LIVE TV StateNationalPoliticsCrimeEntertainmentSportsEducationFINANCE & TAXATION
Districts

ಎಂಎಸ್ಎಂಇಗಳಿಂದ ಗ್ರಾಮೀಣ ಮತ್ತು ನಗರ ಆರ್ಥಿಕ ಅಂತರ ಕಡಿಮೆ : ಅವ್ವಾರು ಮಂಜುನಾಥ್

ಬಳ್ಳಾರಿ : ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರ್ಥಿಕ ಅಂತರವನ್ನು ಕಡಿಮೆ ಮಾಡಿ ಉದ್ಯೋಗ ಸೃಷ್ಠಿಸುವಲ್ಲಿ ಎಂಎಸ್ಎಂಇಗಳ ಪಾತ್ರ ಮಹತ್ತರವಾದದ್ದು ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ತಿಳಿಸಿದ್ದಾರೆ.

 

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ ಸಮಿತಿ ಹಾಗೂ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಚರಿಸಲ್ಪಟ್ಟ `ಅಂತಾರಾಷ್ಟ್ರೀಯ ಎಂಎಸ್ಎಂಇ' ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ದೇಶದ ಕೈಗಾರಿಕಾ ಉತ್ಪಾದನೆ, ಉದ್ಯೋಗ ಸೃಷ್ಟಿ ಹಾಗೂ ರಫ್ತು ವಹಿವಾಟಿನಲ್ಲಿ ಎಂಎಸ್ಎಂಇ ಕ್ಷೇತ್ರದ ಕೊಡುಗೆ ಮಹತ್ತರವಾದದ್ದು. ನಿಟ್ಟಿನಲ್ಲಿ ಚಾರ್ಟೆರ್ಡ್ ಅಕೌಂಟೆಂಟ್ಸ್ಗಳ ಮಾರ್ಗದರ್ಶನ, ಹಣಕಾಸು ಶಿಸ್ತು ಮತ್ತು ವ್ಯವಹಾರ ನಿರ್ವಹಣಾ ಸಲಹೆಗಳು ಎಂಎಸ್ಎಂಇ ಹಾಗೂ ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.

 

ಸಿಎ. ಸಿರಿಗೇರಿ ಪನ್ನರಾಜ ಅವರು, ಎಂಎಸ್ಎಂಇ ಕ್ಷೇತ್ರವು ಪ್ರಗತಿಯ ಮೂಲ ಕೇಂದ್ರ. ದೇಶದ ಅಭಿವೃದ್ಧಿ, ಆರ್ಥಿಕ ಸ್ಥಿರತೆ ಮತ್ತು ದುಡಿಮೆಯನ್ನು ಎಂಎಸ್ಎಂಇಗಳು ಸಂಕೇತಿಸುತ್ತವೆ. ಉದ್ಯೋಗ ಸೃಷ್ಟಿಸಿ, ಸ್ವಯಂ ಉದ್ಯೋಗ ನಿರ್ಮಾಣ ಮಾಡುವಲ್ಲಿ, ಕ್ರಿಯಾಶೀಲ, ಕ್ರಿಯಾತ್ಮಕವಾದ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಎಂಎಸ್ಎಂಇಗಳ ಪಾತ್ರ ದೊಡ್ಡದು ಎಂದರು.

 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು, ತಂತ್ರಜ್ಞಾನ, ಆಧುನೀಕತೆ ಮತ್ತು ನಾವೀನ್ಯತೆಗಳಲ್ಲಿ ದೇಶದಲ್ಲಿ ಸ್ಟಾರ್ಟ್ಅಪ್ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ಕೇಂದ್ರ ಸರ್ಕಾರ ಎಂಎಸ್ಎಂಇಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಯುವ ಸಮೂಹ ಸದುಪಯೋಗ ಮಾಡಿಕೊಂಡು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಬೇಕು ಎಂದರು.

news_1782619479_0_349.webp

 

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ ಅವರು, ಎಂಎಸ್ಎಂಇಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಕುರಿತು ರೈತರು, ಉದ್ಯಮಿದಾರರು ಹೆಚ್ಚಿನ ಮಾಹಿತಿ ಪಡೆದು, ಸ್ವಯಂ ಉದ್ಯೋಗಿಗಳಾಗಬೇಕು ಎಂದರು.

 

ಸುಧೀರ್ ಚಿತ್ರಗಾರ ಅವರು `ಸಾವಯವ ಉತ್ಪನ್ನಗಳು ಹಾಗೂ ಉತ್ಪನ್ನಗಳ ರಫ್ತಿಗೆ ಅವಕಾಶಗಳು', ಕೃಷಿ ವಿಜ್ಞಾನಿಗಳಾದ ಡಾ. ನವೀನ್ ಅವರು `ಸಮರ್ಥ ಸಾವಯವ ಕೃಷಿ' ಡಾ. ಶಿಲ್ಪ ಹೆಚ್. ಅವರು `ಸಾವಯವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ' ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ, ಉಪನ್ಯಾಸ ನೀಡಿದರು.

 

ಡಾ.ಕಣೆಕಲ್ ಮಾಂತೇಶ್.ವಿ.ವಿ.ಸಂಘದ ಅಧ್ಯಕ್ಷರು, ಬಿ. ಸೋಮಶೇಖರ್, ಜಂಟಿ ನಿರ್ದೇಶಕರು, ಡಿ..ಸಿ, ಬಳ್ಳಾರಿ.,ಸಾವಯವ ಕೃಷಿಕರಾದ ಎಂ. ಗಾಳೆಪ್ಪ ವೈ. ಭೂದಿಹಾಳ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಡಿ. ಸತೀಶ್ ಕುಮಾರ್, ಎಸ್ಬಿಐನ ಮಂಜುನಾಥ್ ಕುಲಕರ್ಣಿ, ಕೆನರಾ ಬ್ಯಾಂಕ್ ಅರುಣ್ ಕುಮಾರ್ .ಜಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಆದಾಯ ತೆರಿಗೆ ಸಮಿತಿಯ ಚೇರ್ಮನ್ ಸಿಎ ಕೆ. ರಾಜಶೇಖರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಸಿಎ ಪುರುಷೋತ್ತಮ ರೆಡ್ಡಿ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಸಿಎ ಶರಣ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಸಿಎ ವಿಶ್ವನಾಥ ಆಚಾರಿ ವಂದನಾರ್ಪಣೆ ಸಲ್ಲಿಸಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ