LIVE TV StateNationalPoliticsCrimeEntertainmentSportsEducationFINANCE & TAXATION
Districts

ಭಾವೖಕ್ಯತೆಯ ಕೊಪ್ಪಳದ ಮಹಾಪರಿಷೆ.

ಕಲ್ಯಾಣದ ಉತ್ತರ ಕರ್ನಾಟಕದಲಿ

ಕೊಪ್ಪಳ ಆರಾಧ್ಯದೇವರ ಸಾಮರಸ್ಯತೆಯ

ಮಹಿಮೆಯನು ಸಾರುತಲಿಹುದು

ಸಾಗರದೋಪಾದಿಯ ಮಹಾಪರಿಷೆಯು./1/

 

ಶ್ರೀ ಅಭಿನವ ಗವಿಸಿದ್ದೇಶ್ವರರ ಜಾತ್ರೆಯು

ಸರಳತೆ ಸಾತ್ವಿಕತೆಯ ಪ್ರತಿರೂಪವು

ದಕ್ಷಿಣ ಭಾರತದ ಮಹಾಕುಂಭಮೇಳವು

ಶ್ರೀಮಠದ ಸಾಂಸ್ಕ್ರತಿಕ ಭವ್ಯಪರಂಪರೆಯು./2/

 

ಅರಿವಿನ ತ್ರಿವಿಧ ಮಹಾದಾಸೋಹವು

ಸರ್ವರ ಜಾಗ್ರೃತಿ-ಚಿಚ್ಛಕ್ತಿಯ ಪ್ರೇರಕವು

ಗ್ರಾಮೀಣ ಸೊಗಡಿನಆಟೋಟವು ಶುಚಿ-ರುಚಿ ಸಾತ್ವಿಕ ಆಹಾರವು./3/

 

ಕಣ್ಮನ ಸೆಳೆಯುವ ಚಿತ್ತಚಿತ್ತಾರದ

ಬೆಳಕಿನ ದೀಪಗಳ ರಂಗೋಲಿಯು.

ಆಯಸ್ಕಾಂತದಂತಹ ಕಲಾಸಾಗರೋತ್ಸವವು

ವಿಶೇಷಚೇತನರ ಕಲ್ಯಾಣ ಮಹೋತ್ಸವವು/4/.

 

ಪ್ರವಚನ ಚಿಂತನ ಸಂಗೀತ-ಸಾಹಿತ್ಯಮೇಳವು

ಮನಾಕರ್ಷಕ ಮನರಂಜನೆಯು.

ದೇಶಿ ಶೖಲಿಯ ವೇಷಭೂಷಣಗಳು

ಜಾನಪದರ ವಿಧವಿಧ ಕ್ರೀಡೆಗಳು./5/

 

ದೇಶಿ ಸಂಸ್ಕ್ರೃತಿಯ ಹಿರಿಮೆ-ಗರಿಮೆಯನು

ವಿಶ್ವಕೆ ಸಾರಿಸಾರಿ ಅರುಹುತಲಿಹವು.

'ಮನುಕುಲಂ ತಾನೊಂದೇ ವಲಂ'

ಭಾವೖಕೖತೆ ಪ್ರತಿಬಿಂಬಿಸುವಂತಿಹವು./6/

 

ಸರ್ವರಿಗೆ ಸ್ಪೂರ್ತಿಯ ಸೆಲೆಯು

ಉತ್ಸಾಹ-ಪ್ರೋತ್ಸಾಹದ ಕಾರಂಜಿಯು

ಹ್ರೃದಯಾನಂದ ಕಣ್ಮನಕೋರೖಸುವ ಚೖತನ್ಯದಚಿಲುಮೆಯಂತಿಹುದು./7/

 

ಸಪ್ತಸಾಗರದೋಪಾದಿಯಲಿಹುದು

ಸದ್ಭಕ್ತರ ಆರೋಗ್ಯ ಮಹಾಮೇಳವು

ಕೊಪ್ಪಳದ ಗವಿಸಿದ್ದೇಶ್ವರರ ಮಹಾಪರಿಷೆಯ

ವೖಭವವನು ಬಣ್ಣಿಸಲು ಪದಗಳೇ ಸಾಲವು./8/



ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.

ಕವಯಿತ್ರಿ,ಸಾಹಿತ್ಯಚಿಂತಕರು.

ಗದಗ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ