LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗಾಗಿ ಮಾ.6 ರಂದು ಪ್ರತಿಭಟನೆ: ಮಂಜುನಾಥ

ಬಳ್ಳಾರಿ: ನಗರದ ರಾಯಲ್ ಪೋರ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್. ರಾಜ್ಯ ಸರ್ಕಾರದಿಂದ  ಗುತ್ತಿಗೆದಾರರಿಗೆ ಬಾಕಿ ಇರುವ 37 ಸಾವಿರ ಕೋಟಿ ರೂ ಬಿಲ್ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯದ  ಗುತ್ತಿಗೆದಾರರಿಗೆ  ವಿವಿಧ ಇಲಾಖೆಗಳಿಂದ ಕಳೆದ ಮೂರು ವರ್ಷದಿಂದ  ಪೆಂಡಿಂಗ್ ಬಿಲ್  37,000 ಕೋಟಿ ರೂ. ಬಾಕಿ ಇದೆ. ನಮಗೆ ದುಡ್ಡಿನ ಸಮಸ್ಯೆ ಇದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಮುಖ್ಯಮಂತ್ರಿಗಳು ನಮ್ಮ ಮೇಲೆ ಅನುಕಂಪ ತೋರಿಸುತ್ತಿಲ್ಲ. ಗುತ್ತಿಗೆದಾರರು ಮನೆಯ ಒಡವೆ ಹಣ ಎಲ್ಲಾ ಅಡ ಇಟ್ಟಿದ್ದೇವೆ ನಮ್ಮ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಹೇಗೆ.

ಒಂದು ವೇಳೆ ಬಿಡುಗಡೆ ಮಾಡದೇ ಇದ್ದರೆ, ನಮ್ಮ ಸಂಘದಿಂದ ಮಾರ್ಚ್ 6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ಮಾಡುತ್ತೇವೆ ಇಲ್ಲಿ  25-30 ಸಾವಿರ ಜನ ಗುತ್ತಿಗೆದಾರರು ಸೇರಿ ಮುಷ್ಕರ ಮಾಡುತ್ತೇವೆಂದರು.



ಕೆಲಸ ಮಾಡಿ ಬಾಕಿ ಹಣಕ್ಕಾಗಿ    31 ಜಿಲ್ಲೆಗಳ ಗುತ್ತಿಗೆದಾರರು  ಕಾಯುವಂತಾಗಿದೆ.  ಎಲ್ಲರಿಗೆ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಲು  ಮೂರು ಬಾರಿ ಸಮಯಕೇಳಿದರೂ ಸಿಎಂ ಸಿದ್ದರಾಮಯ್ಯ ಅವರು ನಮಗೆ ಸಮಯ ನೀಡಿಲ್ಲ

ಸಚಿವ ಸತೀಶ್ ಜಾರಕಿಹೊಳಿ ಇದ್ದುದರಲ್ಲಿ ಉತ್ತಮ ನಮಗೆ ಸ್ಪಂದನೆ ಮಾಡುತ್ತಾರೆ.  ಡಿಕೆ ಶಿವಕುಮಾರ್ ರವರಿಂದ ಯಾವುದೇ ಭರವಸೆಯ ಮಾತು ಬರುತ್ತಿಲ್ಲ

ಹಳೆ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಬಾಕಿ ಹಣ ಹೆಚ್ಚಿಗೆ ಆಗಿದೆ. ಗುತ್ತಿಗೆದಾರರು ಬಹಳ ಕಷ್ಟದಲ್ಲಿ ಇದ್ದಾರೆ, ದಯಮಾಡಿ ರಾಜ್ಯ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಜಿ.ರಮಣರೆಡ್ಡಿ (ರವಿ)    ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ಉಮಾಮಹೇಶ್ವರಗೌಡ ಮೊದಲಾದವರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ