LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಭಾರತ ಜಗತ್ತಿಗೆ ಯೋಗ ಗುರು

ಕೆಎಸ್ ಆಸ್ಪತ್ರೆಯಿಂದ ಯೋಗ ದಿನಾಚರಣೆ

ಕೊಪ್ಪಳ : ನಮ್ಮ ಮನಸ್ಸು ಸದೃಢವಾಗಿದ್ದರೆ ನಮ್ಮ ದೇಹವು ಸದೃಢವಾಗಿರುತ್ತದೆ ಅದಕ್ಕಾಗಿ ಮೊಬೈಲ್ತಿಕ್ಕೋದ್ಬಿಡಬೇಕು. ಯೋಗ ಮಾಡಬೇಕೆಂದು ನಿಡಶೇಸಿಯ ಗೆಜ್ಜೆಭಾವಿ ಪಶ್ವಕಂತಿ ಸಂಸ್ಥಾನ ಮಠದ ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಹೇಳಿದರು.

 

ಕೆಎಸ್ಆಸ್ಪತ್ರೆ ಹಾಗೂ ಕೆಎಸ್ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನಿಂದ ಗಿಣಿಗೇರಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಜೀವಾತ್ಮ ಮತ್ತು ಪರಮಾತ್ಮರನ್ನು ಒಂದು ಗೂಡಿಸುವುದೆ ಯೋಗ, ಜಗತ್ತು ನಮ್ಮ ದೇಶವನ್ನು ಎಂದಿಗೂ ನೆನಪಿಸಿಕೊಳ್ಳಲು ಕಾರಣ ನಮ್ಮ ದೇಶ ಇಡೀ ಜಗತ್ತಿಗೆ ಯೋಗವನ್ನು ಹೇಳಿಕೊಟ್ಟಿರುವುದಕ್ಕಾಗಿ. ದೇವನಡೆಗೆ ಹೋಗುವ ದಾರಿಯನ್ನು ಹೇಳಿಕೊಟ್ಟಿದ್ದು ನಮ್ಮ ದೇಶ.ನಮ್ಮ ದೇಶ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿರುವ ದೇಶವಾಗಿದೆ. ನಮ್ಮ ದೇಶ ಕ್ರೀಯಾ ಯೋಗ, ಕುಂಡಲಿನಿ ಯೋಗ ಸೇರಿ ಅನೇಕ ಯೋಗ ಕ್ರಮಗಳನ್ನು ಜಗತ್ತಿಗೆ ಪರಿಚಯಿಸಿದೆ. ಎಲ್ಲಾ ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನವನ್ನು ರೂಡಿ ಮಾಡಿಕೊಂಡು  ಉತ್ತಮ ನಾಗರಿಕರಾಗಿ. ಎಲ್ಲಾರು ಜೂನ್​ 21 ರಂದು ಯೋಗ ಮಾಡುವ ಯೋಗಿಗಳಾಗದೆ, ದಿನನಿತ್ಯದ ಜೀವನದಲ್ಲಿ ಯೋಗ ರೂಡಿಸಿಕೊಳ್ಳಿವ ಯೋಗಿಗಳಾಗಿ ಎಂದರು.

news_1782062455_0_130.webp

 

ಗಿಣಿಗೇರಿ ಆನೆಗೊಂದಿ ಮಠದ ಶ್ರೀ ಅಭಿನವ ಶ್ರೀಕಂಠ ಸ್ವಾಮಿ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಕಾರ್ಖಾನೆ ಗ್ರಾಮವನ್ನು ಯೋಗದಾಮವನ್ನಾಗಿಸಿದ ಕೆ.ಎಸ್ಆಸ್ಪತ್ರೆಗೆ ದನ್ಯವಾದಗಳು. ನಮ್ಮ ದೇಶ ಶ್ರೀಮಂತ ಶ್ರೇಷ್ಠ ದೇಶ ವಾಗಿದ್ದು ಮೋಟಾರ್​, ಕಾರ್ಖನೆಗಳಿಂದಲ್ಲ ನಮ್ಮ ಸಂಸ್ಕೃತಿಯಿಂದ. ನಮ್ಮ ಭಾರತ ನಮಗೆ ಯೋಗ ಎಂಬ ಒಂದು ಉತ್ತಮ ಸಂಸ್ಕೃತಿಯನ್ನು ನೀಡಿದೆ ಆದರೆ, ನಮಗೆ ಅದರ ಅರಿವಾಗಬೇಕು. ಅದು ಆಗುವುದು ಇಂತಹ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗೆ ತಲುಪಿದಾಗ ಮಾತ್ರ ಯೋಗದ ಮಹತ್ವ ತಿಳಿಯುತ್ತದೆ. ನಮ್ಮ ದೇಹ ತೂತು  ಮಡಿಕೆ ಎಂದು ನಾವು ಭಾವಿಸುತ್ತೇವೆ. ಆದರೆ ಪೂರ್ವಜರು ಅದನ್ನು ದೇಗುಲಕ್ಕೆ  ಹೋಲಿಸುತ್ತಿದ್ದರು. ಹಾಗಾಗಿ ನಮ್ಮ ದೇಹ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯ ಹಾಗಾಗಿ ಎಲ್ಲಾರು ಪಾಶ್ಚಿಮಾತ್ಯದ ಅನುಕರಣೆಗೆ ಆದ್ಯತೆ ನೀಡುವ ಭರದಲ್ಲಿ ನಮ್ಮ ಆಚರಣೆಯನ್ನು ಮರೆಯಬಾರದು. ಪಾಶ್ಚಿಮಾತ್ಯ ಅನುಕರಣೆ ಕೇವಲ ಉಡುಪಿನಲ್ಲಿರಲಿ, ಆಚರಣೆ ನಮ್ಮದಿರಲಿ ಎಂದರು.

 

ಡಾ. ಬಸವರಾಜ ಕ್ಯಾವಟರ್ಮಾತನಾಡಿ, ಯೋಗವನ್ನ ನಮ್ಮ ದೇಶದ ಸಂಸ್ಕೃತಿ ಎನ್ನಬಹುದು. ಅದು ಇವತ್ತು ನಿನ್ನೆ ಬಂದಿರುವುದಲ್ಲ, 500 ಸಾವಿರ ವರ್ಷಕ್ಕೂ  ಹೆಚ್ಚು ಹಿಂದಿನದು. ದೇಹ, ಮನಸ್ಸನ್ನು ಒಟ್ಟುಗೂಡಿಸುವುದೇ ಯೋಗ. ಯೋಗವನ್ನು ನಾವು ಅಂತರಾಷ್ಟ್ರೀಯ ಯೋಗ ಎಂದು ಆಚರಣೆ ಮಾಡುತ್ತೇವೆ. ಆದರೆ ಅದು ಹುಟ್ಟಿದ್ದು ನಮ್ಮ ದೇಶದಲ್ಲಿ. ಯೋಗವನ್ನು ಇಡೀ ಜಗತ್ತಿಗೆ ಮೊಟ್ಟಮೊದಲು ಕೊಂಡ್ಯೊಯ್ದವರು ಸ್ವಾಮಿ ವಿವೇಕಾನಂದರು. ಯೋಗ ಕಾಯಿಲೆ ಯನ್ನಷ್ಟೇ ಗುಣ ಮುಖ ಮಾಡದೇ. ಕಾಯಿಲೆ ಬಾರದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಎಲ್ಲರು ದಿನನಿತ್ಯದ ಜೀವನದಲ್ಲಿ ಯೋಗಕ್ಕೆ ಸ್ವಲ್ಪ ಸಮಯ ಮಾಡಿಕೊಂಡು ಉತ್ತಮ ಜೀವನವನ್ನು ರೂಡಿಸಿಕೊಳ್ಳಿ ಎಂದರು.

ಪ್ರಮುಖರಾದ ಗಣೇಶ ಹೊರತಟ್ನಾಳ, ವೆಂಕಟೇಶ ಬಾರಕೇರ, ಗೂಳಪ್ಪ ಹಲಗೇರಿ, ಕರಿಯಪ್ಪ ಮೇಟಿ, ಕೊಟ್ರಬಸಪ್ಪ ಇತರರು ಮಾತನಾಡಿದರು. ವೆಂಕಟೇಶ ಹಾಲವರ್ತಿ, ಜಿಪಂ ಮಾಜಿ ಸದಸ್ಯ ಸುರೇಶ ಬಿ.ಎಸ್​, ವಿರೇಶ ಸಜ್ಜನ, ಕೊಟ್ರಬಸಪ್ಪ, ಅನೀಲ ಜನ, ನೀಲಪ್ಪ ಮೂರುಮನಿ ಇತರರಿದ್ದರು.

news_1782062456_1_485.webp

 

ಕಾಣಿಕೆ ವಿತರಣೆ

 

ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಯೋಗಾಭ್ಯಾಸದಲ್ಲಿ ಗ್ರಾಮದ ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮುಖಂಡರು, ವಿವಿಧ ಸಂಘ, ಸಂಸ್ಥೆಯ ನೂರಾರು ಜನರು ಭಾಗಿಯಾದರು. ಕುಷ್ಟಗಿ ತಾಲೂಕಿನ ನಿಡಶೇಸಿಯ ಕರಿಬಸವ ಶಿವಾಚಾರ್ಯ, ಗಿಣಿಗೇರಾದ ಅಭಿನವ ಶ್ರೀಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಯೋಗ ಪಟುಗಳು ಯೋಗ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಅತಿ ಕಿರಿಯ ಹಾಗೂ ಹಿರಿಯ ವ್ಯಕ್ಯಿಗಳಿಗೆ ಕಾಣಿಕೆ ನೀಡಲಾಯಿತು. ಯೋಗದ ಸ್ಥಳದಲ್ಲೇ ತೆಗೆದ ಚಿತ್ರದ ವಾಟ್ಸಾಪ್ಸ್ಟೇಟಸ್ಗೆ ಹೆಚ್ಚು ವೀಕ್ಷಣೆಪಡೆದ ವ್ಯಕ್ತಿಗೂ ನೆನಪಿನ ಕಾಣಿಕೆ ವಿತರಿಸಲಾಯಿತು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST