LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಬಳ್ಳಾರಿ: ಬಳ್ಳಾರಿಯ 3ನೇ ವಾರ್ಡಿನ ಎಪಿಎಂಸಿ ಸರ್ಕಲ್'ನಿಂದ ಡಿವೈಎಸ್ಪಿ ಕಚೇರಿವರೆಗೆ ವಯಾ ಬೆಂಕಿ ಮಾರೆಮ್ಮ ದೇವಸ್ಥಾನದ ರಸ್ತೆಗೆ ಅಂದಾಜು 4.50 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು. ಸಂದರ್ಭ ಪಾಲಿಕೆಯ ಸದಸ್ಯ ಎಂ.ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ವಾಸು ರೆಡ್ಡಿ, ಸ್ಥಳೀಯರಾದ ಭರತ್, ಕವಿತಾ, ಕುಮಾರನ್ ಮತ್ತಿತರರು ಹಾಜರಿದ್ದರು.

ಅದೇ ರೀತಿ ಬಳ್ಳಾರಿಯ 7ನೇ ವಾರ್ಡಿನ ಬಾಪೂಜಿ ನಗರದ ಕಮೇಲಾ ಆಸ್ಪತ್ರೆಯ ಪಕ್ಕದಿಂದ ಮುಖ್ಯ ಕಾಲುವೆ, ರಸ್ತೆ ಹಾಗೂ ಬಾಪೂಜಿ ನಗರ ಸರ್ಕಲ್ ಬಳಿ ಕಲ್ವರ್ಟ್ ನಿರ್ಮಾಣಕ್ಕಾಗಿ 1.50 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಸಂದರ್ಭ ವಾರ್ಡಿನ ಮುಖಂಡ ಶಿವರಾಜ್, ಭರತ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಸ್ಥಳೀಯ ಮುಖಂಡರಾದ ಬಾಲರಾಜು, ಬುಜ್ಜಿ, ಸತೀಶ್, ಕವಿತಾ ಮತ್ತಿತರರು ಹಾಜರಿದ್ದರು.

news_1779470692_1_907.webp

 

ತದನಂತರ ಬಳ್ಳಾರಿಯ 8ನೇ ವಾರ್ಡಿನ ಆರ್ಡರ್ ಗೇಟ್ ಸರ್ಕಲ್' ಗಂಗಮ್ಮ ನಾಲಾವರೆಗೆ ರಸ್ತೆ ನಿರ್ಮಾಣಕ್ಕಾಗಿ 4 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರು ಚಾಲನೆ ನೀಡಿದರು.

ಸಂದರ್ಭ ವಾರ್ಡಿನ ಸದಸ್ಯ ರಾಮಾಂಜನೇಯ, ಮುಖಂಡರಾದ ಸುಬ್ಬರಾಯುಡು, ಫಕ್ಕೀರಪ್ಪ, ಯರ್ರಿಸ್ವಾಮಿ, ವೆಂಕಟರಾಮರೆಡ್ಡಿ, ವಿಷ್ಣು, ಆನಂದ ರೆಡ್ಡಿ, ಸುರೇಶಬಾಬು, ವಿ.ವೆಂಕಟೇಶುಲು ಮತ್ತಿರರು ಹಾಜರಿದ್ದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ