LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದನ್ನು ನಿಲ್ಲಿಸಬೇಕಿದೆ

ನಾಯಕನಹಟ್ಟಿ: ಪೋಕ್ಸೋ ಕಾಯ್ದೆಯು ಬಾಲ್ಯ ವಿವಾಹ ನಡೆಸುವ ಪೋಷಕರ ನೆತ್ತಿಯ ಮೇಲೆ ಸದಾ ತೂಗುವ ಕತ್ತಿ ಇದ್ದಂತೆ ಹಾಗಾಗಿ ಪ್ರತಿಯೊಬ್ಬ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡುವುದರ ಜೊತೆಗೆ ಬಾಲ್ಯ ವಿವಾಹ ಮಾಡುವುದನ್ನು ನಿಲ್ಲಿಸಬೇಕಿದೆ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಪಾಂಡುರಂಗಪ್ಪ ತಿಳಿಸಿದರು.

ಅವರು ಪಟ್ಟಣದ  ವಿದ್ಯಾ ವಿಕಾಸ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಕಾನೂನು ಸೇವೆಗಳ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ರಕ್ಷಣಾ ಘಟಕ ಹಾಗೂ ಆಶ್ರಿತ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹೆಣ್ಣಾಗಲಿ ಗಂಡಾಗಲಿ ಅಪ್ರಾಪ್ತ ವಯಸ್ಸಿನಲ್ಲಿ ಕಡ್ಡಾಯವಾಗಿ ಶಿಕ್ಷಣ ನೀಡಿ.ಹೆಣ್ಣು ಮಕ್ಕಳು ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹಲ್ಲೆಗೊಳಗಾದಾಗ ಧೈರ್ಯವಾಗಿ ಪ್ರತಿರೋಧಿಸಿ, ನಿಮ್ಮ ಸುತ್ತಲಿನ ಕೆಟ್ಟ ಪರಿಸ್ಥಿತಿಗಳನ್ನು ವಿರೋಧಿಸದೆ ಮೌನವಾಗಿದ್ದರೆ ಅದನ್ನು ಸಮ್ಮತಿ ಎಂದುಕೊಂಡು ಕಿಡಿಗೇಡಿಗಳು ನಿಮ್ಮ ಮೇಲೆ ಮತ್ತಷ್ಟು ಕಿರುಕುಳ ಕೊಡುತ್ತಾರೆ ಎಂದು ತಿಳಿಸಿದರು.



ಡಿ.ಸಿ.ಪಿ.ಓ.ವಿನಯ್ ಮಾತನಾಡಿ , ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಮುಂದುವರಿಸುವ ಪೂರಕ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿ ಕೊಡಬೇಕು. ಸಂಬಂಧಗಳ ವಿಚಾರಕ್ಕೆ ಅಪ್ರಾಪ್ತ ಬಾಲಕರಿಗೆ ಮದುವೆ ಮಾಡಿದರೆ ಕಾನೂನು ರೀತ್ಯಾ ಅಂತಹ ಪೋಷಕರನ್ನು ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದರಲ್ಲದೆ, ಶಿಕ್ಷಣದಿಂದ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸದೃಢ ದೇಶವನ್ನು ಕಟ್ಟಬಹುದು ಹಾಗಾಗಿ ಯುವಜನತೆ ಮೊಬೈಲ್ ಗಳನ್ನು ತ್ಯಜಿಸಿ ಶಿಕ್ಷಣದೆಡೆಗೆ ಗಮನ ಕೊಡಿ ಎಂದು ಕರೆ ನೀಡಿದರು.

ಆರೋಗ್ಯ ಇಲಾಖೆಯ ಶೇಷಾದ್ರಿ, ಸಖಿ ಕೇಂದ್ರದ ಶೃತಿ. ರೇಖಾ. ಮಾತನಾಡಿದರು. ಎ.ಎಸ್ಐ. ಧನಂಜಯ, ಆಶ್ರಿತ ಸಂಸ್ಥೆಯ ಎಸ್ ಚಂದ್ರಣ್ಣ ಸೇರಿದಂತೆ ತಿಪ್ಪೇಸ್ವಾಮಿ, ಶಂಕರ್ ಸ್ವಾಮಿ  ದೇವಿರಮ್ಮ, ಯುವರಾಜ್, ಸಿಡಿಪಿಓ ಇಲಾಖೆಯ ಸೌಮ್ಯ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯೆ ಸುನಿತ ಮುದಿಯಪ್ಪ  ಮತ್ತು ವಿನುತಾ ಹಾಗೂ  ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಜರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ