ಮೊಳಕಾಲ್ಮುರು : ದಾವಣಗೆರೆಯಿಂದ ಬಳ್ಳಾರಿಗೆ ಕಡೆಗೆ ಹೋಗುವ ಮಹೇಂದ್ರ ಟ್ರಕ್ ಸಂಖ್ಯೆ KA 34 D 1105 ವಾಹನವು ಬೈರಾಪುರದ ಯರಬಳ್ಳಿ ಮಾರೆಮ್ಮ ದೇವಸ್ಥಾನದ ಹತ್ತಿರ ಲಾರಿ KA 06 AA 4728ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ನಾಲ್ಕು ಜನ ಮೃತ ಪಟ್ಟಿರುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ ಬೈರಾಪುರ ಗ್ರಾಮದ ಹತ್ತಿರ ಇರುವ ಯರಬಳ್ಳಿ ಮಾರೆಮ್ಮ ದೇವಸ್ಥಾನದ ಪಕ್ಕ ಶ್ರೀ ಬಾಬಾ ಢಾಭಾ ಎದುರುಗಡೆ ರಸ್ತೆಯಲ್ಲಿ ಮಹಿಂದ್ರಾ ಸೂಪರ್ ಫ್ರಾಫಿಟ್ ಟ್ರಕ್ ಯೊಂದು ಲಾರಿಗೆ ಡಿಕ್ಕಿ ಹೊಡೆದ ರಬಸಕ್ಕೆ ಮಹಿಂದ್ರ ನುಜ್ಜು ನುಜ್ಜಾಗಿದೆ. ವಾಹನದಲ್ಲಿದ್ದ ಶಿವಮ್ಮ ಗಂಡ ವೆಂಕಟೇಶ್ 28ವರ್ಷ, ಮೀನಾಕ್ಷಿ ತಂದೆ ಗೋವಿಂದ 14ವರ್ಷ, ಪೂಜಾ ತಂದೆ ವೆಂಕಟೇಶ್ 4ವರ್ಷ ಹಾಗೂ ಪುರುಷೋತ್ತಮ್ ತಂದೆ ವೆಂಕಟೇಶ್ 2ವರ್ಷದ ಒಟ್ಟು ನಾಲ್ಕು ಜನರು ಕೊರಚ ಜನಾಂಗಕ್ಕೆ ಸೇರಿದ್ದು ಗುಡಾರ ನಗರ ಬಳ್ಳಾರಿಗೆ ಸೇರಿದವರಾಗಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ವಾಹನ ಚಾಲಕ ವೆಂಕಟೇಶ್ ತಂದೆ ದುರುಗಪ್ಪ ಸುಮಾರು 28ವರ್ಷ ವಯಸ್ಸಾಗಿದ್ದು ಸ್ಥಿತಿ ಚಿಂತಾಜನಕವಾಗಿದ್ದು ಗಂಭೀರವಾದ ಗಾಯಗಳಾಗಿವೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕಳಿಸಲಾಗಿದೆ.

ಅಪಘಾತ ನಡೆದ ಸ್ಥಳಕ್ಕೆ ಚಳ್ಳಕೆರೆ ಡಿ ವೈ ಎಸ್ ಪಿ ಸತ್ಯನಾರಾಯಣ ರಾವ್, ಮೊಳಕಾಲ್ಮುರು ಆರಕ್ಷಕ ಠಾಣೆ ವೃತ್ತ ನೀರಿಕ್ಷಕರು ನಾಗರಾಜ್, ಮೊಳಕಾಲ್ಮುರು ಠಾಣೆ ಉಪ ನೀರಿಕ್ಷಕರು ಮಹೇಶ್ ಎಸ್ ಹೊಸಪೇಟೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.