LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ವಾಣಿಜ್ಯ ಶಿಕ್ಷಣವೇ ಆರ್ಥಿಕ ಜ್ಞಾನದ ಬಾಗಿಲು – ಡಾ. ವೆಂಕಟೇಶ್ ಬಾಬು

ದಾವಣಗೆರೆ: ವಿದ್ಯಾರ್ಥಿಗಳಿಗೆ ಶಿಸ್ತು, ಆದರ್ಶ ಹಾಗೂ ಆರ್ಥಿಕ ಜ್ಞಾನದ ಬೆಳಕು ನೀಡುವುದೇ ವಾಣಿಜ್ಯ ಶಿಕ್ಷಣ   ಎಂದು ಡಾ ವೆಂಕಟೇಶ್ ಬಾಬು ಹೇಳಿದರು. ಅವರಿಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಭದ್ರಾ ಎಜುಕೇಶನ್ ಟ್ರಸ್ಟ್‌ ವತಿಯಿಂದ ಭದ್ರಾ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಪ್ರೇರಣಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದರು

 

 ಡಾ ವೆಂಕಟೇಶ್ ಬಾಬು ಮಾತನಾಡುತ್ತಾ, “ವಾಣಿಜ್ಯ ಶಿಕ್ಷಣವೇ ಆರ್ಥಿಕ ಜ್ಞಾನವನ್ನು ಹತ್ತಿರದಿಂದ ಅರಿಯಲು ದಾರಿ ತೋರಿಸುವ ಪ್ರಮುಖ ಬಾಗಿಲು. ಇಂದು ಉದ್ಯೋಗ, ಉದ್ಯಮ, ಹಣಕಾಸು ನಿರ್ವಹಣೆ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳಿವೆ” ಎಂದು ತಿಳಿಸಿದರು. ವಾಣಿಜ್ಯ ಶಿಕ್ಷಣವು ಜ್ಞಾನ, ನೈಪುಣ್ಯ ಹಾಗೂ ನೈತಿಕತೆಯ ಸಮನ್ವಯವಾಗಿದ್ದು, ಹೊಸತನ್ನು ಕಲಿಯುವ ಕುತೂಹಲವನ್ನು ಹುಟ್ಟುಹಾಕುತ್ತದೆ ಎಂದರು.



ವಾಣಿಜ್ಯ ವಿಷಯವನ್ನು ಕಲಿಯಲು ಬೇಕಾದ ಕೌಶಲ್ಯಗಳನ್ನು ಕಲಿತು ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾದ ಮಾಹಿತಿ ಕಾರ್ಪೊರೇಟ್ ಜಗತ್ತಿನ ಆಳಬಹುದು ಎಂದು ವಿದ್ಯಾರ್ಥಿಗಳಿಗೆ ಉದಾಹರಣೆಗಳ ಮೂಲಕ ಹುರಿದುಂಬಿಸಿದರು

 

ಕಾರ್ಯಕ್ರಮದಲ್ಲಿ  ಅತಿಥಿಯಾಗಿದ್ದ ಶ್ರೀ ಸಿ.ಎಚ್. ಮುರಗೆಂದ್ರಪ್ಪ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ಭವಿಷ್ಯವನ್ನು ದೃಷ್ಟಿ ಪೂರಕವಾಗಿ ರೂಪಿಸಬೇಕು. ಶಿಕ್ಷಣವು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳು ತಾವು ಹೇಗಿರಬೇಕು ಎಂಬ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ಸಾಧಿಸುವ ದೃಢ ನಿರ್ಧಾರವೂ ಇರಬೇಕು ಎಂದು ಕರೆ ನೀಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಂದ್ರಪ್ಪ ಡಿ. ಪ್ರಾಂಶುಪಾಲರು, ಭದ್ರಾ ಪದವಿ ಪೂರ್ವ ಕಾಲೇಜು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರೊ. ಟಿ. ಮಾರುಗೇಶ ಪ್ರಾಂಶುಪಾಲರು, ಭದ್ರಾ ಪದವಿ ಕಾಲೇಜು , ಶ್ರೀ ಎಂ. ಸಂಕೇತ್    ಲಕ್ಷ್ಮಿ ನವೀನ್ ಸುಮ ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ