LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ವಿಬಿಜಿ ರಾಮ್ 2025ರ ಮಸೂದೆ ಹಿಂಪಡೆಯಲು ಒತ್ತಾಯ

ಮರಿಯಮ್ಮನಹಳ್ಳಿ: ವಿಬಿಜಿ ರಾಮ್ 2025ರ ಮಸೂದೆಯನ್ನು ಕೇಂದ್ರ ಸರಕಾರ ಹಿಂಪಡೆಯ ಬೇಕೆಂದು ಒತ್ತಾಯಿಸಿ ಗ್ರಾಕೂಸ್ ಸಂಘಟನೆಯಿಂದ ಡಣಾಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಎಂಜಿಎನ್‌ಆರ್‌ಇಜಿಎ 2025 ಪ್ರಕಾರ ಸಾರ್ವತ್ರಿಕವಾಗಿದ್ದ ಕಾರ್ಮಿಕ ಉದ್ಯೋಗ ಖಾತ್ರಿಯ ಹಕ್ಕನ್ನು ವಿಬಿಜಿರಾಮ್ ಮಸೂದೆ5(1)ರ ಕಸಿದು ಕೊಂಡಿದ್ದು, ಕೇಂದ್ರ ಸರಕಾರ ಸೂಚಿಸಿದ ಪ್ರದೇಶಗಳ ವಾಸಿಗೆ ಮಾತ್ರ ಸೀಮಿತವಾಗಲಿದೆ. ಮಸೂದೆ 4(5) ರ ಪ್ರಕಾರ ಕೇಂದ್ರ ಸರಕಾರದಿಂದ ನಿರ್ಧರಿಸಲ್ಪಟ್ಟ ರಾಜ್ಯವಾರು ಬಜೆಟ್ ಹಂಚಿಕೆಗಳ ಮೂಲಕ ಮಾನವ ದಿನಗಳನ್ನು ನಿರ್ಧರಿಸಲಾಗುತ್ತದೆ. ಪರಿಚ್ಚೇದ4(6)ರಲ್ಲಿ ಈ ಬಜೆಟ್ ಮಿತಿಯನ್ನು ಮೀರಿದರೆ ರಾಜ್ಯ ಸರಕಾರಗಳೇ ಹೊರೆಯನ್ನು ಭರಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಬಜೆಟ್ ವಹಂಚಿಕೆ ಶೇ. 90-10 ರಷ್ಟಿತ್ತು, ಆದರೆ ಮಸೂದೆ ಬದಲಾವಣೆಯಿಂದ ಶೇ. 60-40 ಅನುಪಾತದಲ್ಲಿ ಹಂಚಿಕೆಯಾಗಿದೆ. ಈ ಹಿಂದಿನ ಮಸೂದೆಯು ವರ್ಷದ ಯಾವ ದಿನವಾದರೂ ಕೆಲಸ ಕೇಳುವ ಅಧಿಕಾರ ವಿತ್ತು. ಹೀಗಿರುವ ಮಸೂದೆ ಪ್ರಕಾರ ಕರಷಿ ಚಟುವಟಿಕೆ ಸಮಯದಲ್ಲಿ 60 ದಿನಗಳ ಕಾಲ ಯೋಜನೆ ಸ್ಥಗಿತ ಗೊಳಿಸಲಾಗುವುದು. ಅಲ್ಲದೆ ವರ್ಷದಲ್ಲಿ ಎರಡು ತಿಂಗಳು ಕೆಲಸ ನಿರಾಕರಿಸುವುದರಿಂದ ಮಹಿಳೆಯರು, ಭೂಹೀನರು, ಇತರ ಅಂಚಿನಲ್ಲಿರುವ ಸಮುದಾಯಗಳ ಉದ್ಯೋಗದ ಹಕ್ಕಿನಿಂದ ನಿರಾಕರಿಸಿದಂತಾಗುತ್ತದೆ. ಜೊತೆಗೆ ಅವಶ್ಯವಿರುವ ಕಾಮಗಾರಿಗಳನ್ನು ಜನರು ಗ್ರಾಮ ಸಭೆಯ ಮೂಲಕ ಗುರುತಿಸುತ್ತಿದ್ದರು. ಪ್ರಸ್ತುತ ಜಾರಿಗೆ ತಂದ ಮಸೂದೆ ಇದನ್ನು ನಿಷ್ಟಿçÃಯ ಗೊಳಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಡಣಾಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಜಿ ನಾಗರಾಜ್ ಅವರು ಮನವಿ ಸ್ವೀಕರಿಸಿ ಮೇಲಾಧಿಕರಿಗಳ ಗಮನಕ್ಕೆ ತರಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಕೂಸ್ ಸಂಘಟನೆಯ ಜಿಲ್ಲಾ ಕಾರ್ಯಕರ್ತೆ ಶೈನಾಜ್, ನಾರಾಯಣ ಕೆ, ಅಂಬರೀಶ, ಕೆ ವೆಂಕಟೇಶ, ಎಂ ನಬಿಸಾಬ್, ಗವಿಸಿದ್ದ, ಅ ತಿಂದಪ್ಪ, ಗಾಯತ್ರಿ, ಖಾಜಾಬನ್ನಿ, ಅಮಿನಾಬಿ. ರಜಿಯಾ ಬೇಗಂ, ಎಚ ಮರಿಯಮ್ಮ ಇತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ