LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ತುರ್ತು ಚಿಕಿತ್ಸೆಗೆ ಬಿಎಂಎಂ ಕಂಪನಿಯಿಂದ  ಆಂಬುಲೆನ್ಸ್ ಗಳ ವಿತರಣೆ

ಮರಿಯಮ್ಮನಹಳ್ಳಿ: ಪಟ್ಟಣ ಮತ್ತು ಮರಿಯಮ್ಮನಹಳ್ಳಿ ಹೋಬಳಿಯ ಎಲ್ಲಾ ಸಮುದಾಯದವರಿಗೆ ಅನುಕೂಲವಾಗಲಿ ಎಂದು ಅಂಬುಲೆನ್ಸ್ ಮತ್ತು ವೈಕುಂಠ ರಥಗಳಿಗೆ ನಮ್ಮ ಬಿಎಂಎಂ ಕಂಪನಿಯಿಂದ ಚಾಲನೆ ನೀಡಲಾಗಿದೆ. ಎಲ್ಲಾ ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕಂಪನಿಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ  ಹೇಳಿದರು.

ಅವರು ಪಟ್ಟಣದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ವೈಕುಂಠರಥವನ್ನು ಮುಕ್ತಿಧಾಮ ಸೇವಾ ಟ್ರಸ್ಟ್ ಗೆ ಹಸ್ತಾಂತರಿಸಿ ನಂತರ ಎರಡು ಆಂಬುಲೆನ್ಸ್ ಗಳಿಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಬಿಎಂಎಂ ಕಂಪನಿಯಿಂದ ಸಿ.ಎಸ್.ಆರ್.ಅಡಿಯಲ್ಲಿ 28 ಲಕ್ಷ ದಿಂದ 30 ಲಕ್ಷದವರೆಗೆ ಒಂದೊಂದು ಅಂಬುಲೆನ್ಸ್ ನೀಡಲಾಗಿದೆ. ಸುಧಾರಿತ ತಂತ್ರಜ್ಞಾನದ (ಎ.ಎಲ್.ಎಸ್) ಅಂಬುಲೆನ್ಸ್ ಗಳನ್ನು ಎಲ್ಲಾ ಸಮುದಾಯದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ವೈಕುಂಠ ರಥದ ನಿರ್ವಹಣೆಯನ್ನು ಮುಕ್ತಿಧಾಮ ಸೇವಾ ಸಮಿತಿಯು ನಿರ್ವಹಿಸಲಿದೆ. ಈ ಸಮಿತಿಯು ಸ್ವ ಇಚ್ಚೆಯಿಂದ ಸೇವೆಗೆ ಮುಂದೆ ಬಂದಿದೆ. ಬಡಜನರ ಆರೋಗ್ಯ ತುರ್ತು ಸೇವೆಗೆ  ಅನುಕೂಲಕ್ಕಾಗಿ, ಎರಡು ಆಂಬ್ಯುಲೆನ್ಸ್ ಗಳನ್ನು  ಲೋಕಾರ್ಪಣೆ ಮಾಡಿದ್ದೇವೆ ಎಂದರು.



ಹೊಸ ಅಂಬ್ಯುಲೆನ್ಸ್ ಗಳು ಹೊಸ ಸುಧಾರಿತ ತಂತ್ರಜ್ಞಾನ ಹೊಂದಿದ ಆರೋಗ್ಯ ಚಿಕಿತ್ಸೆಯ ಸೌಲಭ್ಯಗಳನ್ನು ಹೊಂದಿವೆ. ಅಲ್ಲದೇ ಈ ಆಂಬುಲೆನ್ಸ್ ಗಳ ವ್ಯಾಪ್ತಿ ಸುಮಾರು 60 ಕಿಮೀ ವ್ಯಾಪ್ತಿಯ ಒಳಗಡೆ ಸೇವೆಯನ್ನು ನೀಡುತ್ತವೆ. ಮರಿಯಮ್ಮನಹಳ್ಳಿ ಆಸ್ಪತ್ರೆ, ಹೊಸಪೇಟೆ ಆಸ್ಪತ್ರೆ, ಬಳ್ಳಾರಿ ಆಸ್ಪತ್ರೆ, ಕೊಪ್ಪಳ ಆಸ್ಪತ್ರೆ ವರೆಗೂ ಸೇವೆ ದೊರೆಯುತ್ತವೆ. ಶೀಘ್ರದಲ್ಲೇ ಆಂಬ್ಯುಲೆನ್ಸ್ ಗಳ ಸಂಪರ್ಕದ ನಂಬರ್ ಗಳನ್ನು ಸಹ ಸಂಸ್ಥೆಯು ಪ್ರಕಟಿಸಲಿದೆ. ಸಾರ್ವಜನಿಕರು ಇವುಗಳಿಗೆ ಕರೆಮಾಡಿ ಸೇವೆ ಪಡೆಯಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಗೋವಿಂದರಾಜು, ಪರಶುರಾಮ, ಕೃಷ್ಣನಾಯ್ಕ, ಚಿದ್ರಿ ಸತೀಶ್, ವಿಶ್ವನಾಥ್ ಶೆಟ್ಟಿ, ರೋಗಣ್ಣನವರ ಮಂಜುನಾಥ, ಗರಗ ಪ್ರಕಾಶ್, ಸತ್ಯನಾರಾಯಣ ಶೆಟ್ಟಿ, ಕುಪ್ಪ ರಾಘವೇಂದ್ರ ಶೆಟ್ಟಿ, ಮಂಜುನಾಥ, ಸಿಡಿ.ಯಲ್ಲಪ್ಪ, ವಿಜಯ್ ಕುಮಾರ್, ಆನಂದ, ಕೃಷ್ಣ, ಸುರೇಶ್, ವಸಂತ, ನಿಂಗಪ್ಪ ಇತರರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ