LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಹಿಂದೂ ಬಲಿಷ್ಠವಾದ ಧರ್ಮ

ಮರಿಯಮ್ಮನಹಳ್ಳಿ: ಹಿಂದೂ ಬಲಿಷ್ಠವಾದ ಧರ್ಮ. ಇದರಲ್ಲಿ ಪ್ರತಿಯೊಬ್ಬರ ರಕ್ತ ಇದೆ ಎಂದು ಜಿ.ನಾಗಲಾಪುರದ ಒಪ್ಪತ್ತೇಶ್ವರ ಸ್ವಾಮಿ ಮಠದ ನಿರಂಜನ ಪ್ರಭು ಸ್ವಾಮಿಗಳು ಹೇಳಿದರು.

ಅವರು ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದ ಕಾರ್ಯಕ್ರಮದಲ್ಲಿ  ಸಾನಿಧ್ಯ ವಹಿಸಿ ಮಾತನಾಡಿ, ಹಿಂದುತ್ವದ ಏಳಿಗಾಗಿ ಹಿಂದೂಗಳೆಲ್ಲ ಐಕ್ಯತೆಯಿಂದ ಮುನ್ನಡಿಯ ಬೇಕು. ನಾವು ಪರಧರ್ಮ ಸಹಿಷ್ಣರು, ಆದರೆ ಅನ್ಯ ಧರ್ಮದ ದಾಳಿ ಸಹಿಸುವರಲ್ಲ.  ಹಾಗೂ  ಮೊಬೈಲ್, ದುಶ್ಚಟಗಳ ದಾಸ್ಯದಿಂದ ಯುವ ಪೀಳಿಗೆ ಹೊರ ಬಂದಾಗ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.

 



ನಂತರ ಹುಬ್ಬಳ್ಳಿಯ ವಿನಾಯಕ ತಳಗೇರಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ಹಿಂದೂಗಳಲ್ಲಿ ಐಕ್ಯತೆ ಮೂಡಿಸಲು ಹಿಂದೂ ಮಹಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಹಿಂದೂ ಜಾಗೃತರಾಗಿ ಧರ್ಮ ರಕ್ಷಕರಾಗಿ, ಹಿಂದೂ ಧರ್ಮವನ್ನು ಯಾವ ಶಕ್ತಿಯಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಹಿಂದೂ ಅಜೆಂಡಾ ಪ್ರತಿಯೊಬ್ಬರಲ್ಲಿ ಅನುರಣಿಸಿದಾಗ ಇನ್ನಷ್ಟು ಬಲಶಾಲಿಯಾಗಿ ಹಿಂದೂ ಧರ್ಮ ತನ್ನ ಪ್ರಖರತೆ ವಿಶ್ವವ್ಯಾಪಿ ಹಬ್ಬಿಸುತ್ತದೆ. ಹಿಂದೂ ಯುವಕರು ಆಸೆ, ಆಮಿಷಗಳು, ಪ್ರಚೋದನೆಗಳಿಗೆ ಒಳಗಾಗದೆ ಧರ್ಮದ ಪರಿಪಾಲನೆ ಮಾಡಬೇಕು. ಲವ್‌ ಜಿಹಾದ್‌ ನಿಂದ ಹಿಂದೂ ಯುವತಿಯರು ದೂರವಿರುವಂತೆ ತಿಳಿಸಿದರು.  ಹಿಂದೂ ಧರ್ಮದ ಆಚಾರ, ವಿಚಾರ,  ಸಂಸ್ಕಾರ, ಸಂಸ್ಕೃತಿಗಳೇ ವಿಶ್ವಗುರುವನ್ನಾಗಿ ಮಾಡಿದೆ ಎಂದರು.

ಪಟ್ಟಣದ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.  ಸಮಾವೇಶದ ಅಧ್ಯಕ್ಷ ಡಾ. ಜಿ. ಎಂ. ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಬದರಿನಾಥ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.  ‌ರಾಘವೇಂದ್ರ ಶೆಟ್ಟಿ, ಚಿದ್ರಿ ಸತೀಶ ನಿರ್ವಹಿಸಿದರು. ನಂತರ ಭರತ ನಾಟ್ಯ, ದೇಶ ಭಕ್ತಿ ಗೇತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ