ನಾಯಕನಹಟ್ಟಿ : ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ರವರ ನೇತೃತ್ವದಲ್ಲಿ ಸಚಿವ ಸಂಪುಟದಲ್ಲಿ ಮೂರು ಬಾರಿ ಗೆದ್ದಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ರವರಿಗೆ ಮಂತ್ರಿ ಸ್ಥಾನ ಮತ್ತು ಚಿತ್ರದುರ್ಗಜಿಲ್ಲಾ ಉಸ್ತುವಾರಿ ಸಚಿವಸ್ಥಾನ ನೀಡುವಂತೆ ನಾಯಕನಹಟ್ಟಿ ಪಟ್ಟಣದ ರಾಷ್ಟ್ರೀಯಅಹಿಂದ ಸಂಘಟನೆಯ ಎಸ್.ಸಿ, ಎಸ್.ಟಿ ವಿಭಾಗದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಾ||ನಾಗಾರಜ್ ಮೀಸೆ, ಅಂಬೇಡ್ಕರ್ ಕಾಲೋನಿಯ ನಿವಾಸಿಗಳು, ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರು ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿದರು. ನಂತರ ಮಾತನಾಡಿದ ಅವರು, ಚಳ್ಳಕೆರೆ ಕ್ಷೇತ್ರವನ್ನು ಸಾಕಾಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಭಿವೃದ್ದಿ ಪರ ಚಿಂತನೆ ಮಾಡುವ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಬೇಕೆಂದು ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ಎಲ್ಲಾ ಸಮುದಾಯದವರನ್ನು ಜೊತೆಗೂಡಿಸಿ ಒಗ್ಗಟ್ಟಿನಿಂದ ನಾಯಕತ್ವದ ಗುಣ ಹೊಂದಿದ್ದಾರೆ. ಅವರಿಗೆ ಉಪಮುಖ್ಯಮಂತ್ರಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ಚಳ್ಳಕೆರೆ ಇನ್ನೂ ಅಭಿವೃದ್ಧಿಗೆ ಮಾದರಿಯಾಗಲಿದೆ. ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಕ್ಕೆ ತರಲು ಎಲ್ಲಾ ಸಮುದಾಯದವರು ಹಿಂದಿನಿ0ದಲೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. ಚಳ್ಳಕೆರೆ ಕ್ಷೇತ್ರಕ್ಕೆ ಸಾಕಾಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಮೂರು ಬಾರಿ ಶಾಸಕರಾಗಿ ಜನಪ್ರಿಯ ಕೆಲಸಗಳನ್ನು ಮಾಡುವ ಮೂಲಕ ಹೆಸರುವಾಸಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಾದ ರಾಷ್ಟ್ರೀಯ ಅಹಿಂದ ಸಂಘಟನೆಯ ಎಸ್.ಸಿ, ಎಸ್.ಟಿ ವಿಭಾಗದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಾ||ನಾಗಾರಜ್ ಮೀಸೆ, ಹಟ್ಟಿ ಯಜಮಾನ ಜನ್ನ ತಿಪ್ಪೇಸ್ವಾಮಿ, ಗಂಗಪ್ಪ, ಕಾಂಗ್ರೆಸ್ ಮುಖಂಡರುಗಳಾದ ಚೇತನ್, ದಿಲೀಪ್, ಮಹದೇವಪುರ ಕಾಂಟ್ರೆಕ್ಟರ್ ತಿಪ್ಪೇಸ್ವಾಮಿ, ಕಿವುಡು ಮಾರಯ್ಯ, ತೆಂಪಲು ರಾಜ, ಜೋಗಿಹಟ್ಟಿ ತಿಪ್ಪಯ್ಯ, ಹಾಲೇಶ್ ಟಿಕ್ಕಪ್ಪ, ಶಿಡ್ಲಪ್ಪ, ತಿಪ್ಪೇರುದ್ರ, ಶಿಡ್ಲಯ್ಯ, ಡಾ||ಬಿ.ಆರ್.ಅಂಬೇಡ್ಕರ್ ನಗರದ ಯಜಮಾನರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.