LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಸಾಫ್ಟ್ ವೇರ್ ಆಧಾರಿತ ಕೌಶಲ್ಯಗಳ ಕಲಿಕೆ ಅಗತ್ಯ

ದಾವಣಗೆರೆ : ದಾವಣಗೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಾಫ್ಟ್ವೇರ್ ಆಧಾರಿತ ಕೌಶಲ್ಯಗಳ’ ಪರಿಚಯ ಕಾರ್ಯಕ್ರಮವು ಕಾಲೇಜಿನ ವಾಣಿಜ್ಯ ವಿಭಾಗದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಡಾ. ವೆಂಕಟೇಶ್ ಬಾಬು ಎಸ್., ಎಂ.ಬಿ.ಎ. ಕೋರ್ಸ್ ಸಂಯೋಜಕರು, ಸ್ವಾಗತ ಭಾಷಣ ನೀಡಿ ಕಾರ್ಯಕ್ರಮದ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪದವಿಯೊಂದಿಗೆ ಪ್ರತಿ ಸೇಮೆಸ್ಟರಿಗೊಂದು ಸರ್ಟಿಫಿಕೇಟ್ ಪ್ರೋಗ್ರಾಮ್ ಗಳನ್ನು ಕಲಿತರೆ ನಿಮ್ಮ  ಉದ್ಯೋಗ ಕೌಶಲ್ಯಗಳನ್ನು ಗಟ್ಟಿ ಗೊಳಿಸಿ ಕಾರ್ಪೊರೇಟ ಜಗತ್ತನ್ನು ಆಳಬಹುದು ಅದಕ್ಕಾಗಿ ವಿದ್ಯಾರ್ಥಿಗಳು ಆಸಕ್ತಿವಹಿಸಿ ಕಲಿಯುವುದು ಅತ್ಯವಶ್ಯಕವಾಗಿದೆ ಎಂದರು



ಮುಖ್ಯ ಅತಿಥಿಯಾಗಿ ಡಾ. ಇಗ್ನಾಶಿಯಸ್ ಬಿ., ಪ್ರಾಚಾರ್ಯರು, ಆರ್ ವಿ     ಕಾಲೇಜು, ಬೆಂಗಳೂರು, ಅವರು ಈ ಕಾರ್ಯಕ್ರಮದ ಉಪಯುಕ್ತತೆಯ ಕುರಿತು ವಿಶ್ಲೇಷಣೆ ಮಾಡಿದರು.

"ಈದಿನದ ಸ್ಪರ್ಧಾತ್ಮಕ ಉದ್ಯೋಗ ಕ್ಷೇತ್ರದಲ್ಲಿ ಸಾಫ್ಟ್‌ವೇರ್ ಆಧಾರಿತ ನಿರ್ವಹಣಾ ಕೌಶಲಗಳು ಅತ್ಯಗತ್ಯವಾಗಿವೆ. SAP ತರಬೇತಿಯಂತಹ ಪ್ರಮಾಣಪತ್ರ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉದ್ಯೋಗ ಸಾಧ್ಯತೆಗಳನ್ನು ಹೆಚ್ಚಿಸುವುದಲ್ಲದೇ, ಮೌಲಿಕ ತಾಂತ್ರಿಕ ಜ್ಞಾನ, ದತ್ತಾಂಶ ವಿಶ್ಲೇಷಣೆ, ನಿರ್ಧಾರಾತ್ಮಕ ಚಿಂತನ ಶೈಲಿ ಹಾಗೂ ಕಾರ್ಯನಿರ್ವಹಣಾ ಶಕ್ತಿ ಅಭಿವೃದ್ಧಿ ಮಾಡುತ್ತದೆ."

ಅವರು MBA ಮತ್ತು M.Com ವಿದ್ಯಾರ್ಥಿಗಳ ಮೇಲೆ ಗಮನಹರಿಸಿ, ಈ ತರಬೇತಿಯು ಪದವಿಯ ನಂತರ ಕಾಂಪಿಟೆಂಟ್ ಕಾರ್ಪೊರೇಟ್ ಪ್ರೊಫೆಷನಲ್ಸ್ ಆಗಲು ನೆರವಾಗುವ ಬಗೆಯಲ್ಲಿಯೂ ಮಾತನಾಡಿದರು. ಈ ತರಬೇತಿಯು ಉದ್ಯೋಗದ ಅವಶ್ಯಕತೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ERP (Enterprise Resource Planning)  ತಂಡದಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ, ಹಾಗೂ ಜಾಗತಿಕ ಮಟ್ಟದ ಉದ್ಯೋಗ ಅವಕಾಶಗಳನ್ನು ಕಲ್ಪಿಸಬಹುದಾದ ತಾಂತ್ರಿಕ ಬೆಳವಣಿಗೆ ತರಬೇತಿಗಳನ್ನು ಒದಗಿಸುತ್ತದೆ ಎಂಬುದನ್ನು ಉಲ್ಲೇಖಿಸಿದರು.

 

ಕಾರ್ಯಕ್ರಮದಲ್ಲಿ ಪ್ರಭಾರಿ ಪ್ರಾಚಾರ್ಯರಾದ  ಪ್ರೊ. ಸುನೀತ ಕೆ ಬೀ  ಅವರು ಅಧ್ಯಕ್ಷತೆ ವಹಿಸಿದ್ದರು.   ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ  ನಾಗರಾಜ್ ಆರ್ ಸಿ, ಪ್ರೊಬ್ರಾ

ರಾಜ್ ಮೋಹನ್, ಪ್ರೊ ಯಶೋಧ, ಪ್ರೊ ಶಂಭುಲಿಂಗ ನಲ್ಲನವರ್   ಪ್ರೊ. ವಿನಾಯಕ ಬಿ., ಪ್ರೊ. ಪ್ರಭಾಕರ್ ಟಿ., ಪ್ರೊ. ನಾಗರಾಜ್ ಎಚ್., ಪ್ರೊ. ಪ್ರತಿಭಾ ಎಂ.ಡಿ., ಪ್ರೊ. ರಾಧಾ ಬಿ. ಇವರು ಉಪಸ್ಥಿತರಿದ್ದರು.

 

ಕಾರ್ಯಕ್ರಮವನ್ನು ಕುಮಾರಿ ಪ್ರಿಯ ಹೆಚ್ ಕೆ  ಅವರು ನಿರೂಪಿಸಿದರೆ ಕುಮಾರಿ ಪಾವನಿ ಮತ್ತು ಅಕ್ಷತಾ ಪ್ರಾರ್ಥಿಸಿದರು ಕೊನೆಯಲ್ಲಿ ಡಾ ವೆಂಕಟೇಶ್ ಬಾಬು ವಂದಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ