LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಭಗವಂತ ಮೆಚ್ಚುವಂತಹ ಕಾರ್ಯಗಳು ಮಾಡಬೇಕು

ಮರಿಯಮ್ಮನಹಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಆಶ್ರಯದಲ್ಲಿ ಪಟ್ಟಣದ ಜೈನ ಮಂದಿರದಲ್ಲಿ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತೆ  ಮಾತಾ ಮಂಜಮ್ಮ ಜೋಗತಿ ರವರು ಉದ್ಘಾಟಿಸಿ ಮಾತನಾಡಿ, ಹಾರುವ ಕಾಗೆಗೂ ಕೂಡ ಹಾದರ ಕಟ್ಟುವ ಜನ ನಮ್ಮ ಮಧ್ಯ ಇದ್ದಾರೆ ಹಾಗಾಗಿ ಮಾತಾಡುವವರ ಬಗ್ಗೆ ತಲೆಕೆಡಿಸಿಕೊಳ್ಳದೆ ಧೈರ್ಯವಾಗಿ ನಾವು ಮುನ್ನಗ್ಗಬೇಕು ಎಂದು ಹೇಳಿದರು.

ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ  ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ರವರು ಮಾತನಾಡಿ, ಹುಟ್ಟು ಮತ್ತು ಸಾವಿನ ಮಧ್ಯದ ಜೀವನದಲ್ಲಿ ನಾವು ಭಗವಂತ ಮೆಚ್ಚುವಂತಹ ಕಾರ್ಯಗಳನ್ನು ಮಾಡಬೇಕು ಪರಮಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಅವರ ನೆರಳಲ್ಲಿ ಬದುಕುತ್ತಿರುವ ನಾವು ಪುಣ್ಯವಂತರು ಎಂದರು.



ಹಾಲೇಶ್ವರ ಮಹಾಸ್ವಾಮಿಗಳು ಹಾಲೇಶ್ವರ ಮಠ ಹಗರಿಬೊಮ್ಮನಹಳ್ಳಿ ಇವರು ಮಾತನಾಡಿ, ನಾವು ಧರ್ಮಸ್ಥಳ ಸಂಸ್ಥೆಯ ಅನೇಕ ಕಾರ್ಯಕ್ರಮಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಪ್ರತಿಯೊಂದು ಕಾರ್ಯಗಳು ಕೂಡ ಭಗವಂತ ಮೆಚ್ಚುವಂತಹ ಕಾರ್ಯಕ್ರಮಗಳಾಗಿರುತ್ತವೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಶ್ರೀ ನಿರಂಜನ ಪ್ರಭುದೇವರು ಮಹಾಸ್ವಾಮಿಗಳು ಒಪ್ಪತೇಶ್ವರ ಮಠ ನಾಗಲಾಪುರ, ಶ್ರೀ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಗುರುಪಾದೇಶ್ವರ ಮಠ ಮರಿಯಮ್ಮನಹಳ್ಳಿ, ಪ.ಪಂ.ಅಧ್ಯಕ್ಷ ಆದಿಮನಿ ಹುಸೇನ್ ಭಾಷ, ಪ.ಪಂ.ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಮಂಜುನಾಥ್, ಪಟ್ಟಣದ ಪಿ.ಎಸ್.ಐ.ರಾಮಕೃಷ್ಣ, ಗ್ರಾ.ಪಂ.ಸದಸ್ಯ ಗುಂಡ ಸೋಮಣ್ಣ, ಊರಿನ ಪ್ರಮುಖರು, ಮಂಜುನಾಥ ನಾಯ್ಕ ತಾಲೂಕು ಯೋಜನಾಧಿಕಾರಿ, ರವಿಕುಮಾರ್, ಶ್ರೀಮತಿ ವಾಣಿ, ಶ್ರೀಮತಿ ಗಾಯತ್ರಿ, ಹನುಮಂತ ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.



ತಾಲೂಕು ಯೋಜನಾಧಿಕಾರಿ ಮಂಜುನಾಥ್ ನಾಯಕ್ ಅವರು ಸ್ವಾಗತಿಸಿದರು, ಕೃಷಿ ಅಧಿಕಾರಿ ಚೆನ್ನಪ್ಪ ನಿರೂಪಣೆ ಮಾಡಿದರು ಜ್ಞಾನ ವಿಕಾಸ ಸಮನ್ವಧಿಕಾರಿ ರೇಖಾ ವಂದಿಸಿದರು ಸೇವಾ ಪ್ರತಿನಿಧಿಗಳಾದ ಉಮಾ,ಜಯಲಕ್ಷ್ಮಿ, ಮಂಜುಳಾ ಎಂ, ನಾಗರತ್ನ, ಮಂಜುಳ ಹೆಚ್ ವಿ, ಹಸೀನಾ, ಮೈತ್ರಿ, ಲಕ್ಷ್ಮಿ, ಉಪಸ್ಥಿತರಿದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ