LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಶಿಕ್ಷಣ ರಂಗದಲ್ಲಿ ತಂತ್ರಜ್ಞಾನದಿಂದ ಕೌಶಲ್ಯ ವೃದ್ಧಿ

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ

ಬಳ್ಳಾರಿ:  ತಂತ್ರಜ್ಞಾನ ಯುಗದಲ್ಲಿ ಕೌಶಲ್ಯ ಆಧಾರಿತ ಶಿಕ್ಷಣವನ್ನು ಶೈಕ್ಷಣಿಕ ರಂಗದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಮುಂದಿನ ಪೀಳಿಗೆಯ ಉದ್ಯಮಶೀಲರನ್ನಾಗಿಸಲು ಪ್ರತಿಯೊಬ್ಬ ಉಪನ್ಯಾಸಕರು ನಿರಂತರ ಕಲಿಕಾ ಕ್ರಮಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ  ನಿಕಾಯದ ಮಾಜಿ ಡೀನರಾದ ಪ್ರೊ.ಕೆ.ಈರೇಸಿ ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.



ಭಾರತವು ವೈವಿಧ್ಯಮಯ ರಾಷ್ಟ್ರವಾಗಿದ್ದು, ಮಾಹಿತಿ-ತಂತ್ರಜ್ಞಾನ, ವಿಜ್ಞಾನ, ಆವಿಷ್ಕಾರಗಳ ಸಂಗಮವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಗುರುಕುಲ ಮಾದರಿ ಶಿಕ್ಷಣ, ಪಠ್ಯ ಆಧಾರಿತ ಶಿಕ್ಷಣ, ಅಂತರ್ಜಾಲ ಕೇಂದ್ರಿತ ಶಿಕ್ಷಣ, ಯಂತ್ರಗಳ ಆಧಾರಿತ ಶಿಕ್ಷಣ, ಸಮುದಾಯ ಸಂಶೋಧನೆ ಶಿಕ್ಷಣ ಮಾದರಿ ಆಳವಡಿಸಿಕೊಳ್ಳಲಾಗಿದೆ ಎಂದರು.

ದೇಶವು ಇಂದು ಆಧ್ಯಾತ್ಮಿಕವಾಗಿ, ಭೌತಿಕವಾಗಿ, ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಸಶಕ್ತಗೊಂಡಿದೆ. ದೇಶದ ಪ್ರತಿಯೊಬ್ಬ ನಾಗರಿಕನು ನಿರಂತರ ಕಲಿಕೆ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಭಾಷಣಕಾರರಾಗಿ ಲಂಡನ್‌ನ ಇನ್ಸಿಟ್ಯೂಟ್ ಆಫ್ ಅನಲಿಟಿಕ್ಸ್ನ ಶಿಕ್ಷಣಶಾಸ್ತ್ರ ದ ನಿರ್ದೇಶಕ ಡಾ.ಕ್ಲೇರ್ ವಾಲ್ಷ್ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗನ್ನು ಜಗತ್ತಿನ ಅಗ್ರಗಣ್ಯ ಕಂಪನಿಗಳು ಮತ್ತು ಉದ್ಯಮಿಗಳು ಅಳವಡಿಸಿಕೊಂಡಿದ್ದಾರೆ. ಎಐ ತಂತ್ರಜ್ಞಾನವು ಕೆಲವು ಸಂದರ್ಭಗಳಲ್ಲಿ ಮಾನವನ ಕಲಿಕಾ ಕೌಶಲ್ಯಗಳನ್ನು ಕುಂಠಿತಗೊಳಿಸುತ್ತವೆ. ಆದಾಗ್ಯೂ ಇಂದಿನ ಅಗತ್ಯತೆಗೆ ತಕ್ಕಂತೆ ಎಐ ಬಳಕೆ ಮಾಡಿಕೊಂಡು ಕೆಲಸ ಮಾಡುವ ಅನಿವಾರ್ಯತೆ ಎಲ್ಲೆಡೆ ಮನೆಮಾಡಿದೆ ಎಂದರು.



ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ  ನಿಕಾಯದ ಮಾಜಿ ಡೀನರಾದ ಪ್ರೊ.ಜಯಣ್ಣ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ವಾಣಿಜ್ಯಶಾಸ್ತç ವಿಭಾಗ ಪ್ರಾರಂಭಕ್ಕೆ ಶ್ರಮಿಸಿದ ನೆನಪುಗಳನ್ನು ಮೆಲುಕು ಹಾಕಿದರು. ಇಂದು ವಿಭಾಗದ ಬೆಳವಣಿಗೆ ನೋಡಿ ಸಂತಸವಾಗುತ್ತಿದೆ. ಸಮ್ಮೇಳನವು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ಹಾರೈಸಿದರು.

ವಿವಿಯ ಕುಲಸಚಿವ ಸಿ.ನಾಗರಾಜು ಮಾತನಾಡಿ, ತಂತ್ರಜ್ಞಾನವನ್ನು ಮನುಷ್ಯರೇ ಆವಿಷ್ಕರಿಸುತ್ತಾರೆ. ಇಂದು ಯಂತ್ರಗಳು ಮನುಷ್ಯನನ್ನು ನಿಯಂತ್ರಿಸುವ ಮಟ್ಟಿಗೆ ಮಾರ್ಪಾಡಾಗಿವೆ. ಇದು ಹೀಗೆ ಮುಂದುವರೆದರೆ ಮುಂದೊAದು ದಿನ ಮನುಷ್ಯನ ವಿಚಾರಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನಗಳ ಉಪಯೋಗ ಸದ್ಬಳಕೆಯಿಂದ ಕೂಡಿರಲಿ ಎಂದು ಕಿವಿಮಾತು ಹೇಳಿದರು.



ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಎಐ ಮತ್ತು ಅನಾಲಿಟಿಕ್ಸ್ ಪ್ರಸ್ತುತವಾಗಿ ಪ್ರಾಮುಖ್ಯತೆ ಪಡೆದುಕೊಂಡಿರುವ ಕ್ಷೇತ್ರಗಳಾಗಿವೆ. ವಿವಿಯ ಅಧೀನದ ಎಲ್ಲ ವಾಣಿಜ್ಯಶಾಸ್ತç ಉಪನ್ಯಾಸಕರಿಗೆ ಬಿಸಿನೆಸ್ ಅನಾಲಿಟಿಕ್ಸ್ ವಿಷಯದ ಕುರಿತು ತರಬೇತಿ ಕಾರ್ಯಾಗಾರ ನಡೆಸಲು ಕ್ರಮ ವಹಿಸಲಾಗುವುದು. ಎಐ ಕುರಿತು ಪರಿಣಿತಿ ಪಡೆದುಕೊಂಡು ಕೌಶಲ್ಯ ವೃದ್ಧಿಸಿಕೊಂಡರೆ ವಿದ್ಯಾರ್ಥಿಗಳು ವಿಶ್ವದ ಯಾವ ದೇಶದಲ್ಲಾದರು ಕೆಲಸ ಗಿಟ್ಟಿಸಿಕೊಳ್ಳಬಹುದು ಎಂದರು.

ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ಎಂ.ಸಾಲಿ, ಕಾರ್ಯಕ್ರಮದ ಸಂಚಾಲಕ ಹಾಗು ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸದ್ಯೋಜಾತಪ್ಪ ಸೇರಿದಂತೆ ವಿವಿಧ ದೇಶಗಳ, ಹಲವಾರು ರಾಜ್ಯಗಳ 200ಕ್ಕೂ ಹೆಚ್ಚು ಸಂಶೋಧಕರು, ಉಪನ್ಯಾಸಕ ವರ್ಗ, ವಿವಿಯ ವಿವಿಧ ನಿಕಾಯಗಳ ಡೀನರು, ಬೋಧಕ-ಬೋಧಕೇತರ ವರ್ಗ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ