LIVE TV StateNationalPoliticsCrimeEntertainmentSportsEducationFINANCE & TAXATION
Districts

ಮನುಷ್ಯನಿಗೆ ಕಣ್ಣಿನ ಅವಶ್ಯಕತೆ ಮುಖ್ಯ

ನಾಯಕನಹಟ್ಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮದರ್‌ ತೆರೇಸಾ ಗ್ರಾಮೀಣ ಸಂಸ್ಥೆ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ ಶಿಬಿರಕ್ಕೆ ಆಗಮಿಸಿದ ಹಿರಿಯರಿಗೆ ಹಣ್ಣು ವಿತರಣೆ ಮಾಡುವುದರ ಮೂಲಕ 5ನೇ ವರ್ಷದ ಉಚಿತ ಕಣ್ಣಿನ ಶಿಬಿರಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಟಡಿದ ನಾಯಕನಹಟ್ಟಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ, ಇತಂಹ ಶಿಬಿರಗಳ ಹಮ್ಮಿಕೊಂಡಿರುವುದರಿಂದ ಪಟ್ಟಣದ ಸುತ್ತಮುತ್ತ ಇರುವ ಕಡುಬಡವರಿಗೆ ಅನುಕೂಲವಾಗುತ್ತದೆ, ಮನುಷ್ಯನಿಗೆ ಹೊರ ಜಗತ್ತನ್ನು ನೋಡುವುದಕ್ಕೆ ಆನಂದಿಸಬೇಕಾದರೆ ಕಣ್ಣು ತುಂಬಾ ಮುಖ್ಯ ಕಣ್ಣು ಇಲ್ಲಂದರೆ ಜೀವನ ಕತ್ತಲು ಇದ್ದಂತೆ ಏನು ಮಾಡಲು ಸಾಧ್ಯವಿಲ್ಲ.  ಆದ್ದರಿಂದ ಎಲ್ಲಾರು ಜೋಪಾನವಾಗಿ ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕು. ಯಾವುದೇ ಒತ್ತಡ ತೆಗೆದುಕೊಳ್ಳಬೇಡಿ,  ಆರೋಗ್ಯ ರಕ್ಷಣೆಯ ಜೊತೆಗೆ ಮನುಷ್ಯನಿಗೆ ಕಣ್ಣಿನ ದೃಷ್ಠಿ ತುಂಬಾ ಅವಶ್ಯಕತೆ ಇರುವುದರಿಂದ  ನಾವು ಕಾಪಾಡಿಕೊಳ್ಳಬೇಕು ಎಂದರು.



ಬಡಜನರಿಗೆ ಉಚಿತವಾಗಿ ಕಣ್ಣಿನ ಶಿಬಿರ ತಪಾಸಣೆ ಹಮ್ಮಿಕೊಂಡಿದ್ದು , ಮದರ್‌ ತರೇಸಾ ಗ್ರಾಮೀಣ ಸಂಸ್ಥೆ ಇನ್ನೂ ಇಂತಹ ಹಲವಾರು ಆರೋಗ್ಯ ಕಾರ್ಯಕ್ರಮಗಳು ಮಾಡಲಿ ಹಾಗೇ ಶಿವಮೂಗ್ಗ ಶಂಕರ ಕಣ್ಣಿನ ಆಸ್ಪತ್ರೆ ರಾಜ್ಯಾಂದತ್ಯ ಬಡವರಿಗೆ ಕಣ್ಣಿನ ಶಿಬಿರಗಳಿಂದ ದಾರಿದೀಪವಾಗಿದೆ ಎಂದು ನಾಯಕನಹಟ್ಟಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ ಹೇಳಿದರು.

 

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಸುನೀತಾ ಮುದಿಯಪ್ಪ, ತಾಲ್ಲೂಕು ಕರವೇ ಅಧ್ಯಕ್ಷ ಮುತ್ತಯ್ಯ, ಮದರ್ ತೆರೇಸಾ ಸಂಸ್ಥೆ ಸಂಸ್ಥಾಪಕ   ಶಿವಮೂರ್ತಿ ಬಿ, ತಾಲ್ಲೂಕು ನಗರ ಘಟಕ ಅಧ್ಯಕ್ಷ ಸೋಮಣ್ಣ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಹೋಬಳಿ ಅಧ್ಯಕ್ಷ  ಕೆ.ಜಿ.ಮಂಜುನಾಥ, ಕರವೇ ಕನ್ನಡ ಸೇನೆ ಮಹಿಳಾ ಹೋಬಳಿ ಅಧ್ಯಕ್ಷೆ ತಿಪ್ಪಮ್ಮ ಚಿನ್ನಮಲ್ಲಯ್ಯ,  ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಮಂಜುನಾಥ,  ನಗರ ಘಟಕದ ಅಧ್ಯಕ್ಷ ಓ.ತಿಪ್ಪೇಸ್ವಾಮಿ,  ಪ್ರೇಮ್‌ಕುಮಾರ್ , ಪ್ರಸನ್ನ ಕುಮಾರ್, ಅರುಣ್‌ಕುಮಾರ್, ಶಂಕರ್ ಆಸ್ಪತ್ರೆ ಸಿಬ್ಬಂದಿ ತ್ಯಾಗರಾಜ, ಶಿವಪ್ರಸಾದ್, ಮದರ್‌ ತೆರೇಸಾ ಸಿಬ್ಬಂದಿ ಉದಯಕಿರಣ್‌, ಮಮತ, ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಆ್ಯಂಬುಲೆನ್ಸ್ ನೌಕರರ ಸಂಘದ ಅಧ್ಯಕ್ಷ ಚಿನ್ನಮಲ್ಲಯ್ಯ ಓ.ಎಂ ಹಾಗೂ ಇನ್ನೂ ಇತರರು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ