LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಸೆ. ೮ ರಂದು ಉಚಿತ ಫಿಸಿಯೋಥೆರಪಿ ಶಿಬಿರ

ಬಳ್ಳಾರಿ: ಸ್ಥಳೀಯ ಅನಂತ ವಾಸುದೇವ ಆಸ್ಪತ್ರೆಯಲ್ಲಿ ಪ್ರತಿವರ್ಷ ಸೆಪ್ಟೆಂಬರ್ ೮ ರಂದು ವಿಶ್ವ ಫಿಸಿಯೋಥೆರಪಿ ದಿನದ ಅಂಗವಾಗಿ ಉಚಿತ ಫಿಸಿಯೋಥೆರಪಿ ಶಿಬಿರ ಆಯೋಜಿಸಿದೆ.

 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಡಾ.ಪ್ರಣತಿ ಕಾರ್ತೀಕ್, ಡಾ.ಹರೀಶ್ ಪಿ., ಡಾ.ಮಾಣಿಕ್ ರಾವ್ ಇನ್ನಿತರರು ಬೋಧನಾ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ಕಂಡುಬರುವ ಮೂಳೆ - ಸ್ನಾಯು ಸಂಬAಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಈ ಶಿಬಿರದಲ್ಲಿ ಭಾಗವಹಿಸುವವರಿಗೆ

ತಜ್ಞ ಫಿಸಿಯೋಥೆರಪಿಸ್ಟ್ರಿಂದ ಉಚಿತ ಸಮಾಲೋಚನೆ ನಡೆಸಲಾಗುತ್ತದೆ. ಸೂಕ್ತ ಚಿಕಿತ್ಸಾ ಮಾರ್ಗದರ್ಶನ ಲಭ್ಯವಿರುತ್ತದೆ ಎಂದರು.



ಬಹಳಷ್ಟು ಜನರು ತಮ್ಮ ದೈನಂದಿನ ಜೀವನದಲ್ಲಿ ನೋವನ್ನು ಸಹಜವೆಂದು ಭಾವಿಸುತ್ತಾರೆ. ಆದರೆ ನೋವು ಎಂದರೆ ದೇಹವು "ಏನೋ ತಪ್ಪಾಗಿದೆ. ಗಮನ ಕೊಡಿ" ಎಂಬ ಸಂದೇಶವನ್ನು ನೀಡುತ್ತಿರುವುದು. ನೋವಿನ ಮೂಲ ಕಾರಣ ತಿಳಿಯದೆ ಕಂಗೆಡುವವರಿಗೂ, ಸೂಕ್ತ ಪರಿಹಾರ ಹುಡುಕುತ್ತಿರುವವರಿಗೂ ಫಿಸಿಯೋಥೆರಪಿ ಸರಿಯಾದ ದಾರಿ ಆಗಿದೆ.

ಹೀಗಾಗಿ ಈ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಂಡು, ನಿಮ್ಮ ನೋವನ್ನು ಪರಿಶೀಲಿಸಿಕೊಳ್ಳಬೇಕು ಹಾಗೂ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು.

 

ಸುದ್ದಿಗೋಷ್ಠಿಯಲ್ಲಿ ಡಾ.ಜಯಲಕ್ಷಿö್ಮ, ಡಾ.ರಾಕೇಶ್ ಬಿ.ಎಂ., ಡಾ.ಅಖಿಲ್ ರಾವ್ ಮತ್ತು ಡಾ.ಬಾಲನಾಗಶಿವ ಇನ್ನಿತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ