LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಆ.3: 4ನೇ ವರ್ಷದ ಜೆಎಸ್ಡಬ್ಲ್ಯೂ ಸ್ಟೀಲ್ ಸಿಟಿ ರನ್

ಬಳ್ಳಾರಿ : ಆಗಸ್ಟ್ 3 ರಂದು ನಗರದಲ್ಲಿ ಸ್ಟೀಲ್ ಸಿಟಿ ರನ್ 2025 ರಂದು ನಡೆಯುತ್ತದೆ ಎಂದು  ಬಿ.ಸಿ.ಆರ್.ಎಫ್ ನ ಅಧ್ಯಕ್ಷ ಸೋಮನಾಥ್ ತಿಳಿಸಿದರು.

ನಗರದ ಬಾಲ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು ನಾವು ಈ ಹಿಂದೆ ಆರೋಗ್ಯ ಮತ್ತು ದೈಹಿಕ ದೃಢತೆಗಾಗಿ ಸ್ಟೀಲ್ ಸಿಟಿ ರನ್ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೆವೆ. ಕಳೆದ ಮೂರು ವರ್ಷದಿಂದ ಸ್ಟೀಲ್ ಸಿಟಿ ರನ್ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸುವುದರಿಂದ ಇದನ್ನು ಸಾರ್ವಜನಿಕ ಗೊಳಿಸುವ ಉದ್ದೇಶದಿಂದ 3 ಕಿ.ಮೀ, 5 ಕಿ.ಮೀ ಮತ್ತು 10 ಕಿ.ಮೀ ದೂರದ ಓಟ ಹಮ್ಮಿಕೊಳ್ಳಲಾಗಿದೆ. ಸಂಗನಕಲ್ಲು ರಸ್ತೆಯ ವಿಜಡಮ್ ಶಾಲೆಯಿಂದ ಆರಂಭವಾಗಿದೆ.  ವಿಜಯ್ ಶಾಲಿ  5.25 ಲಕ್ಷದ ಬಹುಮಾನ ಮತ್ತು ಟ್ರೋಪಿ ವಿತರಣೆ ಮಾಡಲಾಗುತ್ತದೆ ಎಂದರು. ನಾಲ್ಕು ಮತ್ತು 5ನೇ ಬಹುಮಾನ ಬಳ್ಳಾರಿ ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಆರೋಗ್ಯ ಮತ್ತು ಫಿಟ್ನೆಸ್ ಗಾಗಿ ಎಲ್ಲರೂ ಈ ಓಟದಲ್ಲಿ  ಭಾಗವಹಿಸಿ ಎಂದು ಕರೆ ನೀಡಿದರು.



 ನೊಂದಣಿ ಶುಲ್ಕ 10 ಕಿ.ಮೀ ಗೆ 500 ರೂ, ಐದು ಕಿಲೋಮೀಟರ್ ಗೆ  400 ರೂ, ಮೂರು ಕಿಲೋಮೀಟರ್ ಸ್ಪರ್ಧೆಗೆ  350 ರೂ. ನಿಗದಿಗೊಳಿಸಲಾಗಿದೆ. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಒಂದು ಟೀ ಶರ್ಟ್, ಮುಂಜಾನೆಯ ಉಪಹಾರ ಮತ್ತು ಓಟದ ಮಧ್ಯದಲ್ಲಿ ಹೆಲ್ತ್ ಚೆಕ್ ಅಪ್ ಕ್ಯಾಂಪ್ ಗಳನ್ನು ಸಹ ಅಳವಡಿಸಲಾಗುವುದು. ನಗರದ ಸಾರ್ವಜನಿಕರು ಈ ಸ್ಟೀಲ್ ಸಿಟಿ ರನ್ ಓಟದ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯವಂತರಾಗಿರಿ ಎಂದು ಅವರು ಸಾರ್ವಜನಿಕರಿಗೆ ತಿಳಿಸಿದರು.

ಈ ಸ್ಪರ್ಧೆಯಲ್ಲಿ ದೇಶದ 14 ರಾಜ್ಯಗಳ 4000 ಅಧಿಕ ಜನ ಪಾಲ್ಗೊಳ್ಳುವ ನೀರಿಕ್ಷೆ ಇದೆ. 1000 ಜನ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ ಇದು ಹೆಮ್ಮೆಯ ವಿಷಯ, ಅತ್ಯಂತ ಮುಖ್ಯವಾಗಿ ಈ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಅಥ್ಲೆಟ್ ನಗರದ ವಿ.ಸುದೀಷ ರೆಡ್ಡಿ ಉದ್ಘಾಟಿಸುವರು. ಈ ಕಾರ್ಯಕ್ರಮವನ್ನು ಜೆಎಸ್ಡಬ್ಲ್ಯೂ ಸೇರಿದಂತೆ ವಿವಿಧ ಸಂಸ್ಥೆಗಳು ಪ್ರಾಯೋಜಕತ್ವವನ್ನು ಹೊಂದಿವೆ. ಆಸಕ್ತರು ಅದೇ ದಿನ ಕೂಡ ನೋಂದಣಿಯನ್ನು ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.



ಈ ಪತಿಕಾಗೋಷ್ಠಿಯಲ್ಲಿ ಪ್ರಶಾಂತ್, ರವಿಶಂಕರ್, ವಿನೋದ್ ಜೈನ್, ಡಾಕ್ಟರ್ ಶಶಿಧರ್, ಡಾಕ್ಟರ್ ಸುಂದರ್,  ಗಿರೀಶ್ ಕುಮಾರ್ ಗೌಡ ಹಾಜರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ