ನಾಯಕನಹಟ್ಟಿ : ಮುಂದಿನ ಆರು ತಿಂಗಳಿನಲ್ಲಿ ನಾಯಕನಹಟ್ಟಿಯಲ್ಲಿ ಹಾಲು ಶೀತಲೀಕರಣ ಘಟಕವನ್ನು ಸ್ಥಾಪಿಸಲಾಗುವುದೆಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ವೇತ ಹೆಚ್. ಓ. ಜೆ.ಆರ್ ರವಿಕುಮಾರ್ ಹೇಳಿದರು.
ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘ (ರಿ.), 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ನಂತರ ಮಾತನಾಡಿದ ಅವರು 2025-26ನೇ ಸಾಲಿನ 2,48,526.56 ಲಾಭ ಗಳಿಸುವುದು ಸಂತಸ ತಂದಿದೆ.
ಪ್ರತಿದಿನ 750 ಹಾಲು ಸಂಗ್ರಹಣೆಯ ಪ್ರಯುಕ್ತ ಬಿ ಎಂ ಸಿ ಘಟಕ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು
ಹಾಲು ಉತ್ಪಾದಕರ ಸಹಕಾರ ಸಂಘದ ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಬೇಕೆಂದು ಕಿವಿಮಾತು ಹೇಳಿದರು.
ಗುಣಮಟ್ಟದ ಹಾಲು ಉತ್ಪಾದನೆಗೆ ರಾಸುಗಳಿಗೆ ಸಮ ಪ್ರಮಾಣದಲ್ಲಿ ಆಹಾರ ನೀಡಬೇಕು. ಗುಣಮಟ್ಟದ ಹಾಲು ಪೂರೈಕೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು. ರಾಸುಗಳನ್ನು ಮತ್ತಷ್ಟು ಹೆಚ್ಚು ಸಾಕಾಣೆ ಮಾಡುವುದರೊಂದಿಗೆ ರೈತರು ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸದರು. ಹಸುಗಳಿಗೆ ಉತ್ತಮ ಗುಣಮಟ್ಟದ ಮೇವುಗಳು ಹಾಕಬೇಕು, ಸೊಂಕು ತಗುಲದಂತೆ ಹೆಚ್ಚರವಹಿಸಬೇಕು ಎಂದು ಹೇಳಿದರು. ಗುಣಮಟ್ಟದ ಹಾಲು ಸರಬರಾಜು ಮಾಡಲು ಅಧಿಕಾರಿಗಳಿಂದ ಸಲಹೆ ಪಡೆಯಬೇಕು ಎಂದು ಹೇಳಿದರು.
ಎಂ.ಪುಟ್ಟರಾಜ ಸಹಾಯಕ ವ್ಯವಸ್ಥಾಪಕರು ಶಿವಮೊಗ್ಗ ಹಾಲು ಒಕ್ಕೂಟ ಇವರು ಮಾತನಾಡಿ ಪ್ರತಿಯೊಂದು ರಾಸುಗಳಿಗೆ ಪ್ರತಿದಿನ 100 ಗ್ರಾಂ ಖನಿಜ ಮಿಶ್ರಣವನ್ನು ನೀಡಬೇಕು. ಪ್ರತಿಯೊಂದು ಹಾಲು ಕರಿಯುವ ಹಸುಗಳಿಗೆ ಪ್ರತಿದಿನ 1 ಲೀಟರ್ ಹಾಲಿಗೆ 400 ಗ್ರಾಂ ನಂತೆ ಪಶು ಆಹಾರ ನೀಡಬೇಕು. ಪ್ರತಿನಿತ್ಯ ಪ್ರತಿಯೊಂದು ಹಸುವಿಗೆ 15 ರಿಂದ 20 ಕೆಜಿ ಹಸಿ ಹುಲ್ಲು ನೀಡಿದರೆ 5 ಕೆ.ಜಿ ಹೊಣ ಹುಲ್ಲು ನೀಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಉತ್ಪಾದಕರ ಹಸುಗಳಿಗೆ ಉಚಿತವಾಗಿ ಎಫ್.ಎಂ.ಡಿ ಚಿಕಿತ್ಸೆ ರೈತರಿಗೆ ಸಬ್ಸಿಡಿ ದರದಲ್ಲಿ ರಬ್ಬರ್ ಮ್ಯಾಚ್ ವಿತರಿಸಲಾಗುತ್ತದೆ. ಪ್ರತಿದಿನ ಒಂದು ಹಸುವಿಗೆ ಕನಿಷ್ಠ ಪಕ್ಷ 60 ರಿಂದ 80 ಲೀಟರ್ ನೀರನ್ನ ಕೊಡಬೇಕು. 10 ಲೀಟರ್ ನೀರು, ತಿಂದಿರುವಂತ ಆಹಾರವನ್ನು ಜೀರ್ಣಿಸಲು. 10 ಲೀಟರ್ ನೀರು ಹಸುವಿನ ದೇಹದ ಉಷ್ಣಾಂಶತೆಯನ್ನು ಕಾಪಾಡಿಕೊಳ್ಳಲು. 10 ಲೀಟರ್ ನೀರು ರಕ್ತ ಸಂಚಾರ ಸರಿಯಾಗಿ ಆಗಲು. 10 ಲೀಟರ್ ನೀರು ಮಲ ಮೂತ್ರ ವಿಸರ್ಜನೆ ಸರಳವಾಗಿ ಆಗಲು ಒಂದು ಲೀಟರ್ ಹಾಲು ಉತ್ಪಾದನೆಯಾಗಲು ಹಸು ನಾಲ್ಕು ಲೀಟರ್ ನೀರನ್ನ ಉಪಯೋಗಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ನಾಯಕನಹಟ್ಟಿ ಕೃಷಿಪತ್ತಿನ ಸಹಕಾರ ಸಂಘ ಅಧ್ಯಕ್ಷ ಜೆ.ಆರ್.ರವಿಕುಮಾರ್ ಮಾತನಾಡಿ ರೈತರು ಕೂಡ ಬೇರೆಯವರಿಗೆ ಹಾಲು ಪೂರೈಸದೆ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹಾಲು ಒದಗಿಸಿ ಇದರ ಲಾಭ ಪಡೆಯಬೇಕು. ಇದರಿಂದ ರೈತರು ಹಾಗೂ ಸಂಘಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಹಾಲು ಉತ್ಪಾದಕರ ಸಂಘ ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆAಬುವುದೆ ನನ್ನ ಅಭಿಲಾಷೆ. 2025-26ನೇ ಸಾಲಿನ 2,48,526.56 ಲಾಭ ಗಳಿಸುವುದು ಹೆಮ್ಮೆ ವಿಷಯವಾಗಿದೆ. ಹೆಚ್ಚಿನ ಹಾಲು ಹಿಂಡಬೇಕಾದರೆ ಉತ್ತಮ ಗುಣಮಟ್ಟದ ಹಸಿರು ಮೇವು ಹಾಕಬೇಕು. ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಹಾಲು ಉತ್ಪಾದಕರ ಸಂಘವನ್ನು ಅಭಿವೃದ್ಧಿ ಪಡಿಸಬೇಕು. ಇದರಿಂದ ಹಾಲು ಒಕ್ಕೂಟದ ಬೆಳವಣಿಗೆಗೆ ಸಾಧ್ಯವಾಗುತ್ತದೆ. ಇದರಿಂದ ಹಸುಗಳಿಗೆ ಸೂಕ್ತವಾದ ಆಹಾರ ನೀಡಬೇಕು, ಇದರಿಂದ ರಾಸುಗಳು ಉತ್ತಮ ಗುಣಮಟ್ಟದ ಹಾಲನ್ನು ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಜೆ.ಆರ್.ರವಿಕುಮಾರ್, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಪುಟ್ಟರಾಜ್, ಸಹಾಯಕ ವ್ಯವಸ್ಥಾಪಕರು ಶಿವಮೊಗ್ಗ ಹಾಲಿ ಒಕ್ಕೂಟ, ಡಾ.ಸತ್ಯನಾರಾಯಣ ಪಶು ವೈದ್ಯಾಧಿಕಾರಿಗಳು, ವಿಶ್ವನಾಥ ಬಿನ್ ಭಕ್ಷಿವೀರಣ್ಣ ಉಪಾಧ್ಯಕ್ಷರು, ಟಿ.ಪರಮೇಶ್ವರಪ್ಪ ಬಿನ್ ಎಂ.ತಿಪ್ಪೇಸ್ವಾಮಿ, ತಿಪ್ಪಯ್ಯ, ದಳವಾಯಿ ಸಣ್ಣತಿಪ್ಪಯ್ಯ, ಡಿ.ಬೋರಯ್ಯ, ಗಂಗಮ್ಮ ಕೋಂ ತಿಪ್ಪಣ್ಣ, ಮುನಿಯಪ್ಪ, ಈರಣ್ಣ, ಚನ್ನಬಸಪ್ಪ, ದ್ಯಾಮಣ್ಣ, ಚನ್ನಬಸಪ್ಪ, ಸಿಬ್ಬಂದಿ ವರ್ಗದವರು, ಪ್ರೇಮರಾಜ್ ಮುಖ್ಯಕಾರ್ಯನಿರ್ವಾಹಕರು,
2025-26ನೇ ಸಾಲಿನ 2,48,526.56 ಲಾಭ ಗಳಿಸುವುದು ಸಂತಸ ತಂದಿದೆ. ಹಾಲು ಉತ್ಪಾದಕರ ಸಹಕಾರ ಸಂಘದ ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಬೇಕೆಂದು ಕಿವಿಮಾತು ಹೇಳಿದರು.
ಶ್ವೇತಾ.ಹೆಚ್.ಓ. ಜೆ.ಆರ್.ರವಿಕುಮಾರ್ , ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ