LIVE TV StateNationalPoliticsCrimeEntertainmentSportsEducationFINANCE & TAXATION
Districts

ನಾಳೆಯಿಂದ ಮತ್ತೆ ನಗರದಲ್ಲಿ ಹೆಲ್ಮೆಟ್ ಕಡ್ಡಾಯ

ಬಳ್ಳಾರಿ: ಸುಪ್ರೀಂಕೋರ್ಟ್ ಆದೇಶದಂತೆ ದೇಶದಲ್ಲಿ ಎಲ್ಲೂ ಹೆಲ್ಮೆಟ್ ಧರಿಸದೇ ಇರಲು ವಿನಾಯಿತಿ ಇಲ್ಲ. ಆದರೆ ಬೇಸಿಗೆ ಎಂಬ ಕಾರಣಕ್ಕೆ  ಹೆಲ್ಮೆಟ್ ಕಡ್ಡಾಯಕ್ಕೆ ಒಂದಿಷ್ಟು ರಿಲ್ಯಾಕ್ಸ್ ನ್ನು ಅನಧಿಕೃತವಾಗಿಯೇ ನೀಡಿದಂತೆ ಇತ್ತು . ಆದರೆ ನಗರ ಮತ್ತು ಜಿಲ್ಲೆಯಾಧ್ಯಂತ ನಾಳೆಯಿಂದ ಮತ್ತೆ ದ್ವಿಚಕ್ರ ವಾಹನ ಸವಾರರಿಗೆ ಯಾವ ಮೂಲಾಜಿಲ್ಲದೆ ಹೆಲ್ಮೆಟ್ ಖಡ್ಡಾಯ ಖಡ್ಡಾಯಗೊಳಿಸಲಿದೆಂದು ಎಸ್ಪಿ ಡಾ. ಸುಮನ್ ಡಿ.ಪನ್ನೇಕರ್ ಹೇಳಿದ್ದಾರೆ.

 ಹೆಲ್ಮೆಟ್ ಧರಿಸದೇ ಇರಲು ಯಾವ ಕಾನೂನು, ಆದೇಶದಲ್ಲಿ ರಿಯಾಯತಿ ಇಲ್ಲ. ದ್ವಿಚಕ್ರವಾಹನ ಸವಾರರು ಖಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಇಲ್ಲದಿದ್ದರೆ 500 ರೂ ದಂಡ ವಿಧಿಸಲಿದೆಂದಿದ್ದಾರೆ.

ಕಳೆದ ಒಂದು ತಿಂಗಳಿನಿಂದಲೇ ಈ ಕುರಿತು ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ, ಸರ್ಕಾರಿ ನೌಕರರಿಗೆ ಸಾಕಷ್ಟು ಜಾಗೃತಿಯನ್ನು ಅಭಿಯಾನದ ಮೂಲಕ ಮಾಡಿದೆಂದರು.

ಹೆಲ್ಮೆಟ್ ಖಡ್ಡಾಯದ ಪರಿಶೀಲನೆ ನಾಳೆ ಟ್ರಾಫಿಕ್ ಪೊಲೀಸರಷ್ಟೇ ಅಲ್ಲದೆ ಇತರೇ ಠಾಣೆಗಳ ಸಿಬ್ಬಂದಿ ಸಹ ಈ ಕಾರ್ಯ ಮಾಡಲಿದ್ದಾರೆ. ಹೆಲ್ಮೆಟ್ ಇಲ್ಲದೆ ಬರುವವರಿಗೆ ಪ್ರಥಮಬಾರಿಗೆ ಹೊಸ ಹೆಲ್ಮೆಟ್ ಖರೀದಿಸಿಕೊಂಡು ಬಂದು ತೋರಿಸಿ ಹೋಗಬಹುದು. ಇಲ್ಲ 5 ನೂರು ದಂಡ ಹಾಕಲಿದೆ. ಹೆಲ್ಮೆಟ್ ಸುಗುತ್ತಿಲ್ಲ ಎಂಬ ಸಬೂಬಿಗೆ, ಅವರಿವರಿಂದ ಶಿಫಾರಸ್ಸು ಯಾವುದಕ್ಕೂ ಮುಲಾಜಿಲ್ಲದೆ ಕಾರ್ಯನಿರ್ವಹಿಸಲಿದೆಂದು ಹೇಳಿದ್ದಾರೆ.

ಇದೇ ವೇಳೆ ಆಪ್ರಾಪ್ತರು ಬೈಕ್ ಚಾಲನೆ  ಮಾಡಿದರೆ  ಅವರ ಪೋಷಕರಿಗೆ 25   ಸಾವಿರ ರೂ ದಂಡ ಹಾಕಲಿದ್ದೇವೆಂದು ಹೇಳಿದ್ದಾರೆ.

ಕಳೆದ 3 ವರ್ಷದಲ್ಲಿ ದ್ವಿಚಕ್ರ ವಾಹನಗಳಿಂದ  452 ಅಪಘಾತವಾಗಿದ್ದು ಐದನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಹೆಲ್ಮೆಟ್ ಇಲ್ಲದೆ ತಲೆಗೆ ಪೆಟ್ಟು ಬಿದ್ದು ಸಾವಾಗಿರೋ ಘಟನೆಗಳೇ ಹೆಚ್ಚಾಗಿವೆ. ಹೆಲ್ಮೆಟ್ ಧರಿಸ ಬೇಕಾದುದು ಪೊಲೀಸರಿಗಾಗಿ ಅಲ್ಲ. ಅವರವರ ಪ್ರಾಣ ರಕ್ಷಣೆಗೆ

ಡಾ.ಸುಮನ್ ಡಿ.ಪನ್ನೇಕರ್, ಎಸ್ಪಿ, ಬಳ್ಳಾರಿ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ