LIVE TV StateNationalPoliticsCrimeEntertainmentSportsEducationFINANCE & TAXATION
Districts

ಅತ್ಯಾಧುನಿಕ ಕಂಟಿನ್ಯುಯಸ್ ಗಾಲ್ವನೈಜಿಂಗ್ ಲೈನ್ ಪ್ರಾರಂಭಿಸಿದ ಎಎಂ, ಎನ್ಎಸ್ ಇಂಡಿಯಾ

ಬೆಂಗಳೂರು : ಆರ್ಸಿಲಾರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ  ಗುಜರಾತ್ನ ಹಾಝಿರಾದಲ್ಲಿರುವ ತನ್ನ ಪ್ರಮುಖ ಕಾರ್ಖಾನೆಯಲ್ಲಿ ಹೊಸ ಅತ್ಯಾಧುನಿಕ ಕಂಟಿನ್ಯುಯಸ್ ಗಾಲ್ವನಿಜಿಂಗ್ ಲೈನ್ (ಸಿಜಿಎಲ್) ಪ್ರಾರಂಭಿಸಿರುವುದಾಗಿ ಘೋಷಿಸಿದೆ.

ಈ ಬೆಳವಣಿಗೆಯು, ಎಎಂ/ಎನ್ಎಸ್ ಇಂಡಿಯಾವನ್ನು, ಸದಾ ಬದಲಾಗುತ್ತಿರುವ ಸ್ವಯಂ ಚಾಲಿತ, ಸುರಕ್ಷಿತವಾದ, ದೀರ್ಘಕಾಲ ಬಾಳಿಕೆ ಬರುವ ಅತ್ಯಾಧುನಿಕ ಶಕ್ತಿಶಾಲಿ ಉಕ್ಕು ಉತ್ಪಾದಿಸುವ ಸಾಮರ್ಥ್ಯದ ಭಾರತದ ಏಕೈಕ ಆಧುನಿಕ ಸಿಜಿಎಲ್  ಲೈನ್ ಇದಾಗಿದೆ.

ಇದು ಸಂಸ್ಥೆಯ 60,000 ಕೋಟಿ ರೂ ವಿಸ್ತರಣಾ ಯೋಜನೆಯಾಗಿದ್ದು,  ಮೊದಲ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ 2022ರಲ್ಲಿ ಉದ್ಘಾಟಿಸಿದ್ದರು. ಸಂಯೋಜಿತ ಸ್ಟೀಲ್ ಕಾರ್ಖಾನೆಯಲ್ಲಿರುವ ಈ ವಿಸ್ತರಣಾ ಯೋಜನೆಯು ಸದಾ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಸ್ಟೀಲ್ ಗ್ರೇಡ್ಗಳ ವೈವಿಧ್ಯಮಯ  ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ.



ಹೊಸ ಸಿಜಿಎಲ್, ತನ್ನ ಮೂಲ ಸಂಸ್ಥೆಗಳಾದ ಆರ್ಸಿಲಾರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ನ ಸುದೀರ್ಘ ಜಾಗತಿಕ ನೈಪುಣ್ಯತೆಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡು, ಉನ್ನತ-ದರ್ಜೆಯ, ವಿಶೇಷ ಉಕ್ಕಿಗಾಗಿ ಬಹುತೇಕವಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಆಟೋಮೋಟಿವ್ ಕ್ಷೇತ್ರಕ್ಕೆ ಒಂದು ಮಹತ್ತರ ಪರಿವರ್ತನೆ ತರಲು ಸಜ್ಜಾಗಿದೆ.

ಆರ್ಸಿಲಾರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ ಮುಖ್ಯ ಕಾರ್ಯಕಾರಿ ಅಧಿಕಾರಿ ದಿಲಿಪ್ ಊಮ್ಮನ್ ಮಾತನಾಡಿ, "ಈ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಯತ್ನಗಳು ಈಗ ಸಾಕಾರಗೊಂಡಿದ್ದು, ಹೊಸ  ಮಾರ್ಗ ಮತ್ತು ಮುಂಬರುವ ಘಟಕವು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಸ್ತುತ ಲಭ್ಯವಿರುವ ಕೊಡುಗೆಗಳ ಗುಣಮಟ್ಟಕ್ಕೆ ಸಮನಾದ ಉಕ್ಕು ಉತ್ಪಾದಿಸಲು ವಿನ್ಯಾಸಗೊಂಡಿವೆ.  ಅಭಿವೃದ್ಧಿ ಹೊಂದಿದ ಭಾರತದ ದೂರದೃಷ್ಟಿಯೆಡೆಗೆ ಪ್ರಗತಿ ಹೊಂದುತ್ತಿರುವ ಸಮಯದಲ್ಲೇ ಅದಕ್ಕೆ ಅಗತ್ಯವಾದ ವರ್ಗದಲ್ಲೇ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ.” ಎಂದು ಹೇಳಿದರು.



ಸಂಸ್ಥೆಯು ಆಂಧ್ರಪ್ರದೇಶದಲ್ಲಿ ಒಂದು ಸಂಯೋಜಿತ ಉಕ್ಕಿನ ಕಾರ್ಖಾನೆ ಸ್ಥಾಪಿಸಲಿದ್ದು, ಈಗಾಗಲೇ ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ  ಪ್ರಾರಂಭವಾಗಿದೆ. ಒದಿಶಾದಲ್ಲೂ ಸಂಸ್ಥೆಯು ಮಹತ್ತರವಾದ ಅಸ್ತಿತ್ವ ಹೊಂದಿದ್ದು ಅಲ್ಲೂ ಕೂಡ ಸಂಯೋಜಿತ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ