LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಕೆ. ವಸಂತ ಕುಮಾರ್ ಆಯ್ಕೆ

ಬಳ್ಳಾರಿ : ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಡೆಲಿಗೆಟ್ಸ್ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ವಿಭಾಗದಿಂದ ಪ್ರತಿನಿಧಿಯಾಗಿ ಕೆ. ವಸಂತ ಕುಮಾರ್ ಆಯ್ಕೆ ಆಗಿದ್ದಾರೆ.

ಬಳ್ಳಾರಿಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿಕುರುಗೋಡು ಉಪ ವಿಭಾಗದ ಮೆಕಾನಿಕ್ ದರ್ಜೆ 2 ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆ. ವಸಂತ್ ಕುಮಾರ್ ಭಾರೀ ಬಹುಮತಗಳಿಂದ ಆಯ್ಕೆ ಆಗಿದ್ದಾರೆ.

ಕರ್ನಾಟಕ ವಿದ್ಯುತ್ ಚ್ಚಕ್ತಿ ಮಂಡಳಿಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕರ್ತವ್ಯ ನಿರ್ವಹಿಸುತ್ತಿರುವ ವಸಂತ್ ಕುಮಾರ್ ಅವರು ಕಳೆದ ಬಾರಿ ಮಂಡಳಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಆಗಿದ್ದರು.  ಬಾರಿಯ ಚುನಾವಣೆಯಲ್ಲಿ ಡೆಲಿಗೆಟ್ಸ್ ಪ್ರತಿನಿಧಿಯಾಗಿ ಆಯ್ಕೆ ಆಗಿದ್ದಾರೆ.

ಚುನಾವಣೆ ಬಳಿಕ ವಸಂತ್ ಕುಮಾರ್ ಅವರ ಹಿತೈಷಿಗಳು   ಅಭಿಮಾನಿಗಳು ಹೂ ಮಾಲೆ ಅರ್ಪಿಸಿ ಸಂಭ್ರಮಿಸಿದರು

ನೂತನ ಪ್ರತಿನಿಧಿ ವಸಂತ್ ಕುಮಾರ್ ಅವರಿಗೆ ಚಿತ್ರದುರ್ಗ ಕನಕ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ಕೊರಮ ಕ್ಷೇಮಭಿವೃದ್ಧಿ ಸಂಘದ ನಿರ್ದೇಶಕ ಪುಷ್ಪರಾಜ್ ಮತ್ತು ಕುಟುಂಬದ ಸದಸ್ಯರು, ಮುಖಂಡರುಗಳು ಅಭಿನಂದನೆಗಳು ಸಲ್ಲಿಸಿದರು

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST