LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಜಾತ್ರಾ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಿರಿ

ಮರಿಯಮ್ಮನಹಳ್ಳಿ: ಜಾತ್ರಾ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೇ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡೋಣ ಎಂದು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹೇಳಿದರು.

ಅವರು ಪಟ್ಟಣದಲ್ಲಿ 27.3.2026 ರಂದು ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ನಡೆಯಲಿರುವ ಅಂಗವಾಗಿ ಪಟ್ಟಣ ಪೊಲೀಸ್ ಠಾಣಾ ಆವರಣದಲ್ಲಿ ಮಂಗಳವಾರ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು ಈ ಸಭೆಯಲ್ಲಿ ಮಾತನಾಡಿ, ದೇವಸ್ಥಾನದ ಮುಂದೆ  ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ, ಭಕ್ತರಿಗೆ ಅಡಚಣೆ ಉಂಟಾಗುವಂತೆ ಮಾಡಬಾರದು, ಕಳೆದ ಬಾರಿ ಸಹಕಾರ ಕೊಟ್ಟಂತೆ ಈ ಬಾರಿಯೂ ಸಹಕರಿಸಿ, ಜಿಲ್ಲೆಯಲ್ಲಿ ಬಹುತೇಕ ಜಾತ್ರೆಗಳು ನಡೆಯುತ್ತಿವೆ ಅತೀ ಹೆಚ್ಚು ಬಂದೋಬಸ್ತ್ ಮಾಡುತ್ತೇವೆ ಇದಕ್ಕೆ ನಿಮ್ಮ ಸಹಕಾರವೂ ನಮಗೆ ಮುಖ್ಯವಾಗತ್ತದೆ. ವಾಹನ ತಿರುವು ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಾತ್ರೆಯಲ್ಲಿ ಯಾವುದೇ ಹೀರೋಗಳ ಫೋಟೋ ತರಬಾರದು, ಮತ್ತು ತೆರಿಗೆ ತೆಂಗಿನಕಾಯಿ ಹೊಡೆಯಲು ನಿಷೇದಿಸಿದೆ, ಸಣ್ಣ ಗಲಾಟೆಗಳು ನಡೆದರೆ ಯುವಕರಿಗೆ ಬುದ್ದಿ ಹೇಳಿ,  ಇದು ದೇವರ ಸೇವೆ ಎಂದು ತಿಳಿದುಕೊಂಡು ನಿರ್ವಹಿಸುತ್ತೇವೆ, ತುರ್ತು ಪರಿಸ್ಥಿತಿಯಲ್ಲಿ 112ಗೆ ಕರೆ ಮಾಡಬಹುದು ಹೆಚ್ಚಿನ ಭದ್ರತೆಗಾಗಿ 250 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.



ಸಿ ಪಿ ಐ ವಿಕಾಸ್ ಲಮಾಣಿ ಮಾತನಾಡಿ, ಜಾತ್ರೆಯನ್ನು ಸುಸೂತ್ರವಾಗಿ ನೆರವೇರಲು ಎಲ್ಲರೂ ಸಹಕರಿಸಿ, ತೇರು ನೋಡಲು ಬರುವವರು ತೇರು ಪ್ರಾರಂಭಿಸುವ ಮುಂಚೆ ಸ್ಥಳಕ್ಕೆ ಬನ್ನಿ ನಿಂತುಕೊಂಡರೆ ಟ್ರಾಫಿಕ್ ಸಮಸ್ಸೆ ಎದುರಾಗದು. ಯಾವುದೇ ಸಣ್ಣ ಘಟನೆಗಳು ಸಹ ನಡೆಯಬಾರದು. ಸಣ್ಣ ಪುಟ್ಟ ಘಟನೆಗಳು ಕಂಡು ಬಂದರೆ ಅಲ್ಲೇ ಸರಿಪಡಿಸುವಂತಹ ಕೆಲಸ ಮಾಡಿ ಕೂಡ ನಡೆಯಬಾರದು, ಲಕ್ಷಾಂತರ ಜನ ಬಂದು ಸೇರಿ ಮಾಡುವ ಜಾತ್ರೆಇದಾಗಿದೆ. ಜಾತ್ರೆ ಸಂಧರ್ಭದಲ್ಲಿ ದೇವಸ್ಥಾನದ ದ್ವಜ ಹೊರತುಪಡಿಸಿ ಯಾವುದೇ ದ್ವಜಕ್ಕೆ ಅವಕಾಶ ಇರುವುದಿಲ್ಲ, ವಾರ್ಡ್ ನಂಬರ್ ಹಾಕಿಕೊಂಡು ಬರುವಂತಿಲ್ಲ. ಪೊಲೀಸ್ ಇಲಾಖೆಗೆ ಎಲ್ಲರ ಸಹಕಾರವು ಅಮೂಲ್ಯ. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

 

ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ ಮಾತನಾಡಿ 8ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ, ನೀರಿನ ಬಗ್ಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಖಾನೆ ಯವರ ಸಂಯೋಜನೆ ಯೊಂದಿಗೆ 6ಕಡೆ ನೀರಿನ ಅರವಟಿಗೆ ಮಾಡಲಾಗುತ್ತಿದೆ, ರಾಮನವಮಿ ದಿನದಂದು ಯಾವುದೇ ಮಾಂಸ ಮಾರಾಟ ಮಾಡಲು ಅವಕಾಶವಿರುವುದಿಲ್ಲ, ಎರೆಡು ಕಡೆ ಪಾರ್ಕಿಂಗ್ ಮಾಡಲಾಗಿದೆ. ಜಾತ್ರೆ ಅಂಗಡಿಗಳ ಕಲೆಕ್ಷನ್ ರಿಯಾಯಿತಿ ದರದಲ್ಲಿ ಮಾಡಲಾಗುವುದು ಸದಸ್ಯರ ಸಲಹೆಯಂತೆ ತೀರ್ಮಾನಿಸಲಾಗಿ ಒಬ್ಬರನ್ನು ನಿಯೋಜಿಸಲಾಗುವುದು.

ಜಾತ್ರಾ ಸಂಧರ್ಭದಲ್ಲಿ ದನಗಳ ಮಾಲೀಕರು ಮನೆಯಲ್ಲಿ ಕಟ್ಟಬೇಕು, ಅದರಿಂದ ಅನ್ಯರಿಗೆ ತೊಂದರೆ ಉಂಟಾದರೆ ಅವರೇ ಹೊಣೆಗಾರರಾಗುತ್ತಾರೆ. ಈ ಬಗ್ಗೆ ನಿರ್ಧಾಕ್ಷಿಣ್ಯವಾಗಿ  ಕ್ರಮ ಕೈ ಗೊಳ್ಳಲಾಗುವುದು. 50ಸಿಸಿ ಕ್ಯಾಮರಾ ಗಳನ್ನು ಅಳವಡಿಸಲಾಗುವುದು ಎಂದರು.



ಡಿ.ರಾಘವೇಂದ್ರ ಶೆಟ್ಟಿ ಮಾತನಾಡಿ, ಪಟ್ಟಣದಲ್ಲಿ ಪಡ್ಡೆ ಯುವಕರು ಮೊಬೈಲ್ ನಲ್ಲಿ ಮಾತಾಡುತ್ತಾ ಬೈಕ್ ಓಡಿಸುತ್ತಿದ್ದಾರೆ, ಇನ್ನು ಕೆಲವರು ವಿಲಿಂಗ್ ಮಾಡುತ್ತಾರೆ ಅವರನ್ನು ಹಿಡಿದು ಕೇಸ್ ಹಾಕಿ ಕ್ರಮ ಕೈಗೊಳ್ಳಿ, ಶಾಂತಿ ಕಾಪಾಡಲು ನಿರ್ಧಾಕ್ಷಿನ್ಯವಾಗಿ ಕ್ರಮ ಕೈಗೊಳ್ಳಿ ಎಂದರು.

 

ಬುಡೆನ್ ಸಾಬ್ ಮಾತನಾಡಿ ಮಸೀದಿ ವರೆಗೆ ಮೈಕ್ ಹಾಕಿದ್ದಾರೆ ಶಬ್ದ ಕಡಿಮೆ ಮಾಡಿಸಿ, ಜಿಟಿಟಿಸಿ ಕಾಲೇಜ್ ಬಳಿ ಹಾಕಿರುವ ಕೋಳಿ ತುಪ್ಪಳ ಮತ್ತು ತ್ಯಾಜ್ಯದಿಂದ ದುರ್ವಾಸನೆ ಬೀರುತ್ತಿದೆ ಬೇರೆಡೆಗೆ ಸಾಗಿಸಿ, ರಥೋತ್ಸವ ದಿನ ಪಟ್ಟಣದಲ್ಲಿ ಕುರಿ, ಕೋಳಿ ಕೊಯ್ಯುವುದನ್ನು ಬಂದ್ ಮಾಡಿ ಎಂದು  ತಿಳಿಸಿದರು.

 

ಈ ಸಂದರ್ಭದಲ್ಲಿ ಪಿ ಎಸ್ ಐ ತಾರಾಬಾಯಿ ಪಟ್ಟಣದ ಉಪ ತಹಶೀಲ್ದಾರ್ ಶ್ರೀಧರ್, ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗಳು ಆಂಜನೇಯ, ಸಾರಿಗೆ ಇಲಾಖೆ ಬಾಳಪ್ಪ, ಅಗ್ನಿಶಾಮಾಕದಳ ಸಿ ಯುವರಾಜ್, ಆರೋಗ್ಯ ಇಲಾಖೆ ಸಿಬ್ಬಂದಿ ಡಾ. ರಾಧಾಕೃಷ್ಣ, ಜೆಸ್ಕಾಂ ವಿಜಯಕುಮಾರ್,  ಮತ್ತು  ಮುಖಂಡರಾದ ಉದ್ದೇಕಲ್ ವೆಂಕಟೇಶ, ಪರುಶುರಾಮ, ಬದ್ರಿನಾಥ್, ಮರಡಿ ಸುರೇಶ, ತಳವಾರ ಹುಳುಗಪ್ಪ, ದೊಡ್ಡಭರಮಪ್ಪ, ಪೈಲ್ವಾನ್ ವೆಂಕಟೇಶ್, ಸಣ್ಣದುರುಗಪ್ಪ, ಚಿದ್ರಿ ಸತೀಶ್,   ವಿಜಯಕುಮಾರ್, ಬದ್ರಿನಾಥ್ ಶೆಟ್ಟಿ, ವೆಂಕಟೇಶ, ಗುಂಡಾ ಸೋಮಣ್ಣ, ರೋಗಣ್ಣನವರ ಮಂಜುನಾಥ, ಲೋಕಪ್ಪ, ದುರುಗಪ್ಪ, ರಾಘವೇಂದ್ರ, ಕುಮಾರ್, ಕೆ.ಪರಶುರಾಮ, ನಾಗೇಶ್, ಎರ್ರಿಸ್ವಾಮಿ, ರುದ್ರನಾಯ್ಕ, ದುರುಗೇಶ್, ಬುರಡಿ ರಾಮಣ್ಣ, ರಾಘವೇಂದ್ರ ಇತರರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ