LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಭಾವೈಕ್ಯತೆಯ ಮೊಹರಂ ಆಚರಿಸಿ :ಅಮೋಜ್ ಕಾಂಬಳೆ

ಸುರಪುರ : ಶಾಂತಿ ಮತ್ತು ಸೌಹಾರ್ದತೆಯಿಂದ ಶಾಂತಿಯುತವಾಗಿ ಕೆ. ತಳ್ಳಳ್ಳಿ ಗ್ರಾಮಸ್ಥರೆಲ್ಲರೂ ಮೊಹರಂ ಹಬ್ಬ ಆಚರಿಸಿ ಎಂದು ಪಿಎಸ್ ಅಮೋಜ್ ಕಾಂಬಳೆ ಹೇಳಿದರು.

 

ಸುರಪುರ ತಾಲ್ಲೂಕಿನ ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕುರುಬನ ತಳ್ಳಳ್ಳಿ ಗ್ರಾಮದಲ್ಲಿ  ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಲ್ಲಿ ಹಿಂದೂ-ಮುಸ್ಲಿಂ ಜನರು ಭಾವೈಕ್ಯದಿಂದ ಮೊಹರಂ ಆಚರಿಸುತ್ತಾ ಬಂದಿದ್ದಾರೆ. ವರ್ಷವು ಕೂಡ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ, ಪೊಲೀಸ್ ಇಲಾಖೆಯ ವತಿಯಿಂದ ಅಗತ್ಯವಿರುವ ಭದ್ರತೆ ಒದಗಿಸುತ್ತೇವೆ. ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವ ಮೂಲಕ ಗದ್ದಲ - ಗಲಾಟೆ ಮಾಡಿ, ಶಾಂತಿಗೆ ಭಂಗ ತೋರುವಂತಹ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದರು. ಏನೇ ತೊಂದರೆ ಆದರೂ ಗ್ರಾಮಸ್ಥರು ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.

 

ಸಂದರ್ಭದಲ್ಲಿ ಎಎಸ್ ಮೋನಪ್ಪ, ಪ್ರಭುಗೌಡ ಬಿರಾದಾರ, ಸಿಬ್ಬಂದಿಗಳಾದ ಸುರೇಶ ಸೇರಿದಂತೆ ಕೆ. ತಳ್ಳಳ್ಳಿ ಗ್ರಾಮದ ಹಿರಿಯರು, ಮುಖಂಡರು ಮತ್ತು ಯುವಕರು ಇದ್ದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST