LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಮುಂದಿನ ವರ್ಷ ಡಿಜಿಟಲೀಕರಣದ ಜೊತೆಗೆ ಎಟಿಎಮ್ ಸೇವೆ ಆರಂಭ

ಗಾಂಧಿನಗರದಲ್ಲಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯಾಚರಣೆಗೆ ಚಾಲನೆ: ಡಿ.ಆರ್.ವಿಜಯಸಾರಥಿ

 

ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಓಂ ಪ್ಲಾಜಾದಲ್ಲಿ ನೂತನವಾಗಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯಾಚರಣೆಗೆ ಅಧ್ಯಕ್ಷರಾದ  ಡಿ.ಆರ್.ವಿಜಯಸಾರಥಿ,  ಉಪಾಧ್ಯಕ್ಷರಾಗಿ ಡಾ. ಎಂ. ರಂಗಧಾಮಶೆಟ್ಟಿ ಚಾಲನೆ ನೀಡಿದರು.



ಅವಿನ್ಯೂ ರಸ್ತೆಯಲ್ಲಿದ್ದ ಬ್ಯಾಂಕ್ ಇದೀಗ ಗಾಂಧಿನಗರಕ್ಕೆ ಸ್ಥಳಾಂತರವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಡಿ.ಆರ್.ವಿಜಯಸಾರಥಿ, ಸಹಕಾರ ಕ್ಷೇತ್ರದಲ್ಲಿ ಬ್ಯಾಂಕ್ ನಿರ್ವಹಣೆಗೆ ಆರ್ಥಿಕ ಶಿಸ್ತು ಇರಬೇಕು. ಗ್ರಾಹಕರ ಠೇವಣಿಗೆ ಖಾತರಿ, ಸದಸ್ಯರಿಗೆ ಕೊಟ್ಟ ಸಾಲ ಮರುಪಾವತಿಯಾಗಲು ಸರಿಯಾದ ಕ್ರಮವಹಿಸಬೇಕು. ಆಗ ಮಾತ್ರ ಬ್ಯಾಂಕ್ ಅಭಿವೃದ್ದಿಯತ್ತ ಸಾಗುತ್ತದೆ, ಇಲ್ಲವಾದಲ್ಲಿ ಗ್ರಾಹಕನಿಗೆ ಮೋಸವಾಗುವ ಸಾಧ್ಯತೆ ಹೆಚ್ಚು ಎಂದರು.

 

ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಆರ್.ಬಿ.ಐ ನಿಯಮಗಳನ್ನು ಪರಿಪಾಲಿಸುತ್ತಾ, ಗ್ರಾಹಕರು, ಸದಸ್ಯರ ಹಿತ ಕಾಪಾಡುತ್ತಾ ಜನಸ್ನೇಹಿ ಬ್ಯಾಂಕ್ ಎಂಬ ಕೀರ್ತಿಗಳಿಸಿದೆ. ಬೆಂಗಳೂರಿನ 9 ಕಡೆಗಳಲ್ಲಿ ನಮ್ಮ ಬ್ಯಾಂಕ್ ಶಾಖೆಗಳನ್ನು ಹೊಂದಿದೆ.

ಬ್ಯಾಂಕ್ ನಲ್ಲಿ ಠೇವಣಿ ಮೇಳ ಅತ್ಯಂತ ಯಶ್ವಸಿಯಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಸಂಪೂರ್ಣ ಡಿಜಿಟಲೀಕರಣದ ಜೊತೆಗೆ ಎಟಿಎಮ್ ಸೆಂಟರ್ ಸಹ ಆರಂಭವಾಗಲಿದೆ. ಠೇವಣಿದಾರರಿಗೆ ಭದ್ರತೆ ಮತ್ತು ಸರಳ ಸಾಲ ಸೌಲಭ್ಯ ಸಿಗಲಿದೆ. ಮನೆ ಕಟ್ಟಲು, ಉನ್ನತ ವ್ಯಾಸಂಗ, ವ್ಯಾಪಾರ ವೃದ್ದಿಗೆ ಸಾಲ ನೀಡುತ್ತಿದ್ದು, ಮೂರು ಬಾರಿ ಕಾನೂನು ಸಲಹೆ ಪಡೆಯಲಾಗುತ್ತಿದೆ ಎಂದರು.



ನಿರ್ದೇಶಕರಾದ ವೆಂಕಟಾಚಲಪತಿ ಬಿ.ಎಲ್. ಪಿ. ರುದ್ರಮೂರ್ತಿ, ನಾಗಭೂಷಣ್, ಎಸ್. ಸತ್ಯಮೂರ್ತಿ, ಎಂ.ಸಿ. ಫಾಲನೇತ್ರ, ಲೋಹಿತ್ ಜಿ. ನಂಜೇಗೌಡ, ಪಿ.ಕೆ. ರವೀಂದ್ರ, ಎನ್. ಮಹಾಲಕ್ಷ್ಮಿ, ಎಚ್. ಮಾರುತಿ, ಅನ್ನಪೂರ್ಣಮ್ಮ, ರಚನಾ ಎಸ್, ಜಯಲಕ್ಷ್ಮಿ ಜಿ. ತೋಟಗೇರ. ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎನ್. ಕೃಷ್ಣಯ್ಯ ಶೆಟ್ಟಿ, ಪೂರ್ಣಾವಧಿ ಸಲಹೆಗಾರರಾಗಿ ಬಿ.ಆರ್. ನಾಗರಾಜ್ ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ