LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ರೆಡ್ಡಿ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯವಿಲ್ಲ-ಬಿ.ಶ್ರೀರಾಮುಲು

ಬಳ್ಳಾರಿ: ಗಂಗಾವತಿ ಶಾಸಕರು ಹಾಗೂ ಬಿಜೆಪಿ ಧುರೀಣ ಗಾಲಿ ಜನಾರ್ದನ್ ರೆಡ್ಡಿ ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು ಬಿಜೆಪಿ ಹಿರಿಯ ನಾಯಕರು, ಮಾಜಿ ಸಚಿವರೂ ಆಗಿರುವ ಬಿ.ಶ್ರೀರಾಮುಲು ಅವರು ಹೇಳಿದರು.

ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು ಮಾತನಾಡುವ ಸಂದರ್ಭದಲ್ಲಿ ಜನಾರ್ಧನ್ ರೆಡ್ಡಿ, ಶ್ರೀರಾಮುಲು ದೆಹಲಿಗೆ ಬನ್ನಿ ಎಂದು ಹೇಳಿದ್ದಾರೆ. ನಮ್ಮಿಬ್ಬರ ರಾಜಿ ಬಹು ದೊಡ್ಡದು ಅಲ್ಲ. ಅದು ಬಿಸಿ ನೀರು ಕುಡಿದಷ್ಟು ಸಲೀಸಾಗಿದೆ ಎಂದು ಸ್ನೇಹಿತರಿಬ್ಬರ ಅಂತರಾಳವನ್ನು ನುಡಿದರು.



ಈ ರಾಮುಲುಅನ್ನು ಬಿಟ್ಟು ರಾಜ್ಯದಲ್ಲಿ ಚುನಾವಣೆ ಮಾಡಲು ಯಾರಿಗೆ ಸಾಧ್ಯವಿಲ್ಲವೆಂದ ಅವರು, ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಮುಂದುವರಿದು ಮಾತನಾಡುತ್ತ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಯಾರು?? ದೆಹಲಿ ನಾಯಕರಾ? ಅಥವಾ ಕೈ ರಾಜ್ಯದ ನಾಯಕರಾ.? ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಸರ್ವ ನಾಶವಾಗಿದೆ. ಮಟಕಾ, ಇಸ್ಪೇಟ್, ಗಾಂಜಾ ಕೇಂದ್ರಬಿAದುವಾಗಿ ಬಳ್ಳಾರಿ ರೂಪುಗೊಂಡಿದೆ ಎಂದರು.

ಈ ರಾಜ್ಯಕ್ಕೆ ಮುಖ್ಯಮಂತ್ರಿಗಳು ಯಾರು? ಸುರ್ಜಿವಾಲರಾ? ಅಥವಾ ಸಿದ್ದರಾಮಯ್ಯನವರಾ? ಎಂದು ನೇರವಾಗಿ ಪ್ರಶ್ನೆ ಮಾಡಿದ ಅವರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸರ್ವನಾಶ ಆಗಿದೆ. ಸರ್ಕಾರದ ಆಯುಷ್ಯ ಮುಗಿದಿದೆ. ಕಾಂಗ್ರೆಸ್ ಪಕ್ಷದ ದೆಹಲಿ ಮುಖಂಡರು, ಶಾಸಕರು, ಸಚಿವರು ಆರೋಗ್ಯವಾಗಿದ್ದಾರಾ? ಇಲ್ಲವಾ? ಎಂದು ತಪಾಸಣಾ ಕೇಂದ್ರ ಮಾಡಿ ಸರ್ಕಾರದ ಆಯುಷ್ಯ ಪರಿಶೀಲನೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ ಇದರಿಂದ ಹೊರತಲ್ಲ ಎಂದ ಅವರು, ಬಳ್ಳಾರಿ ಜಿಲ್ಲೆ ಅಕ್ರಮ ದಂಧೆಗಳಿಗೆ ಕೇಂದ್ರ ಬಿಂದು ಆಗಿದೆ. ಪೊಲೀಸ್ ವ್ಯವಸ್ಥೆ ಕುಂಠಿತಗೊAಡಿದ್ದು ಜಿಲ್ಲೆಯಲ್ಲಿ ಪೊಲೀಸರು ಇದ್ದಾರೋ? ಇಲ್ಲವೋ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಮಗಾರಿಗಳಿಗೆ ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಬರುತ್ತಿದ್ದಾರೆಂದು ನಗರ ಶಾಸಕ ಭರತ್ ರೆಡ್ಡಿ ಅವರು ಕಾಯುತ್ತಿದ್ದು ಆಶ್ಚರ್ಯ ಮೂಡಿಸಿದೆ ಎಂದ ಅವರು ಯಾವ ಮುಖ್ಯಮಂತ್ರಿ ಬರಬೇಕು? ಯಾವಾಗ ಅಭಿವೃದ್ಧಿ ಆಗಬೇಕು ಎನ್ನುವುದು ಪ್ರಶ್ನೆಯಾಗಿದೆಯೇ ಉಳಿದಿದೆ ಎಂದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇನ್ನು ಕೆಲ ಘಟಕಗಳು ಆರಂಭವಾಗದೆ ಜನರಿಗೆ ಸೇವೆ ಸಿಗದೇ ಪರದಾಡುವಂತಾಗಿದೆ. ಯಂತ್ರೋಪಕರಣಗಳನ್ನು ತರಿಸಿದರೂ ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ಇನ್ನೂ ಕೆಲ ಜಿಲ್ಲೆಗಳಲ್ಲಿ, ಹಲವು ನಗರದಲ್ಲಿ ವಿದ್ಯುತ್ ಕಡಿತಗೊಂಡು ಜನರು ತಲ್ಲಣಗೊಂಡಿದ್ದಾರೆ ಎಂದರು.

 



ತುಂಗಭದ್ರ ಡ್ಯಾಮ್ ಗೇಟ್ ಗಳನ್ನು ಸರಿಪಡಿಸಲು ಮತ್ತು ಹೊಸ ಗೇಟುಗಳನ್ನು ಅಳವಡಿಸಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ರೈತವಿರೋಧಿ ಸರ್ಕಾರದಿಂದಾಗಿ ಈ ಭಾಗದ ರೈತರು ಒಂದು ಬೆಳೆಯನ್ನು ಕೂಡ ಸಕ್ರಿಯವಾಗಿ ಬೆಳೆಯಲು ಆಗುತ್ತಿಲ್ಲ. ಮಳೆ ಬಂದು ಜಲಾಶಯ ಭರ್ತಿ ಆದರೂ ರೈತರಿಗೆ ಮೋಸ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಲು ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಅವರ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದರು. ಕೆಲವು ಶಾಸಕರು, ಮಾಜಿ ಸಚಿವರು ಬೂಟಾಟಿಕೆ ಮಾಡುತ್ತಾ ಆಗೊಮ್ಮೆ ಈಗೊಮ್ಮೆ ಬಂದು ಕಿಸ್ ಕೊಟ್ಟುಕೊಳ್ಳುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ ಎಂದು ಕಾಲೆಳೆದರು.

ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಇಬ್ರಾಹಿಂ, ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಗುಡಿಗಂಟಿ ಹನುಮಂತು, ಕೆ.ಹನುಮಂತಪ್ಪ, ಬಿಜೆಪಿ ಮುಖಂಡರಾದ ಕೆ.ವೇಮಣ್ಣ, ಎಸ್.ಮಲ್ಲನಗೌಡ, ಬಿ.ಓಬಳೇಶು, ವೆಂಕಟರಾಮರೆಡ್ಡಿ ಇನ್ನಿತರರು ಇದ್ದರು. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ