. ನಮ್ಮ ವೇದಿಕೆಯ ಕಾರ್ಯಕ್ರಮಗಳು ಸದಾ ಕಮ್ಮಟಗಳಂತೆ ಸಾಹಿತ್ಯದ ಕಲಿಕಾರ್ಥಿಗಳಿಗೆ ಸ್ಫೂರ್ತಿ ನೀಡುತ್ತವೆ ಎಂದರು.

 

ಹಾಸನ ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ವತಿಯಿಂದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ, ಬೇಸಿಗೆ ಶಿಬಿರ, ಕೃತಿ ವಿಮರ್ಶೆ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಬಸವಣ್ಣ ಹಾಗೂ ಕುವೆಂಪು ಅವರ ತತ್ತ್ವಗಳಡಿಯಲ್ಲಿ ವಿಶ್ವಮಾನವ ಸಾಹಿತ್ಯ ಕಟ್ಟುವ ಹಿನ್ನೆಲೆಯಲ್ಲಿ ಸಾಹಿತ್ಯ ವೇದಿಕೆ ಕಾರ್ಯೋನ್ಮುಖವಾಗಿದೆ ಎಂದರು.

 

ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿ

 

ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಗೊರೂರು ಅನಂತರಾಜು, ಲಲಿತ ಎಸ್. ಸಕಲೇಶಪುರ, ಜಯಶಂಕರ್ ಬೆಳಗುಂಬ, ಮಲ್ಲೇಶ್ ಜಿ. ಹಾಸನ, ನೀಲಾವತಿ ಸಿ.ಎನ್., ವಾಣಿ ಮಹೇಶ್., ಗಿರಿಜಾ ನಿರ್ವಾಣಿ., ಸೌಮ್ಯ ಎನ್. ಪ್ರಸಾದ್, ಸಂತೋಷ್‌ಕುಮಾರಿ, ಎಚ್. ವೇದಶ್ರೀರಾಜ್, ನಾಗೇಂದ್ರ ಪ್ರಸಾದ್, ಗಿರೀಶ್ ಎಚ್. ಎಂ., ಭಾರತಿ ಎಚ್.ಎನ್., ತಿಪ್ಪೇಸ್ವಾಮಿ, ಚಂದ್ರಕಲಾ ಎಂ. ಆಲೂರು, ಶೋಭಾ ಹರೀಶ್, ಮಂಜುಳಾ ಪ್ರಸಾದ್, ಪದ್ಮಾವತಿ ವೆಂಕಟೇಶ್, ಮೇಘ ಬಾಗಿವಾಳು., ಹೇಮಲತಾ ಚನ್ನರಾಯಪಟ್ಟಣ, ಎಚ್. ಪರಮೇಶ್ವರಪ್ಪ, ಬೇಲೂರು, ಸಿಲ್ವೆಸ್ಟರ್ ಕ್ರಾಸ್ತ, ಆಲೂರು., ಖಾಜಿ ಶೇಖ್, ಶಿವಮೊಗ್ಗ., ಕಿರಣ್ ಕುಮಾರ್ ಬಿ., ಚಂದ್ರಕಿರಣ್ ಗುಜರ್, ಜಯರಮೇಶ್ ಸೇರಿದಂತೆ ಹಲವರು ಕಾವ್ಯ ವಾಚನ ಮಾಡಿದರು.

 

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಕನ್ನಡ ಸಾಹಿತ್ಯ ಪರಿಷತ್ ಹಾಸನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ವಿಜಯಕುಮಾರ್, ಗ್ಯಾರಂಟಿ ರಾಮಣ್ಣ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮವನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲ್ಲೂಕು ಮಹಿಳಾ ಕಾರ್ಯದರ್ಶಿ ಚಂದ್ರಕಲಾ ಎಂ. ಆಲೂರು ನಿರೂಪಿಸಿದರು, ಹಾಸನ ತಾಲ್ಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ಪದ್ಮಾವತಿ ವೆಂಕಟೇಶ್ ವಂದಿಸಿದರು.

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ