LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಕಳಪೆ ಬೀಜ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಬಳ್ಳಾರಿ:  ಕರ್ನಾಟಕ ರಾಜ್ಯ ರೈತ ಸಂಘ ಸಂಘ ಹಾಗೂ ಹಸಿರುಸೇನೆ, ಬಳ್ಳಾರಿ ಜಿಲ್ಲಾ ವತಿಯಿಂದ  ಕೃಷಿ ಇಲಾಖೆ ಮತ್ತು ಜೆ.ಡಿ. ಅಧಿಕಾರಿಗಳು ಭರವಸೆ ಕೊಟ್ಟರೆ ಹತ್ತಿ ಬೀಜ ನೆಟ್ಟತ್ತಾರೆ ಬೆಳೆ ಚನ್ನಾಗಿ ಬರುತ್ತದೆ ಎಂದರೆ ಮತ್ತು ಹತ್ತಿ ಬೀಜ ಕಂಪನಿಯವರು ಗ್ಯಾರೆಂಟಿ ಚೆನ್ನಾಗಿ ಬರುತ್ತದೆ ಎಂದು ರೈತರು ನೆಟ್ಟಿರುತ್ತಾರೆ. ಅದರೆ ರೈತರು ಹತ್ತಿ ಬೀಜ ಹಾಕಿದರೆ ಕಾಯಿಕಪ್ಪು ಬರುತ್ತದೆ. ಹತ್ತಿ ಕಾಯಿ ಅದಮೇಲೆ ಗೀಡ ಬೆಳೆ ಚೆನ್ನಾಗಿ ಬರುತ್ತದೆ. ಆದರೆ ಸದ್ಯ ಬರೇಹುಳ ಬೀಳುತ್ತಿದೆ. ಆದ್ದರಿಂದ ರೈತರಿಗೆ ಹತ್ತಿ ಎರಡು ಕ್ವಿಂಟಲ್ ಕೂಡ ಬರುವುದಿಲ್ಲ. ಆದರೆ ಅಧಿಕಾರಿಗಳು ಕಂಪನಿಯವರು ಜವಾಬ್ದಾರಿ ತಗೊಂಡರೆ ರೈತರಿಗೆ ಬೆಳೆ ಬರುವುದಾಗಿ ಭರವಸೆ ಕೊಡುತ್ತಾರೆ. ಆದರೆ ಹತ್ತಿ ಬೀಜ ಸುಮಾರು ನಾಲ್ಕು ವರ್ಷದಿಂದ ಫೇಲ್ ಆಗುತ್ತದೆ. ಇದಕ್ಕೆ ನೀವು ಗ್ಯಾರೆಂಟಿ ಜವಾಬ್ದಾರಿ ಕೊಟ್ಟರೆ ಸಂಗನಕಲ್ಲು ರೈತರು ಸುಮಾರು 1000 ಎಕರೆ ಹತ್ತಿ ಬೀಜ ಇಟ್ಟಿರುತ್ತಾರೆ. ಮತ್ತೆ ಇಟ್ಟ ಹತ್ತಿ ಬೀಜ ಫೇಲ್ ಆದ್ರೆ ಅದರ ಖರ್ಚು ವೆಚ್ಚ ಎಲ್ಲಾವನ್ನು ಕಂಪನಿ ಹಾಗೂ ಕೃಷಿ ಇಲಾಖೆ ಭರಿಸುವ ಜವಾಬ್ದಾರಿ ತಂಗೊಂಡರೆ ರೈತರು ನೆಡುತ್ತಾರೆ ಎಂದು ರೈತ ಮುಖಂಡರು ತಿಳಿಸಿದರು.



ಈ ವರ್ಷ ರೈತರು ಬಹಳಷ್ಟು ಜನ ಮೆಕ್ಕೆಜೋಳ ನೆತ್ತಿರುತ್ತಾರೆ. ಅದರಂತೆ ಅಧಿಕಾರಿಗಳು ಗಮನಹರಿಸಿ ಒಳ್ಳೆ ಬೀಜವನ್ನು ನೀಡುವಂತೆ ಸೂಚನೆ ನೀಡಬೇಕು. ಅಲ್ಲದೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ರೈತರಿಗೆ ಅನ್ಯಾಯವಾಗದಂತೆ ಗಮನಹರಿಸಬೇಕು.  ಕೃಷಿ ಇಲಾಖೆಯವರು ಹೊಸ ಬೀಜಗಳನ್ನು ಕೊಡಬೇಕು, ಹಳೆ ಬೀಜಗಳನ್ನು ವಿತರಣೆ ಮಾಡುವುದರಿಂದ ಇಳುವರಿ ಕಡಿಮೆಯಾಗಿರುತ್ತದೆ. ಇದರಿಂದ ಕೆಲ ರೈತರು ತೊಗರಿ ಬಿತ್ತನೆಯತ್ತ ಮುಖ ಮಾಡಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ಗೊಬ್ಬರ ಕಡಿಮೆ ಆಗದಂತೆ ವ್ಯವಸ್ಥೆ ಮಾಡಿಕೊಡಬೇಕು. ಡಿ.ಎ.ಪಿ. ಗೊಬ್ಬರದಲ್ಲಿ  ಕಳಪೆ ಕಂಡು ಬಂದಿದ್ದು ಅಧಿಕಾರಿಗಳು ಗಮನಹರಿಸಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಳಪೆ ಗೊಬ್ಬರ ಕಂಡು ಬಂದಲ್ಲಿ ಸೀಜ್ ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ನೀವು ಕ್ರಮ ತೆಗೆದುಕೊಳ್ಳಹೋದ ಪಕ್ಷದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಉಗ್ರ ಹೋರಾಟವನ್ನು ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದರು.



ಈ ಸಂದರ್ಭದಲ್ಲಿ ಮುಖಂಡರಾದ ಬೈಲೂರು ವಿರೇಶ್, ಬಿ .ಶ್ರೀನಿವಾಸ, ಮಾರೆಣ್ಣ, ಕುಮಾರ.ಕೆ, ಶ್ರೀಧರಗಡ್ಡೆ ಕೃಷ್ಣಮೂರ್ತಿ (ಅಕ್ಕಿ ಕೃಷ್ಣ) ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ