LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿ ಬೋಸಮ್ಮ ಅವಿರೋಧ ಆಯ್ಕೆ

ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 15ನೇ ವಾರ್ಡಿನ ಪಿ. ಬೋಸಮ್ಮ ಮಂಜುನಾಥ ಅವಿರೋಧವಾಗಿ ಆಯ್ಕೆಯಾದರು.

 

ಪಟ್ಟಣ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆಯಾದ ಸರ್ವಮಂಗಳಉಮಾಪತಿ ಇವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೋಸಮ್ಮ ಮಂಜುನಾಥ ನಾಮಪತ್ರವನ್ನು ಸಲ್ಲಿಸಿದರು. ಅವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ರೆಹಾನ್‌ಪಾಷ ಘೋಷಿಸಿದರು.

 

ನೂತನ ಉಪಾಧ್ಯಕ್ಷೆ ಪಿ.ಬೋಸಮ್ಮಮಂಜುನಾಥ ಮಾತನಾಡಿ ಅವಿರೋಧವಾಗಿ ಆಯ್ಕೆಮಾಡಿದಂತಹ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗಳಿಗೆ, ಕಾಂಗ್ರೆಸ್ ಮುಖಂಡರುಗಳಿಗೆ, ತಳಕು-ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ್‌ರೆಡ್ಡಿ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ, ಬೋರನಾಯಕ, ಡಿ.ಧನಂಜಯ, ರ‍್ರಿಸ್ವಾಮಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಬಂದರೆ ಬಗೆಹರಿಸುತ್ತೇನೆ ಎಂದರು.



16ಜನ ಸದಸ್ಯರಲ್ಲಿ 14 ಕಾಂಗ್ರೆಸ್ ಪಕ್ಷದ ಸದಸ್ಯರು,  ಎರಡು ಬಿ.ಜೆ.ಪಿ. ಪಕ್ಷದ ಸದಸ್ಯರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆ ಸುನಿತಮುದಿಯಪ್ಪ ಮತ್ತು ಬಿ.ಜೆ.ಪಿ. ಪಕ್ಷದ ಸದಸ್ಯ ಎನ್.ಮಹಂತಣ್ಣ ಗೈರು ಹಾಜರಾಗಿದ್ದರು.

ಚುನಾವಣೆ ಅಧಿಕಾರಿಯಾಗಿ ಚಳ್ಳಕೆರೆ ತಹಶೀಲ್ದಾರ್ ರೆಹಾನ್‌ಪಾಷ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಸಿ.ಪಿ.ಐ. ಹನುಮಂತಪ್ಪ ಶೀರಹಳ್ಳಿ, ನಾಯಕನಹಟ್ಟಿ ಪೊಲೀಸ್‌ಠಾಣೆ ಪಿ.ಎಸ್.ಐ. ಪಾಂಡುರಂಗಪ್ಪ, ಎ.ಎಸ್.ಐ.ತಿಪ್ಪೇಸ್ವಾಮಿ, ಪೇದೆಗಳಾದ ಅಣ್ಣಪ್ಪನಾಯಕ, ಪೊಲೀಸ್ ಸಿಬ್ಬಂದಿಗಳು, ಸಂದೀಪ್, ತಿಪ್ಪೇಸ್ವಾಮಿ, ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಶ್ರೀಕಾAತ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ತಿಪ್ಪೇಸ್ವಾಮಿ, ಸದಸ್ಯರುಗಳಾದ ಸೈಯದ್‌ಅನ್ವರ್, ಜಾಗನೂರಹಟ್ಟಿ ಎಂ.ಟಿ.ಮಂಜುನಾಥ, ಈರಮ್ಮ, ಪಾಪಕ್ಕ, ಮಹೇಶ್ವರಿ, ಅಬಕಾರಿ ತಿಪ್ಪೇಸ್ವಾಮಿ, ಜೆ.ಆರ್.ರವಿಕುಮಾರ್, ಪೆದ್ದನಓಬಯ್ಯ, ಗುರುಶಾಂತಮ್ಮ, ವಿನುತ, ಸರ್ವಮಂಗಳಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ರೆಡ್ಡಿ, ಎತ್ತಿನಹಟ್ಟಿ ಗೌಡ್ರು, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ, ಜಿ.ಎಂ.ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ