LIVE TV StateNationalPoliticsCrimeEntertainmentSportsEducationFINANCE & TAXATION
Districts

ನಾವಿಬ್ಬರೂ ಒಂದಾಗಲಿದ್ದೇವೆ - ರೆಡ್ಡಿ

ಬಳ್ಳಾರಿ: ನಾವಿಬ್ಬರೂ ಎರಡು ದೇಹ, ಒಂದೇ ಆತ್ಮ ಇದ್ದಂತೆ. ಸಣ್ಣ ಕಾರಣಕ್ಕೆ ಏನೋ ಆಗಿ ಹೋಗಿದೆ. ಶ್ರೀರಾಮುಲು ಜೊತೆಗೆ ಇಬ್ಬರೂ ಒಟ್ಟಿಗೆ ಕುಳಿತು ಸಿನೇಮಾ ನೋಡುತ್ತೇವೆ ಎಂದು ಗಂಗಾವತಿ ಶಾಸಕ ಜಿ.ಜನಾರ್ಧನರೆಡ್ಡಿ ತಮ್ಮ ಸ್ನೇಹಿತ ರಾಮುಲು ಕುರಿತು ಹೇಳಿದರು.

 

ತಮ್ಮ ಏಕೈಕ ಪುತ್ರ ಕಿರೀಟಿ ಅಭಿನಯಿಸಿದ ಜೂನಿಯರ್ ಚಿತ್ರ ವೀಕ್ಷಣೆ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತ, ನನ್ನ ಮತ್ತು ರಾಮುಲು ನಡುವಿನ ಸ್ನೇಹ ಹದಿನೈದನೇ ವಯಸ್ಸಿನಿಂದ ಇರುವಂಥದ್ದು. ನಲವತ್ತು ವರ್ಷಗಳಿಂದ ಜೊತೆಗಿದ್ದೇವೆ. ಶೀಘ್ರದಲ್ಲಿ ಇಬ್ಬರೂ ಜೂನಿಯರ್ ಸಿನಿಮಾ ನೋಡುತ್ತೇವೆ. ನಾಲ್ಕು ದಶಕಗಳಷ್ಟು ಹಳೆಯ ಸ್ನೇಹ ಯಾವುದೋ ಒಂದು ಘಟನೆಯಿಂದ ಬದಲಾವಣೆ ಆಗಲ್ಲ ಎಂದು ಹೇಳಿದರು.



ತಮ್ಮ ಮತ್ತೊಬ್ಬ ಅಣ್ಣ ಜಿ.ಸೋಮಶೇಖರ್ ರೆಡ್ಡಿ, ಪತ್ನಿ ಲಕ್ಷಿö್ಮÃ ಅರಣಾ, ಪುತ್ರಿ ಬ್ರಹ್ಮಿಣಿ, ಪುತ್ರ ಕಿರೀಟಿ ಸೇರಿದಂತೆ ಕುಟುಂಬ ಸಮೇತರಾಗಿ ಜೂನಿಯರ್ ಸಿನಿಮಾವನ್ನು ವೀಕ್ಷಿಸಿದ ಅವರು, ಸಿನೇಮಾ ಸಖತ್ ಆಗಿದೆ, ಚಿತ್ರದಲ್ಲಿ ಎಲ್ಲವೂ ಅದ್ಭುತವಾಗಿ ಮೂಡಿಬಂದಿವೆ. ಚಿತ್ರ ಯಶಸ್ಸು ಗಳಿಸುತ್ತದೆ. ಚಿಕ್ಕಂದಿನಿAದ ಪುನೀತ್ ರಾಜಕುಮಾರ್, ಎನ್‌ಟಿಆರ್ ಅವರನ್ನು ನೋಡುತ್ತಾ ಬೆಳೆದಿರುವ ಕಿರೀಟಿ, ಅವರಿಂದ ಪ್ರೇರಣೆಯಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾನೆ. ಮನೆಯಲ್ಲಿ ರಾಜಕೀಯ ಇದ್ದರೂ ಕೂಡ ಅವನಿಗೆ ರಾಜಕೀಯ ಬಗ್ಗೆ ಆಸಕ್ತಿಯೇ ಇರಲ್ಲಿಲ್ಲ, ಸಿನಿಮಾ ಕಡೆಗೆ ಅವನ ಒಲವು ಹೆಚ್ಚಾಗಿತ್ತು. ಆ ಸಿನಿಮಾ ಹುಚ್ಚು ಅವನನ್ನು ಇಲ್ಲಿಯವರೆಗೆ ತಂದಿದೆ ಎಂದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ