LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಗಾಂಧೀಜಯಂತಿ ಆಚರಣೆ

ನಾಯಕನಹಟ್ಟಿ : ಅಕ್ಟೋಬರ್ 02, 1869ರಂದು ಗುಜರಾತ್‌ನ ಪೋರಬಂದರಿನಲ್ಲಿ ಜನಿಸಿದ ಮೋಹನ್‌ದಾಸ ಕರಮಚಂದ ಗಾಂಧಿ ಬ್ರಿಟೀಶರ ಆಳ್ವಿಕೆಯ ವಿರುದ್ದ ಅಹಿಂಸೆಯ ಹೋರಾಟ ಮಾಡಿ ಭಾರತಕ್ಕೆ ಸ್ವತಂತ್ರ್ಯವನ್ನು ತಂದುಕೊಡುವಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದು ಪ.ಪಂ. ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.

 

ಪಟ್ಟಣದ ಪಂಚಾಯಿತಿ ಕಾರ್ಯಾಲಯದಲ್ಲಿ 156ನೇ ಮಹತ್ಮಾಗಾಂಧಿ ಜಯಂತಿ ಮತ್ತು ಲಾಲ್‌ಬಹದ್ದೂರ್ ಶಾಸ್ತಿçಯವರ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಅಥವಾ ಬಾಪೂ ಎಂದು ಪ್ರೀತಿಯಿಂದ ಕರೆಯಲ್ಪಡುವ ಮೋಹನ್‌ದಾಸ್ ಕರಮಚಂದ ಗಾಂಧಿ ಅವರು ಭಾರತದ ಪ್ರಮುಖ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕ ಅಸಹಕಾರ ಚಳುವಳಿ, ಕ್ಷಿಟ್ ಇಂಡಿಯಾ ಚಳುವಳಿ, ಖಿಲಾಫತ್‌ಚಳುವಳಿ, ಉಪ್ಪಿನ ಸತ್ಯಗ್ರಹ ಮೊದಲಾದ ಚಳುವಳಿಗಳನ್ನು ನಡೆಸಿ ತಮ್ಮ ಶಾಂತಿಯುತ ಹಾಗೂ ಅಹಿಂಸಾತ್ಮಕ ಹೋರಾಟದ ಮೂಲಕ ಮಹಾತ್ಮಗಾಂಧಿಯವರು ದೇಶದ ಮೂಲೆ-ಮೂಲೆಯಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡರು ಎಂದು ಅವರು ಮಾತನಾಡಿದರು.

 

ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ಮಾತನಾಡಿ ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆಯ ಮೂಲಕ ಜಗತ್ತಿನ ಮಾನವ ಗೆದ್ದ ಮಹಾತ್ಮರಿವರು. ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಎಂದೆಂದಿಗೂ ಅಮರ, ಇಡೀ ಪ್ರಪಂಚವೇ ಮಹಾತ್ಮ ಗಾಂಧೀಜಿಯವರನ್ನು ಕೊಂಡಾಡುತ್ತಿದೆ. ಸ್ವತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರು ಎಂದು ಹೇಳಿದರು.

 

ಪಟ್ಟಣ ಪಂಚಾಯಿತಿಯ 9ನೇ ವಾರ್ಡ್ನ ಸದಸ್ಯರಾದ ಜೆ.ಆರ್.ರವಿಕುಮಾರ್ ಮಾತನಾಡಿ ಗಾಂಧಿ ಜಯಂತಿ ಭಾರತದ ರಾಷ್ಟಿçÃಯ ಹಬ್ಬ ರಾಷ್ಟçಪಿತ ಮಹಾತ್ಮ ಗಾಂಧಿಯವರ ಜನ್ಮ ದಿನವನ್ನು ಗಾಂಧಿ ಜಯಂತಿಯೆಂದು ಆಚರಿಸಲಾಗುತ್ತದೆ. ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಅವರು ಜಗತ್ತಿನಲ್ಲಿ ಶಾಂತಿ, ಅಹಿಂಸೆ ಹೋರಾಟದ ವಿಚಾರ ಬಂದಾಗ ನೆನಪಾಗುವುದೇ ರಾಷ್ಟçಪಿತ ಬಾಪು, ಪ್ರತಿಯೊಬ್ಬರೂ ಮಹಾತ್ಮಗಾಂಧಿಯವರ ಜೀವನದ ಆಶಯಗಳನ್ನು ಪಾಲಿಸಬೇಕಾಗಿದೆ. ಬ್ರಿಟೀಶ್ ಆಡಳಿತದ ವಿರುದ್ಧ ರಾಷ್ಟಿçÃಯ ಸ್ವಾತಂತ್ರ್ಯ ಹೋರಾಟವನ್ನು ಮುನ್ನೆಡಿಸಿ ರಾಷ್ಟçಪಿತ ಎನಿಸಿಕೊಂಡವರು ಮಹಾತ್ಮಗಾಂಧೀಜಿ. ಗಾಂಧೀಜಿಯವರ ರಾಜಕೀಯ ಜೀವನವು ದಕ್ಷಿಣ ಆಫ್ರೀಕಾದಲ್ಲಿ ಪ್ರಾರಂಭವಾಯಿತು. 1916ರಲ್ಲಿ ಅವರು ಭಾರತಕ್ಕೆ ಮರಳಿದರು ಮತ್ತು ರಾಷ್ಟ್ರೀಯ ಸ್ವಾತಂತ್ರ್ಯಹೋರಾಟದ ನಾಯಕತ್ವವನ್ನು ವಹಿಸಿಕೊಂಡರು. ಮಹಾತ್ಮ ಗಾಂಧೀಜಿಯವರು ಧೂಮಪಾನ, ಮಧ್ಯಪಾನ, ಅಶ್ಪುಶ್ಯತೆ, ತಮ್ಮ ಮಾಂಸಆಹಾರವನ್ನು ವಿರೋಧಿಸಿದರು.

 

ಪ.ಪಂ. ಸದಸ್ಯ ಜಾಗನೂರಹಟ್ಟಿ ಮಂಜುನಾಥ ಮಾತನಾಡಿ ಸ್ವಾತಂತ್ರ್ಯವನ್ನು ಸಾಧಿಸುವವರೆಗೂ ತಮ್ಮ ಜೀವನದದುಕ್ಕೂ ಬ್ರಿಟೀಶ್‌ರ ಆಡಳಿತದ ವಿರುದ್ಧ ಸಂಪೂರ್ಣ ತಾಳ್ಮೆ ಮತ್ತು ಧೈರ್ಯದಿಂದ ಹೋರಾಟ ಮಾಡಿದರು ಎಂದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀ ಕಾಂತ್ ಉಪಾಧ್ಯಕೆ ಬೋಸಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಗುರುಶಾಂತಮ್ಮ, ಸುನಿತಮುದಿಯಪ್ಪ, ಪ.ಪಂ. ಸದಸ್ಯ ಜಾಗನೂರಹಟ್ಟಿ ಮಂಜುನಾಥ, ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಪೌರಕಾರ್ಮಿಕರು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ