LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ನಾಯಕನಹಟ್ಟಿ: ಕ್ರೀಡಾಪಟುಗಳು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ, ಪ್ರತಿಯೊಬ್ಬರು ಗೆಲ್ಲುವ ಉತ್ಸಹದಿಂದ ಪಾಲ್ಗೊಳ್ಳುತ್ತಾರೆ. ಎಲ್ಲಾರು ಗೆಲ್ಲಲು ಸಾಧ್ಯವಿಲ್ಲ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ರಾಮಸಾಗರ ಮಹಂತೇಶ್ ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು.



ಸಮೀಪದ ರಾಮಸಾಗರ ಗ್ರಾಮದಲ್ಲಿ ಮಂಗಳವಾರ ದೀಪಾವಳಿ ಹಬ್ಬದ ಪ್ರಯುಕ್ತ ಕ್ರಿಕೇಟ್ ಟೂರ್ನಮೆಂಟ್ ಆಯೋಜಿಸಿ ನಂತರ ಮಾತನಾಡಿದ ಅವರು ಕ್ಷಣಿಕ ಸುಖಕ್ಕಾಗಿ ಜನರು ವ್ಯಸನಕ್ಕೆ ದಾಸರಾಗುವುದರೊಂದಿಗೆ ದುಶ್ಚಟಗಳ ಚಕ್ರವ್ಯೂಹದಲ್ಲಿ ಸಿಲುಕಿದರೆ ಅದರಿಂದ ಹೊರ ಬರುವುದು ಕಷ್ಟಸಾಧ್ಯ ಯುವ ಜನರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ನಿಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿ, ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕ, ಸಾಮಾಜಿ, ಅಭಿವೃದ್ಧಿ ಸಾಧ್ಯವಿದೆ ನಾವು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಪೋಷಕರು ನಿಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿಕೊಂಡರು. ದುಶ್ಚಟಗಳು ಸ್ವಲ್ಪ ಸುಖ ನೀಡಿದರು ನಂತರದಲ್ಲಿ ತಮ್ಮ ಅಮೂಲ್ಯವಾದ ಸಮಯ ಗೌರವವನ್ನು ಹಾಳು ಮಾಡುವ ಜೊತೆಗೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಕ್ರಿಕೇಟ್ ಟೂರ್ನಮೆಂಟ್‌ನಲ್ಲಿ ಆರ್.ಎಂ.ಎಸ್ ಕಿಂಗ್ ಮೊದಲ ಸ್ಥಾನ ಪಡೆದಿದೆ. ದ್ವಿತೀಯ ಸ್ಥಾನ ಲೆಜೆಂಡ್ ವಾರಿಯರ್ಸ್,  ತೃತೀಯ ಸ್ಥಾನ ಆರ್‌ಸಿಬಿ, ಹಾಗೂ 4ನೇ ಸ್ಥಾನ ಮದಕರಿ ಪಡೆದಿದೆ.  ಆರ್.ಎಂ.ಎಸ್ ಕಿಂಗ್ ತಂಡದ ನಾಯಕ ಬೋರೇಶ್, ಲೆಜೆಂಡ ವಾರಿಯರ್ಸ್  ತಂಡದ ನಾಯಕ ಸುನೀಲ್, ಆರ್‌ಸಿಬಿ ತಂಡದ ನಾಯಕ ಜಗದೀಶ್, ಮದಕರಿ ತಂಡದ ನಾಯಕ ಪುನೀತ್.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ರಾಮಸಾಗರ ಮಹಂತೇಶ್, ತಿಪ್ಪೇಸ್ವಾಮಿ ಮಾಜಿ ಗ್ರಾ.ಪಂ.ಉಪಾಧ್ಯಕ್ಷರು ಹಾಲಿ ಸದಸ್ಯ, ಸಣ್ಣಪಾಲಯ್ಯ, ಆರ್.ಜಿ.ಜಯಣ್ಣ, ಸಣ್ಣತಿಪ್ಪಯ್ಯ ಕಾಂತಣ್ಣ, ಗಜ್ಜುಗಾನಹಳ್ಳಿ ಓಬಣ್ಣ, ತೀರ್ಪುಗಾರರು ವೀರೇಶ್, ವೆಂಕಟೇಶ್, ಪಾರಿತೋಷಕ ದಾನಿಗಳಾದ ಪ್ರತೀಕ್ ಎಂ.ನಾಯಕ, ಹಾಗೂ ಕ್ರೀಡಾಪಟುಗಳು ಇನ್ನೂ ಇತರರು ಇದ್ದರು.


ಕ್ರೀಡಾಪಟುಗಳು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ, ಪ್ರತಿಯೊಬ್ಬರು ಗೆಲ್ಲುವ ಉತ್ಸಹದಿಂದ ಪಾಲ್ಗೊಳ್ಳುತ್ತಾರೆ. ಎಲ್ಲಾರು ಗೆಲ್ಲಲು ಸಾಧ್ಯವಿಲ್ಲ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ರಾಮಸಾಗರ ಮಹಂತೇಶ್


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ