LIVE TV StateNationalPoliticsCrimeEntertainmentSportsEducationFINANCE & TAXATION
Districts

ಕಾರ್ಖಾನೆ ಭಾದಿತ ರೈತ ಸಂಘ ಕಟ್ಟಲು ನಿರ್ಧಾರ

ಕೊಪ್ಪಳ: ನಗರಸಭೆ ಮುಂದೆ ನಡೆದಿರುವ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ 147ನೇ ದಿನದ ಧರಣಿ ಯಶಸ್ವಿಯಾಯಿತು.

ಧರಣಿಯಲ್ಲಿ ಕಾರ್ಯಕಾರಿ ಮಂಡಳಿಯಲ್ಲಿ ಚರ್ಚೆ ನಡೆಸಿ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಾರ್ಖಾನೆ ಭಾದಿತ ರೈತರನ್ನು ಸಂಘಟಿಸಬೇಕು ಎಂದಾಯಿತು. ಸುದೀರ್ಘ ಕಾಲದಿಂದ ಮಾಲಿನ್ಯ ಮಾಡುತ್ತಾ ಬರುವ ಕಾರ್ಖಾನೆಗಳಿಗೆ ಯಾವುದೆ ಕಾರಣಕ್ಕೂ ಮುಂದುವರಿದ ತಂತ್ರಜ್ಞಾನ ಅಳವಡಿಸಿರಿ ಎಂದು ಯಾವ ಪಕ್ಷವೂ ಹೇಳಬಾರದು. ಯಾಕೆಂದರೆ ಎರಡು ದಶಕಗಳಿಂದ ಹಳ್ಳಿ ಜನರ ಜೀವ ಈ ಕಾರ್ಖಾನೆಗಳು ಹಿಂಡಿವೆ. ಕೆಂಪು ವಲಯ ಪಟ್ಟಿಯ ಕಾರ್ಖಾನೆಗಳು ಎಂದು ಗೊತ್ತಿದ್ದೂ ಸುಧಾರಿತ ತಂತ್ರಜ್ಞಾನದ ಕೊರತೆ ಎಂದು ಹೇಳಬಾರದೆಂದು ಬಹಿರಂಗ ಸಭೆಯಲ್ಲಿ ಚರ್ಚಿಸಲಾಯಿತು.ಹಳ್ಳಿಗಳಲ್ಲಿ ಮುಖ್ಯವಾಗಿ ಗಿಣಿಗೇರಿ, ಕನಕಾಪುರ, ಬೇವಿನಹಳ್ಳಿ, ಅಲ್ಲಾನಗರ, ಹಿರೇಬಗನಾಳ, ಕಾಸನಕಂಡಿ, ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ, ಮುಂಡರಗಿ, ಕುಣಿಕೇರಿ ತಾಂಡಾ, ಹಾಲವರ್ತಿ ಮುಂತಾದ 20ಕ್ಕೂ ಹೆಚ್ಚಿನ ಹಳ್ಳಿಯಲ್ಲಿ 'ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ' ವನ್ನು ಜಂಟಿ ಕ್ರಿಯಾ ವೇದಿಕೆಯ ನಿರ್ದೇಶನದಲ್ಲಿ ಕಟ್ಟಲು ನಿರ್ಣಯ ಕೈಗೊಳ್ಳಲಾಯಿತು.

ಇದಕ್ಕೆ ಬಾಧಿತವಾಗುವ ಹಳ್ಳಿಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಘಟಕ ಕಟ್ಟಿಕೊಳ್ಳಬೇಕು ಎಂದು ವೇದಿಕೆಯಿಂದ ವಿನಂತಿ ಮಾಡಲಾಯಿತು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಮಹಿಳಾ ನಾಯಕಿ ಕಾವ್ಯಾ ಗಡಾದ, ಸರೋಜಾ ಬಾಕಳೆ, ವಿದ್ಯಾ ನಾಲ್ವಾಡ, ಸಂಗಮೇಶ್ವರ ಪಾಟೀಲ್, ಸಂಚಾಲಕರಾದ ಮಲ್ಲಿಕಾರ್ಜುನ ಬಿ‌. ಗೋನಾಳ, ಮಂಜುನಾಥ ಜಿ‌. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಡಾ‌.ವೈ.ಬಿ. ರಡ್ಡೇರ, ಡಾ. ಬಸವರಾಜ ಪೂಜಾರ, ಶಂಭುಲಿಂಗಪ್ಪ ಹರಗೇರಿ, ಮಹೇಶ ಮನ್ನಾಪುರ, ರವಿ ಕಾಂತನವರ, ಎಸ್.ಬಿ. ರಾಜೂರು, ರಾಜಶೇಖರ ಏಳುಬಾವಿ, ಶರಣು ಶೆಟ್ಟರ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮುತ್ತುರಾಜ್ ತೋಟದ, ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ ಲಾಚನಕೇರಿ, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ಭೀಮಪ್ಪ ಯಲಬುರ್ಗಾ ಮುಂತಾದವರು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ