ಚಿತ್ರದುರ್ಗ:ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ(ರಿ).
ಜಿಲ್ಲಾಘಟಕವನ್ನು ನಗರದ ಪ್ರವಾಸಿ ಮಂದಿರದಲ್ಲಿ ಉದ್ಘಾಟನೆ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಘಟಕವನ್ನು ಉದ್ಘಾಟಿಸಿದ ಮಾತನಾಡಿದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ಕುಣಿಗಲ್ ರಮೇಶ್ ರವರು ರಾಜ್ಯದೆಲ್ಲೆಡೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮಟ್ಟಹಾಕುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆ,ತಾಲ್ಲೂಕು ಮಟ್ಟದಲ್ಲಿ ಘಟಕಗಳನ್ನು ಪ್ರಾರಂಭಿಸುತಿದ್ದು ಪ್ರಾಮಾಣಿಕ ಮಾಹಿತಿಹಕ್ಕು ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಜವಾಬ್ದಾರಿಗಳನ್ನು ನೀಡಿ ಜಾಗೃತಿ ಗೊಳಿಸುವುದರಿಂದಿಗೆ ಭ್ರಷ್ಟರವಿರುದ್ಧ ಸಮರಕ್ಕೆ ಮುಂದಾಗುತಿದ್ದೇವೆ ಎಂದರು.
2018 ರಲ್ಲಿ ಸ್ಥಾಪಿಸಿದ ಸಂಘಟನೆ ರಾಜ್ಯಾದ್ಯಂತ ನೂರಾರು ಮಾಹಿತಿಹಕ್ಕು ಕಾರ್ಯಕರ್ತನ್ನು ಹೊಂದಿದ್ದು ಆಗಿಂದಾಗ್ಗೆ ಮಾಹಿತಿಹಕ್ಕಿನ ಜವಾಬ್ದಾರಿಯುತ ನಡೆಗಳ ಬಗ್ಗೆ ಮಾರ್ಗದರ್ಶನ ನೀಡುವುದರೊಂದಿಗೆ ಹಲವು ಹೋರಾಟಗಳನ್ನು ಹಮ್ಮಿ ಕೊಂಡು ಯಶಸ್ಸು ಕಂಡಿದ್ದೇವೆ, ಸರ್ಕಾರ ಕ್ಕೆ ಗುತ್ತಿರುವ ವಂಚನೆಗಳನ್ನು ಬಯಲು ಮಾಡಿ, ಕೋಟ್ಯಾಂತರ ಮೌಲ್ಯದ ಜಮೀನುಗಳನ್ನು ಸರ್ಕಾರದ ವಶಕ್ಕೆ ಕೊಡಿಸಿದ್ದೇವೆ ಎಂದರು.
ಅಲ್ಲದೆ ರಾಜ್ಯದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷದ ಯಾವುದೇ ರಾಜಕಾರಣಿ ಇರಲಿ ಯಾವುದೇ ಇಲಾಖೆ ಯ ಎಷ್ಟೇ ಪ್ರಭಾವಿ ಅಧಿಕಾರಿಗಳಿರಲಿ ಎದೆಗುಂದದೆ ಅವರ ವಿರುದ್ಧಹೋರಾಟ ದರಣಿ,ಸತ್ಯಾಗ್ರಹ, ಪ್ರತಿಭಟನೆ. ನಡೆಸಿ ಸಾಮಾನ್ಯರಿಗೆ ನ್ಯಾಯ ಒದಗಿಸಿದ್ದೇವೆ, ರಾಜ್ಯದ ಯಾವುದೇ ಮೂಲೆಯಲ್ಲಿ ನ್ಯಾಯ ಸಮ್ಮತವಾದ ಯಾವುದೇ ಸಮಸ್ಯೆಗಳ ಪರಿಹಾರ, ನೊಂದವರ ನರೆವಿಗೆ ಮುಂದಾಗುತ್ತಿರುವ ಏಕೈಕ ಸಂಘಟನೆ ಎಂದು ಹೆಸರುಗಳಿಸಿದ್ದೇ ಎಂದರು.
ಜಿಲ್ಲಾ ಘಟಕದ ಪದಾದಿಕಾರಿಗಳು:
ಜಿಲ್ಲಾ ಅಧ್ಯಕ್ಷರು ಎಸ್.ಯರ್ರಿಸ್ವಾಮಿ,
ಉಪಾಧ್ಯಕ್ಷರು ಮನೋಹರ, ಪ್ರದೀಪ್, ಮಂಜುನಾಥ್್
ಪ್ರದಾನ ಕಾರ್ಯದರ್ಶಿ, ನಾಗರಾಜ ಎಂ ಚಿಕ್ಕಪನಹಳಿ
ಸಹ ಕಾರ್ಯದರ್ಹಿ ಡಿ ಮಹತೇಶ್
ಕಾನೂನು ಸಲಹೆಗಾರರು ರಾಘವೇಂದ್ರ
ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ಹೆಚ್.ವೆಂಕಟೇಶ್ ಬೋವಿ, ಪ್ರದಾನ ಕಾರ್ಯದರ್ಶಿ ರುದ್ರೇಶ್, ಕಾರ್ಯದರ್ಶಿ ಚಂದ್ರಶೇಖರ್. ಡಿ.ಉಪ್ಪಾರ್, ತುಮಕೂರು ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀ ಅಮರೇಶ್,ಶಿವಮೊಗ್ಗ ಜಿಲ್ಲಾ ಅಧ್ಯಕ್ಷ. ಮೂರ್ತಿ ಉಪಸ್ಥಿತರಿದ್ದರು.