LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟ ಬೆಳಗಾವಿಗೆ: ಪ್ರೊ.ಅಲ್ಲಮಪ್ರಭು

ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ 45ನೇ ದಿನದ ಅನಿರ್ದಿಷ್ಟ ಧರಣಿಯನ್ನು ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು ನಡೆಸಿದರು.

ವೇದಿಕೆಯ ಪ್ರಧಾನ ಸಂಚಾಲಕರು ಪ್ರೊ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ "ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ವಿಸ್ತರಣೆ ವಿರೋಧಿಸಿದ 1.5 ಲಕ್ಷ ಜನರ ಆತಂಕವನ್ನು ದೂರ ಮಾಡಲು ಮುಂದಾಗಬೇಕಾದ ಶಾಸಕರು, ಸಚಿವರು, ಮುಖ್ಯಮಂತ್ರಿಗಳ ಸಲಹೆಗಾರರು ಅಧಿವೇಶನದಲ್ಲಿ ಮೌನ ಮುರಿದು ವಿರೋಧ ಮಾಡುತ್ತಿಲ್ಲ. ಆದರೆ ಕೊಪ್ಪಳ ಮಾಧ್ಯಮ, ಹೋರಾಟಗಾರರು ಕೇಳಿದಾಗ ನಾವೇ ಮೊದಲು ವಿರೋಧ ಮಾಡುತ್ತೇವೆಎನ್ನುತ್ತಾರೆ. ಇವರ ನಿಲುವು ಅನುಮಾನಾಸ್ಪದವಾಗಿದ್ದು, ಜನರ ಆತಂಕ ಹೆಚ್ಚು ಮಾಡಿದೆ. ಆದ್ದರಿಂದ ಈ ಪ್ರತಿಭಟನೆಯನ್ನು ಬೆಳಗಾವಿ ಅಧಿವೇಶನದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಕೊಪ್ಪಳ ಜನರು ದಿ:16.12.2025ರಂದು ಮಂಗಳವಾರ ಬೆಳಗಾವಿ ಅಧಿವೇಶನ ಚಲೋ ನಡೆಸಲು ಕರೆ ಕೊಡಲಾಗಿದೆ"ಎಂದರು.



ಸತ್ಯಾಗ್ರಹದ 50ನೇ ದಿನ ದಿ: 19.12.2025ರಂದು ಬೃಹತ್ ಸಮಾವೇಶ ನಡೆಸಲಾಗುವುದು. ಅಂದು ಮುಖ್ಯ ಅತಿಥಿಗಳಾಗಿ ಬೆಂಗಳೂರು "ಪರಿಸರಕ್ಕಾಗಿ ನಾವು" ಚಳವಳಿಯ ಅಧ್ಯಕ್ಷರು ಎ.ಟಿ.ರಾಮಸ್ವಾಮಿ ಭಾಗವಹಿಸುತ್ತಾರೆ. ಇನ್ನು ಕೆಲವು ಪ್ರಖ್ಯಾತರು ಭಾಗವಹಿಸುತ್ತಿದ್ದು ನಗರ ಮತ್ತು ಬಾಧಿತ ಹಳ್ಳಿಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಧರಣಿಗೆ ಆಗಮಿಸಬೇಕೆಂದು ಕೋರಲಾಗಿದೆ.

ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ಸಿ.ವಿ. ಜಡಿಯವರ, ಸಂಚಾಲಕಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಡಿ.ಎಂ.ಬಡಿಗೇರ್, ಎಸ್.ಬಿ.ರಾಜೂರು, ಶಂಭುಲಿಂಗಪ್ಪ ಹರಗೇರಿ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ತಿಮ್ಮಣ್ಮ ಭೋವಿ ಬೆಂಕಿನಗರ, ಬಿ.ಜಿ.ಕರಿಗಾರ್, ವೈ.ಬಿ.ಶಾಂತಮ್ಮ, ಜಿ.ಬಿ.ಪಾಟೀಲ್, ಮಾರುತಿ ಮ್ಯಾಳಿ ಪಾಲ್ಗೊಂಡರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ