LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಧರ್ಮೇಂದ್ರ ಪ್ರಧಾನ ರಾಜಿನಾಮೆಗೆ ಬಾಲಕೃಷ್ಣ ಸ್ವಾಮಿ ಆಗ್ರಹ

ನಾಯಕನಹಟ್ಟಿ :  ನೀಟ್ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದ ಉನ್ನತ ಅಧಿಕಾರಿಗಳಿಗೆ ಗಂಭೀರ ಶಿಕ್ಷೆಯಾಗಬೇಕು. ಇದರ ನೈತಿಕ ಹೊಣೆಹೊತ್ತು ದೇಶದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ಅವರು ರಾಜೀನಾಮೆ ನೀಡಬೇಕುಎಂದು ಕೆಪಿಸಿಸಿ ಮಾಧ್ಯಮ ವಕ್ತರ ಬಾಲಕೃಷ್ಣ ಸ್ವಾಮಿ ಯಾದವ್ ಆಗ್ರಹಿಸಿದ್ದಾರೆ

 

 

ನಂತರ ಮಾತನಾಡಿದ ಅವರು, ‘ನೀಟ್ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಸುಮಾರು 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದಾಳಿಯಾಗಿದೆ. ಎನ್ಟಿಎ ಸಂಸ್ಥೆ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿರುವುದು ಹೊಸದೇನಲ್ಲ. 2024ರಲ್ಲಿಯೂ ನೀಟ್ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದು ಮಾಡಲಾಗಿತ್ತುಎಂದರು.

 

ಎನ್ಟಿಎ ಹಾಗೂ ಶಿಕ್ಷಣ ಸಚಿವರು ಯಾರೂ ಸಹ ಇದರ ಹೊಣೆಹೊರುತ್ತಿಲ್ಲ. ಇವರ ಅಧಿಕಾರದ ಹಪಾಹಪಿಗೆ ದೇಶದ ಬಡಜನರ ಮಕ್ಕಳು ಬಲಿಯಾಗುತ್ತಿದ್ದಾರೆ. ಕೋಟಾದಂತಹ ಜಾಗಗಳಲ್ಲಿ ನರಕಯಾತನೆ ಅನುಭವಿಸುತ್ತಿರುವ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಆತ್ಮಹತ್ಯೆಯಲ್ಲ, ವ್ಯವಸ್ಥೆ ಹಾಗೂ ಸರ್ಕಾರ ಮಾಡುತ್ತಿರುವ ಸಾಂಸ್ಕೃತಿಕ ಕೊಲೆಗಳು. ವಿದ್ಯಾರ್ಥಿಗಳ ಬದುಕು ಬೀದಿಗೆ ತಂದ ದೇಶದ ವೈದ್ಯಕೀಯ ಶಿಕ್ಷಣದ ಪಾವಿತ್ರ್ಯವನ್ನು ಮಣ್ಣುಪಾಲು ಮಾಡಿದ ಎನ್ಟಿಎ ರದ್ದುಗೊಳಿಸಬೇಕುಎಂದು ಆಗ್ರಹಿಸಿದರು

 

ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST