LIVE TV StateNationalPoliticsCrimeEntertainmentSportsEducationFINANCE & TAXATION
Districts

ಸೀಮಿತ ಆವೃತ್ತಿಯ ಕೋಕಾ-ಕೋಲಾ ಕಲರ್-ಚೇಂಜಿಂಗ್ ಕಪ್ಗಳನ್ನು ಉಚಿತವಾಗಿ ಪಡೆಯುವ ಅವಕಾಶ

ಮೆಕ್‌ಡೊನಾಲ್ಡ್ಸ್ ಇಂಡಿಯಾ ಸಲದ ನವರಾತ್ರಿಯನ್ನು ರಂಗು-ರಂಗಾಗಿಸಲಿದೆ

 

ಬೆಂಗಳೂರು: ಮೆಕ್‌ಡೊನಾಲ್ಡ್ಸ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ತನ್ನ ಅಭಿಮಾನಿಗಳಿಗೆ ಈ ಸಲ ನವರಾತ್ರಿಗೆ ರಂಗು-ರಂಗಿನ ಸಡಗರವನ್ನು ನೀಡಲಿದೆ. ಕೋಕಾ-ಕೋಲಾ ಜೊತೆ ಕೈಗೂಡಿಸಿರುವ ಮೆಕ್‌ಡೊನಾಲ್ಡ್ಸ್ ಇಂಡಿಯಾ, ಕೋಕಾ-ಕೋಲಾ ಕಲರ್-ಚೇಂಜಿಂಗ್ ಕಪ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಮೊದಲ ಬಾರಿಗೆ ಪರಿಚಯಿಸುತ್ತಿದೆ. ಆದರೆ ಇದು, ಸೀಮಿತ ಅವಧಿಗೆ ಮಾತ್ರ - ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2, 2025 ರವರೆಗೆ. ಮುಂಬೈ ಮತ್ತು ಬೆಂಗಳೂರಿನ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳಲ್ಲಿ ಈ ವಿಶೇಷವಾದ, ಸೀಮಿತ ಆವೃತ್ತಿಯ ಕಪ್‌ಗಳು ದೊರೆಯುತ್ತವೆ.

 

ಆಯ್ದ ಮೆಕ್‌ಡೊನಾಲ್ಡ್ಸ್ ಲಾರ್ಜ್ ಮೀಲ್ಸ್ ಖರೀದಿಸುವ ಗ್ರಾಹಕರಿಗೆ ಕಲರ್ ಚೇಂಜಿಂಗ್ ಕಪ್ ಉಚಿತವಾಗಿ ದೊರೆಯುತ್ತದೆ. ಮೆಕ್‌ಡೆಲಿವರಿ, ಸ್ವಿಗ್ಗಿ ಅಥವಾ ಜೊಮಾಟೊ ಮೂಲಕ ಆಯ್ದ  ಮೀಡಿಯಮ್ ಬರ್ಗರ್‌ ಮೀಲ್ ಗಳನ್ನು ಖರೀದಿಸುವವರಿಗೂ ಈ ಕಪ್ ಗಳು ಉಚಿತವಾಗಿ ದೊರೆಯುತ್ತವೆ.



ಈ ಸೀಮಿತ ಆವೃತ್ತಿಯಲ್ಲಿ ಆರು ಆಕರ್ಷಕ ಬಣ್ಣಗಳ - ಹಳದಿ, ಕೆಂಪು, ನೀಲಿ, ಹಸಿರು, ಗುಲಾಬಿ ಮತ್ತು ಬೂದು - ಲೋಹದ ಕಪ್‌ಗಳಿರುತ್ತವೆ. ಇವುಗಳಲ್ಲಿ ತಂಪಾದ ಕೋಕಾ-ಕೋಲಾ ಅಥವಾ ಇತರ ಪಾನೀಯಗಳನ್ನು ತುಂಬಿಸಿದರೆ ಆಗ ಈ ಕಪ್ ಗಳ ಬಣ್ಣ ಬದಲಾಗುತ್ತದೆ.

 

ಈ ಆಕರ್ಷಕವಾದ ಕಪ್‌ಗಳನ್ನು ಉಚಿತವಾಗಿ ಪಡೆಯಲು: ರೆಸ್ಟೋರೆಂಟ್ ನಲ್ಲಿ ಸೆಲೆಕ್ಟ್ ಲಾರ್ಜ್ ಮೀಲ್ಸ್‌ ಖರೀದಿಸಿ; ಅಥವಾ ಮೆಕ್‌ಚೀಸ್ ವೆಜ್/ಚಿಕನ್, ಮೆಕ್‌ಸ್ಪೈಸಿ ಪ್ರೀಮಿಯಂ ವೆಜ್/ಚಿಕನ್, ಅಥವಾ ಮಹಾರಾಜ ಮ್ಯಾಕ್ ವೆಜ್/ಚಿಕನ್ ನಂತಹ ಆಯ್ದ ಮೀಡಿಯಂ ಮೀಲ್ಸನ್ನು ಡೆಲಿವರಿ ಮೂಲಕ ಖರೀದಿಸಿ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ