LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಆಗಸ್ಟ್ 26 ರಂದು ತುಂಗಭದ್ರಾ ಆರತಿ ಉತ್ಸವ ಆಚರಣೆಗೆ ನಿರ್ಧಾರ

ಕೊಪ್ಪಳ: ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಆಗಸ್ಟ್ 26 ರಂದು ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.

ಅವರು ರವಿವಾರದಂದು ಕೊಪ್ಪಳ ತಾಲ್ಲೂಕಿನ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಕಛೇರಿ ಸಭಾಂಗಣದಲ್ಲಿ ಕರೆದ ಶ್ರೀ ಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಉತ್ಸವ ಆಚರಣೆಯ ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀ ಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮವನ್ನು ಆ.26ರ ಮಂಗಳವಾರ ಸಾಯಂಕಾಲ 6.30 ಕ್ಕೆ ನಡೆಸಲಾಗುವುದು. ತುಂಗಭದ್ರಾ ಆರತಿ ದಿವಸ ಗರ್ಭಗುಡಿಯಲ್ಲಿ ಶ್ರೀ ದೇವಿಯವರಿಗೆ ವಿಶೇಷ ಹೂವಿನ ಅಲಂಕಾರ, ಒಳಭಾಗ, ಹೊರಭಾಗ, ಸುತ್ತಲೂ, ಮುಂಭಾಗದ ಗೋಪುರದ ಕೈಪಿಡಿ ಗೊಂಬೆಗಳಿಗೆ ಮತ್ತು ನದಿತೀರದಲ್ಲಿ ವೇದಿಕೆಗೆ ಹೂವಿನ ಅಲಂಕಾರ ಮಾಡಲಾಗುವುದು. ತುಂಗಭದ್ರಾ ಆರತಿ ಬಗ್ಗೆ, ವ್ಯಾಪಕ ಪ್ರಚಾರ ಮಾಡಲು 20 ಪ್ಲೆಕ್ಸ್ ಬ್ಯಾನರ್‌ಗಳನ್ನು ಮಾಡಿಸಿ, ಹುಲಿಗಿ ಸರ್ಕಲ್, ನಿಂಗಾಪುರ ಕ್ರಾಸ್, ರೈಲ್ವೆ ಗೇಟು ಹತ್ತಿರ, ಶಿವಪುರ ರಸ್ತೆ, ಹಿಟ್ನಾಳ್ ಕಮಾನಿನ ಹತ್ತಿರ ಮತ್ತು ಹೊಸಪೇಟೆ, ಕೊಪ್ಪಳ, ಗಂಗಾವತಿಯಲ್ಲಿಯೂ ಅಂಟಿಸಿ ಹೆಚ್ಚಿನ ಪ್ರಚಾರಪಡಿಸುವ ಉದ್ದೇಶ ಹೊಂದಲಾಗಿದೆ. ದೇವಸ್ಥಾನಕ್ಕೆ ಮತ್ತು ನದಿತೀರದಲ್ಲಿ, ವೇದಿಕೆ, ಲೈಟಿಂಗ್ ಡೆಕೊರೇಶನ್ ಮಾಡಬೇಕು ಮತ್ತು ನದಿಯಲ್ಲಿರುವ ಬಂಡೆಗಳಿಗೆ ಸ್ಪಾಟ್ ಲೈಟುಗಳನ್ನು ಹಾಕುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.



ದೇವಸ್ಥಾನದ ಪೂರ್ವ ಗೋಪುರದಿಂದ ನದಿತೀರದವರೆಗೆ ಮತ್ತು ದೇವಸ್ಥಾನದ ಮುಂಭಾಗದಿAದ 2ನೇ ಗೇಟಿನವರೆಗೆ ರೆಡ್ ಮ್ಯಾಟ್ ಹಾಕಲಾಗುವುದು. ದೇವಸ್ಥಾನದ ತಾಯಿ ಮುದ್ದಮ್ಮನ ಕಟ್ಟೆಯಿಂದ ಗಣ್ಯ ಮಾನ್ಯರನ್ನು ಕುಂಭ ಮತ್ತು ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಕರೆತಂದು ದರ್ಶನದ ನಂತರ ನದಿತೀರದ ವೇದಿಕೆಗೂ ಸಹ ವಾದ್ಯದೊಂದಿಗೆ ಅವರನ್ನು ಕರೆದುಕೊಂಡು ಹೋಗುವ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2025ರ ಜಾತ್ರೆಯಲ್ಲಿ ಮಹಾದಾಸೋಹದಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಸೇವಾಕರ್ತರಿಗೆ ಸನ್ಮಾನ ಮಾಡಲಾಗುವುದು. ಬೆಳಿಗ್ಗೆ ಹೋಮಕ್ಕೆ ಮತ್ತು ತುಂಗಭದ್ರಾ ಆರತಿಗೆ 15 ಜನ ಅರ್ಚಕರನ್ನು ಕರೆಸಿ, ಅವರಿಗೆ ಒಂದೇ ತರಹದ ಸಮವಸ್ತ್ರ ಕೊಡಿಸಲಾಗುವುದು. ಇದಲ್ಲದೆ ಚಂಡಿಕಾ ಹೋಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ  ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಪ್ರಥಮ ಬಾರಿಗೆ ತುಂಗಭದ್ರಾ ಆರತಿ ಉತ್ಸವವನ್ನು ತುಂಗಭದ್ರಾ ನದಿಯ ತೀರದಲ್ಲಿ ವಿಜ್ರಂಭಣೆಯಿAದ ಆಚರಿಸಲು ನಿರ್ಧರಿಸಿದೆ. ಈ ಉತ್ಸವವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ಪ್ರಮುಖವಾಗಿ ಐದು ಕಮಿಟಿಗಳನ್ನು ರಚಿಸಲಾಗಿದೆ. ಈ ಉತ್ಸವದ ನಿಮಿತ್ತ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಅನ್ನ ಸಂತರ್ಪಣೆ ಮತ್ತು ವಿಶೇಷವಾಗಿ ತುಂಗಭದ್ರಾ ಆರತಿ ಉತ್ಸವವನ್ನು  ಶ್ರೀ ದೇವಿಯವರಿಗೆ ವಿಶೇಷ ಹೂವಿನ ಅಲಂಕಾರ, ದೇವಸ್ಥಾನಕ್ಕೆ ಮತ್ತು ನದಿ ತೀರದಲ್ಲಿ ಮತ್ತು ವೇದಿಕೆಗೆ ವಿಶೇಷ ಲೈಟಿಂಗ್ ಡೆಕೊರೇಶನ್ ಹಾಗೂ ನದಿಯಲ್ಲಿರುವ ಬಂಡೆಗಳಿಗೆ ಸ್ಪಾಟ್  ಲೈಟ್ ಗಳನ್ನು ಹಾಕಲಾಗುತ್ತಿದೆ ಎಂದು ಹೇಳಿದರು.

ತುಂಗಭದ್ರಾ ಆರತಿ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ಧಾರ್ಮಿಕ ದತ್ತಿ ಆಯುಕ್ತರು, ಸಂಸದರು, ಶಾಸಕರು ಹಾಗೂ ಇತರೆ ಗಣ್ಯಮಾನ್ಯರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.



ಈ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಹೆಚ್.ಪ್ರಕಾಶರಾವ್,  ಹುಲಿಗೆಮ್ಮ ದೇವಿಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದ್ಯಸರು, ಸೇರಿದಂತೆ ಪಾಲಾಕ್ಷಪ್ಪ ಗುಂಗಾಡಿ, ಪಂಪಾಪತಿ ರಾಟಿ, ಎ.ಧರ್ಮರಾವ್, ವೆಂಕಟೇಶ ವಡ್ಡರ, ಪ್ರಭುರಾಜ್ ಪಾಟೀಲ ಮತ್ತು ಹುಲಿಗೆಮ್ಮ ದೇವಸ್ಥಾನದ ಸಿಬ್ಬಂದಿಗಳು, ಹುಲಿಗಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ