LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆ

ಕುಷ್ಟಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒಲಿಂಪಿಯಾಡ್ ಕಾರ್ಯಕ್ರಮದ ಮೂಲಕ  ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪ್ರತಿಭೆಯನ್ನು ಗುರುತಿಸಿ  ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯವಸ್ಥೆಯನ್ನು  CSC ಕೇಂದ್ರಗಳ ಮೂಲಕ ನಡೆಸಲಾಗುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಕುಷ್ಟಗಿ ವಲಯ ಮೇಲ್ವಿಚಾರಕರ ಅರುಣ ಅವರು ಮಾತನಾಡಿದರು

 

ಕುಷ್ಟಗಿ ತಾಲೂಕಿನ ಗಾಂಧಿನಗರ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ CSC ಸೇವಾ ಕೇಂದ್ರದಲ್ಲಿ 2025-26 ನೇ ಸಾಲಿನ ಓಲಂಪಿಯಾಡ್ ಸ್ಪರ್ಧಾತ್ಮಕ ಪರೀಕ್ಷೇಯಲ್ಲಿ ಕುಷ್ಟಗಿ ತಾಲೂಕಿನಿಂದ 570 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಗೋವಿಂದ ಹಾಗೂ ಪವನ ಕುಮಾರ್ ಓಲಂಪಿಯಾಡ್ ಸ್ಪರ್ಧೆಯಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ ವಲಯದ ಮೇಲ್ವಿಚಾರಕರು ಅರುಣ ಕುಮಾರ್ ರವರು ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು.

 

ಪ್ರಸ್ತುತ ವಿದ್ಯಮಾನದಲ್ಲಿ ವಿಧ್ಯಾರ್ಥಿಗಳು ಶಾಲಾ ಪಠ್ಯಕ್ರಮದ ಜೊತೆಗೆ ತಾರ್ಕಿಕ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಕೌಶಲ್ಯ ಮತ್ತು ವಿಷಯಗಳ ಬಗ್ಗೆ  ಒಲಿಂಪಿಯಾಡ್ ಪರೀಕ್ಷೆಗಳ ಪ್ರಮುಖವಾಗಿದೆ. ಗಣಿತ (Mathematics) , ವಿಜ್ಞಾನ (Science), ಇಂಗ್ಲಿಷ್ (English), ಸಾಮಾನ್ಯ ಜ್ಞಾನ (General Knowledge), ಕಂಪ್ಯೂಟರ್ / ಇನ್ಫರ್ಮ್ಯಾಟಿಕ್ಸ್ ,ಖಗೋಳಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ (ಉನ್ನತ ಮಟ್ಟದ ಒಲಿಂಪಿಯಾಡ್‌ಗಳಲ್ಲಿ) ಪ್ರಯೋಜನಗಳ ವಿಷಯದ ಮೇಲೆ ಗಾಢವಾದ ಜ್ಞಾನ ಬೆಳೆಯುತ್ತದೆ. ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನೆ ಹೆಚ್ಚುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ ಎಂದು ಪ್ರಮಾಣ  ಪತ್ರ ವಿತರಣೆ ಕಾರ್ಯಕ್ರಮದಲ್ಲಿ  ರಾಘವೇಂದ್ರ CSC ನೋಡಲ್ ಅಧಿಕಾರಿಗಳು  ಮಾತನಾಡಿದರು

news_1780204562_1_973.webp

 

ಈ ಕಾರ್ಯಕ್ಷೇತ್ರದಲ್ಲಿ ಮಹೇಶ್ ಕೃಷಿ ಮೇಲ್ವಿಚಾರಕರು,  ಪಲ್ಲವಿ,ಅಧ್ಯಕ್ಷರು ಗಾಂಧಿನಗರ ಒಕ್ಕೂಟ ವಾಸವಿ,ಸುಧಾರಾಣಿ, ರೋಹಿಣಿ, ಒಕ್ಕೂಟದ ಪದಾಧಿಕಾರಿಗಳು, ಶರಣಮ್ಮ,ಜಯಶ್ರೀ, ತಲೆಖಾನ್ ಜಯಶ್ರೀ, ಶಾಂತಮ್ಮ, ಶಿಲ್ಪಾ ಕುಷ್ಟಗಿ ರೂರಲ್ ವಲಯದ ಸೇವಾ ಪ್ರತಿನಿಧಿಗಳು ಸ್ವ ಸಹಾಯ ಸಂಘದ ಸದಸ್ಯರು ವಿಧ್ಯಾರ್ಥಿಗಳು ಭಾಗವಹಿಸಿದ್ದರು

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ