LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಶಾಲಾ ಸಂಸತ್ ಚುನಾವಣೆಗೆ ಸಕಲ ಸಿದ್ಧತೆ

ನಾಯಕನಹಟ್ಟಿ : ಹೋಬಳಿಯ ಮಲ್ಲೂರಹಳ್ಳಿ ಗ್ರಾಮದ ಶ್ರೀ ತಿರುಚಿ ಮಹಾಸ್ವಾಮಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಚುನಾವಣಾ ಕಣವಾಗಿ ಬದಲಾಯಿತು. ಸ್ಪರ್ಧಿಗಳು ಸ್ವಂತ ಪ್ರಣಾಳಿಕೆ ಬಿಡುಗಡೆ ಮಾಡಿ ಸಹಪಾಠಿಗಳ ಮತವನ್ನು ಸೆಳೆಯುವ ಪ್ರಚಾರದಲ್ಲಿ ತೊಡಗಿದರು. ಎಳೆಯ ವಯಸ್ಸಿನಲ್ಲಿ ದೇಶದ ರಾಜಕೀಯ ವಿದ್ಯಮಾನದ ಸ್ವರೂಪ ಅರ್ಥ ಮಾಡಿಕೊಂಡು, ಪ್ರಜಾಸತಾತ್ಮಕ ವ್ಯವಸ್ಥೆಯ ಭಾಗೀದಾರರಾಗಲು ಮುನ್ನುಗ್ಗಿದರು. ನಾಮಪತ್ರ ಸಲ್ಲಿಸಿ, ಗೆಲುವಿನ ಮುನ್ನುಡಿ ಬರೆಯಲು ಸಿದ್ಧತೆ ಆರಂಭಿಸಿದರು.

 

ಚುನಾವಣಾ ಆಯೋಗ ಚುನಾವಣೆ ನಡೆಸುವ ಮಾದರಿಯಲ್ಲಿಯೇ  ಶಾಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಬೇಕು. ವಿದ್ಯಾರ್ಥಿ ನಾಯಕರ ಆಯ್ಕೆ ನಿಟ್ಟಿನಲ್ಲಿ ಪ್ರಕಟಣೆ ಹೊರಡಿಸಬೇಕು. ಸಚಿವರ ನೇಮಕ, ಮೀಸಲಾತಿ ವಿವರ, ಮತದಾನ ದಿನ, ನೋಟ ಮಾಹಿತಿ ನೀಡಿ ಮತದಾನಕ್ಕೆ ಸಜ್ಜುಗೊಳಿಸಬೇಕು. ಇವಿಎಂ ಯಂತ್ರ ಇಲ್ಲವೇ ಮತ ಪೆಟ್ಟಿಗೆ ಬಳಸಿ ಮತ ಚಲಾಯಿಸಲು ವ್ಯವಸ್ಥೆ ಮಾಡಬೇಕು. ನಂತರ ಮತ ಪ್ರಚಾರ, ಮತದಾನ, ಫಲಿತಾಂಶ ಘೋಷಣೆಗಳನ್ನು ನಿಯಮ ಬದ್ಧವಾಗಿ ನಡೆಸಬೇಕು. ಆ ಮೂಲಕ ಮಕ್ಕಳಿಗೆ ಮತದಾನದ ನೈಜ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಚುನಾವಣಾ ತಯಾರಿ ನಡೆಸಬೇಕು.

 

ಮುಖ್ಯ ಶಿಕ್ಷಕ ಗಿರಿನಾಯ್ಕ್ ಮಾತನಾಡಿ, ‘ಇಲಾಖೆ ನಿಯಮದಂತೆ ಸಂಸತ್ ರಚನೆ ನಡೆಯಲಿದೆ. ಸಂವಿಧಾನದ ಆಶಯದಂತೆ ಚುನಾವಣೆ ಹೇಗೆ ಮತ್ತು ಏಕೆ ನಡೆಯುತ್ತವೆ. ಆಯ್ಕೆಯಾದ ಸದಸ್ಯರು ಮಾಡಬೇಕಾದ ಕರ್ತವ್ಯ, ಹಕ್ಕು, ಬಾಧ್ಯತೆಗಳ ಬಗ್ಗೆ ಶಾಲೆಯಲ್ಲಿ ಜಾಗೃತಿ ಮೂಡಿಸಲಾಯಿತು. 18 ಸಂಪುಟ ದರ್ಜೆಯ ಮಂತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ’ ಎಂದರು.

 

ಎರಡು ದಿನಗಳಿಂದ ಚುನಾವಣೆ ಪೂರ್ವಭಾವಿ ಸಭೆಗಳು ನಡೆದವು. ಶಿಕ್ಷಕರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಬೆಳವಣಿಗೆ ಮತ್ತು ಮಕ್ಕಳು ತಯಾರಿಸಿಕೊಂಡ ಅಜೆಂಡಾವನ್ನು ಮನವರಿಕೆ ಮಾಡಿಕೊಟ್ಟು ಮತ ನೀಡುವಂತೆ ಮಕ್ಕಳು ಸ್ನೇಹಿತರನ್ನು ಕೇಳಿಕೊಂಡರು. ಶಾಲಾ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಯಂತ್ರದ ಮೂಲಕ ಮತ ಚಲಾಯಿಯಿಸಿದರು.



ಬಾಲಕ-ಬಾಲಕಿಯರು ತಮ್ಮ ಸ್ನೇಹಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಮತಯಾಚಿಸಿದರು. ಹಣ ಸೇರಿದಂತೆ ಯಾವುದೇ ಆಮಿಷಕ್ಕೆ ಒಳಗಾಗುವುದು ಅಪರಾಧ ಎಂಬುದನ್ನು ತಿಳಿಸಿಕೊಟ್ಟರು. ಮಕ್ಕಳು ಸಡಗರ ಸಂಭ್ರಮದ ನಡುವೆ ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾದರು. ವಿಜೇತರನ್ನು ಅಭಿನಂದಿಸಿದರು. ಮುಖ್ಯಮಂತ್ರಿ, ಶಿಕ್ಷಣ, ಸ್ವಚ್ಛತೆ, ನೀರಾವರಿ ಮಂತ್ರಿಗಳು ಆಯ್ಕೆಯಾದ ವಿವಿಧ ಮಜಲುಗಳನ್ನು ವೀಕ್ಷಿಸಿದರು.

 

‘ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ತಂದೆ-ತಾಯಿ, ನೆರೆಹೊರೆಯವರಿಗೆ ಮತದಾನ ನಮ್ಮ ಹಕ್ಕು ಎಂಬ ಬಗ್ಗೆ ಮಕ್ಕಳು ತಿಳಿಸಿಕೊಡಲಿದ್ದಾರೆ. ಮತದಾನ ನಿರ್ಲಕ್ಷಿಸದಂತೆ, ಇಷ್ಟವಿಲ್ಲದ ಸಂದರ್ಭದಲ್ಲಿ ‘ನೋಟ’ ಚಲಾಯಿಸುವ ಬಗ್ಗೆ ಅರಿವು ಮೂಡಿಸಲಿದ್ದಾರೆ. ಪ್ರಜಾತಂತ್ರದ ಹಬ್ಬ 5 ವರ್ಷಕ್ಕೆ ಒಮ್ಮೆ ಬರುತ್ತದೆ. ಮತದಾನ ಮಾಡಿ ಉತ್ತಮ ಪ್ರತಿನಿಧಿ ಆಯ್ಕೆ ಮಾಡಬಹುದು’ ಎಂಬ ವಿಷಯದ ಬಗ್ಗೆ ತಿಳಿಸಲು ಶಾಲಾ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ಹಿಸಿದ ಶಿಕ್ಷಕ ಪರ್ವತಯ್ಯ ಪಿ ಎಮ್ ಹೇಳಿದರು.

 

ಇದೆ ಸಂದರ್ಭದಲ್ಲಿ ಶಿಕ್ಷಕರಾದ ನಾಗರಾಜ್, ವೀರೇಶ ಜಿ ಎನ್, ಓಬಯ್ಯ ಡಿ ಪಿ , ಮೇಘಶ್ರೀ ಬಿ ಮತ್ತು ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಇಂದ್ರೇಶ್, ಜಗನ್ನಾಥ್ , ಶಿವಮ್ಮ , ನಾಗಾರ್ಜುನ, ಉಪೇಂದ್ರ  ಉಪಸ್ಥಿತರಿದ್ದರು.

 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ