LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ನೂರಾರು ಮಹಿಳೆಯರಿಗೆ ಬಾಗಿನ, ಸಿಹಿ ವಿತರಿಸಿದ ಎನ್.ನಾಗರಾಜು

ಶಕ್ತಿ ಯೋಜನೆಯಡಿ ಮಹಿಳೆಯರ 500 ಕೋಟಿ ಉಚಿತ ಸಂಚಾರದ ವಿಜಯೋತ್ಸವ

ಜಯನಗರ : ಶಕ್ತಿ ಯೋಜನೆಯಡಿ 500ಕೋಟಿ ಮಹಿಳೆಯರು ಸರ್ಕಾರದಲ್ಲಿ ಉಚಿತ ಸಂಚಾರ ನಡೆಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಜಯೋತ್ಸವ ಆಚರಿಸುತ್ತಿದ್ದು, ಜಯನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.‌ ನಾಗರಾಜು  ನೂರಾರು ಮಹಿಳೆಯರಿಗೆ ಬಾಗಿನ, ಸಿಹಿ ವಿತರಿಸಿ ಸಂಭ್ರಮಿಸಿದರು.

ಜಯನಗರ 4ನೇ ಬಡಾವಣೆ ಬಿ.ಎಂ.ಟಿ.ಸಿ.ಬಸ್ ನಿಲ್ದಾಣದಲ್ಲಿ ಜಯನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಶಕ್ತಿ ಯೋಜನೆಯ ಎರಡನೇಯ ವರ್ಷದ ವಿಜಯೋತ್ಸವ ಸಮಾರಂಭ ಮತ್ತು ರಾಜ್ಯದಲ್ಲಿ  500 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವ ಸಂಕೇತವಾಗಿ ಬಸ್‌ ಗಳಿಗೆ ಹೂವಿನಿಂದ ಶೃಂಗರಿಸಲಾಗಿತ್ತು. ದೇಶದಲ್ಲಿಯೆ ವಿನೂತನ ದಾಖಲೆಯಾಗಿರುವ ಶುಭ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರಿಗೆ  ಮಹಿಳೆಯರಿಗೆ ಬಾಗಿನ ಮತ್ತು ಸಿಹಿ ವಿತರಿಸಿ, ಬಸ್ ಗೆ ಎನ್.ನಾಗರಾಜು ಪೂಜೆ ನೆರವೇರಿಸಿ, ಚಾಲಕರು, ನಿರ್ವಾಹಕರನ್ನು ಸನ್ಮಾನಿಸಿದರು.

ಬಳಿಕ ಎನ್.ನಾಗರಾಜು ಮಾತನಾಡಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರು ಮತ್ತು ಮಾಜಿ ಶಾಸಕರಾದ ಸೌಮ್ಯರೆಡ್ಡಿ ಸಹಕಾರದಿಂದ ಜನಪ್ರಿಯ ಯೋಜನೆಯಾದ ಮಹಿಳೆಯರ ಬಸ್ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಯಶ್ವಸಿಯಾಗಿದೆ. 500 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆ ಪೂರ್ವ ನೀಡಿದ್ದ ಗ್ಯಾರೆಂಟಿ ಯೋಜನೆಗಳು ಸಮರ್ಥವಾಗಿ ಅನುಷ್ಠಾನಗೊಂಡಿವೆ ಎಂದರು.



ಸರ್ಕಾರದ ವಿನೂತನ ಕ್ರಮಗಳಿಂದಾಗಿ ಆರ್ಥಿಕ ಸಂಕಷ್ಟದಿಂದ ಕೂಟ್ಯಂತರ ಮಹಿಳೆಯರು ದೇವಸ್ಥಾನಗಳು, ತವರು ಮನೆಗಳಿಗೆ ತೆರಳಲು ಆಗುತ್ತಿರಲಿಲ್ಲ. ಅದರೆ ಶಕ್ತಿ ಯೋಜನೆಯ ಲಾಭ ಪಡೆದ ವಿವಿಧ ಜಿಲ್ಲೆಗಳಿಗೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆಯಿಂದ ದೇವಸ್ಥಾನ, ಪ್ರವಾಸಿತಾಣಗಳಿಗೆ ಹೋಗುವುದರಿಂದ ಅಲ್ಲಿನ ಸಣ್ಣ ಉದ್ದಿಮೆದಾರರಿಗೆ ಉದ್ಯೋಗ ಲಭಿಸಿದೆ ಮತ್ತು ಅವರು ಆರ್ಥಿಕವಾಗಿ ಸಬಲರಾಗಿದ್ದಾರೆ. ದೇವಸ್ಥಾನ, ಹೋಟೆಲ್ ಉದ್ಯಮ, ಹೂವು ಮಾರಾಟಗಾರರು, ಚಿಲ್ಲರೆ ವ್ಯಾಪಾರಿಗಳಿಗೆ ಬಂಪರ್‌  ವ್ಯಾಪಾರವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ