LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ತುಂಗಾಭದ್ರ ಜಲಾಶಯ ಭರ್ತಿ: ಸೇತುವೆಗಳು ಮುಳುಗಡೆ

ಮೈದುಂಬಿ ಹರಿಯುತ್ತಿರುವ ಜಲಾಶಯ: ಕಣ್ಣತುಂಬಿಸಿಕೊಳ್ಳುತ್ತಿರುವ ಪ್ರವಾಸಿಗರು

ಕೊಪ್ಪಳ : ಮಲೆನಾಡಿನಲ್ಲಿ ಧಾರಕಾರ ಮಳೆಯಾದ ಹಿನ್ನೆಲೆ ತಾಲೂಕಿನ ಮುನಿರಾಬಾದ್ ಜಲಾಶಯ ಭರ್ತಿಯಾಗಿದ್ದು, 80 ಟಿಎಂಸಿ ಜಲಾಶಯದಲ್ಲಿ  ನೀರು ಸಂಗ್ರಹ ಹೊರತು ಪಡಿಸಿ ಉಳಿದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

 

ಹೌದು! ಮಲೆನಾಡಿನಲ್ಲಿ ಧಾರಕಾರ ಮಳೆಯಾದ ಹಿನ್ನೆಲೆ ತುಂಗಾ ಹಾಗೂ ಭದ್ರಾ ಜಲಾಶಯಗಳು ಭರ್ತಿಯಾಗಿದ್ದು ಈ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು  ಮುನಿರಾಬಾದ್ ನ ತುಂಗಾಭದ್ರ ಜಲಾಶಯಕ್ಕೆ ಹರಿದು ಬರುತ್ತಿದೆ.



ಕಳೆದ ಎರಡು ದಿನಗಳಿಂದ ಜಲಾಶಯದ ಒಳಹರಿವು ಹೆಚ್ಚಳವಾಗುತ್ತಿದೆ.ಸದ್ಯ 1ಲಕ್ಷ 20 ಸಾವಿರ ಕ್ಯೂಸೆಕ್ ನೀರು ಒಳಹರಿವು ಹೆಚ್ಚಳವಾಗಿದ್ದು, ಹೊರಹರಿವು 1ಲಕ್ಷ 60ಸಾವಿರ ಇರುವ ಮಾಹಿತಿ ಇದೆ.

 

ಜಲಾಶಯದ 31 ಗೇಟ್ ಗಳ ಮೂಲಕ ನೀರು ನದಿಗೆ ಹರಿಸಲಾಗುತ್ತಿದೆ. ಗೇಟ್ ನಂ 19 ಕಳಚಿ ಬಿದ್ದ ನಂತರ ತಜ್ಞರ ಸಲಹೆಯಂತೆ 105 ಟಿಎಂಸಿ ಸಾಮರ್ಥ್ಯದ  ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ, ಅಲ್ದೆ 1633 ಅಡಿಯಲ್ಲಿ ಕೇವಲ 1630 ಅಡಿ ನೀರು ನಿಲ್ಲಿಸಲಾಗುತ್ತಿದೆ. ಕಾರಣ ಜಲಾಶಯದ ಉಳಿದ 32 ಗೇಟ್ ಗಳು ಅರ್ಧದಷ್ಟು ಸಾಮರ್ಥ್ಯ ಕಳೆದುಕೊಂಡಿದ್ದು, ಜಲಾಶಯದಲ್ಲಿ ಕೇವಲ 80 ಟಿಎಂಸಿ ಸಂಗ್ರಹಿಸಿ ಉಳಿದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.



[caption id="attachment_24860" align="alignnone" width="2048"] default[/caption]

ಅಪಾರ ಪ್ರಮಾಣದ ನೀರು ನದಿಗೆ ಹರಿಬಿಟ್ಟ ಹಿನ್ನೆಲೆ ಗಂಗಾವತಿ-ಕಂಪ್ಲಿ ಸೇತುವೆ ಮುಳುಗಡೆ ಆಗಿದೆ. ಇನ್ನು ಜಲಾಶಯದ ಗೇಟ್ ಗಳ ಕೆಳಭಾಗದ ಮುನಿರಾಬಾದ್-ಹೊಸಪೇಟೆ ಸಂಪರ್ಕ ಅಥವಾ ಸೆಲ್ಫಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸೇತುವೆ ಮೇಲೆ ಜನರು ಹುಚ್ಚಾಟವಾಡದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ನಿಷೇಧಿಸಲಾಗಿದೆ. ಇನ್ನು ನೀರುಬಿಟ್ಟ ಹಿನ್ನೆಲೆ ನದಿಪಾತ್ರದ ಹಂಪಿ ಹಾಗೂ ಆನೆಗೊಂದಿ ಸ್ಮಾರಕಗಳು ಜಲಾವೃತಗೊಂಡಿವೆ. ನದಿ ಪಾತ್ರದಲ್ಲಿ ಯಾರು ಸಹ ತೆಪ್ಪ ಹಾಗೂ ಜನಜಾನುವಾರುಗಳು ಹೋಗದಂತೆ ಡಂಗೂರ ಸಾರಿಸಿದ್ದು, ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚಿಸಿದೆ.



ಜಲಾಶಯವನ್ನು ಕಣ್ಣ ತುಂಬಿಸಿಕೊಳ್ಳಲು ಅಕ್ಕಪಕ್ಕ ಜಿಲ್ಲೆಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು, ಜಲಾಶಯದ ಕೆಳಗಡೆ ಇಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿಸಿದ್ದಾರೆ. ಆದರೂ ಕೆಲವರು ನೀರು ಹತ್ತಿರಕ್ಕೆ ಹೋಗುತ್ತಿರುವು ಕಂಡು ಬರುತ್ತಿದೆ. ಒಟ್ಟಾರೆ ತುಂಗಾಭದ್ರ ಜಲಾಶಯ ಭರ್ತಿ ಆಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ